NEWSನಮ್ಮಜಿಲ್ಲೆರಾಜಕೀಯ

ಖಾಲಿ ಹಾಳೆ ತುಂಬಿಸಿರುವ ಸಿಎಂ ಬಿಎಸ್‌ವೈರ ಅರಳು ಮರಳು ಬಜೆಟ್: ಎಎಪಿ ನಾಗಣ್ಣ ಲೇವಡಿ

ವರ್ಷಕ್ಕೆ 60 ಸಾವಿರ ಕೋಟಿ ರೂ.ಗಳಿಗೆ ಬಡ್ಡಿ ಏರಿಸಿದ್ದೆ ಬಿಎಸ್‌ವೈ ಬಜೆಟ್‌ನ ಸಾಧನೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿರುವ 2.50 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಕೇವಲ ಖಾಲಿ ಹಾಳೆಗಳನ್ನು ತುಂಬಿಸಿರುವ ಅರಳು ಮರುಳಲ್ಲಿ ಮಾಡಿರುವ ಸಾಲದ ಬಜೆಟ್ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಲೇವಡಿ ಮಾಡಿದ್ದಾರೆ.

ಯಡಿಯೂರಪ್ಪ ಅವರೇ ಹೇಳಿರುವಂತೆ 2.50 ಲಕ್ಷ ಕೋಟಿಯ ಗಾತ್ರದ ಬಜೆಟ್‌ನಲ್ಲಿ ಸರ್ಕಾರದ ಆದಾಯ 1.73 ಲಕ್ಷ ಕೋಟಿ ರೂ. ಆದಾಯ ಮಾತ್ರ. ಅಂದರೆ ಮಿಕ್ಕ 71ಸಾವಿರ ಕೋಟಿ ರೂ. ಸಾಲ ಎಂದಾಯಿತು. ಈಗಾಗಲೇ 4 ಲಕ್ಷ ಕೋಟಿ ರೂ. ಸಾಲವಿದ್ದು ಅದಕ್ಕೆ ಪ್ರತಿ ವರ್ಷ 45 ಸಾವಿರ ಕೋಟಿ ರೂ.ಗಳಷ್ಟು ಬಡ್ಡಿ ಮತ್ತು ಸಾಲ ಕಟ್ಟಲಾಗುತ್ತಿದೆ.

ಈ ಬಜೆಟ್‌ನಲ್ಲಿ ಮತ್ತಷ್ಟು ಸಾಲ ಮಾಡಿ ವರ್ಷಕ್ಕೆ ಬಡ್ಡಿಯನ್ನು 60 ಸಾವಿರ ಕೋಟಿ ರೂ.ಗಳಿಗೆ ಏರಿಸಿದ್ದೆ ಯಡಿಯೂರಪ್ಪ ಅವರ ಬಜೆಟ್‌ನ ಸಾಧನೆ. ಸರ್ಕಾರದ ಆದಾಯ ಹಾಗೂ ಸಾಲದ ಬಡ್ಡಿ ಕಳೆದರೆ ಉಳಿಯುವುದು 1.12 ಸಾವಿರ ಕೋಟಿ.‌ ಈ ಸಂಪತ್ತಿಗೆ ಬಜೆಟ್ ಮಾಡುವ ಅವಶ್ಯಕತೆ ಏನಾದರೂ ಇತ್ತು ಎಂದು ಹೇಳಿದರು.

ಆಹಾರ- ನಾಗರಿಕ ಪೂರೈಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ತಲಾ ಶೇ 1, ಕೃಷಿಗೆ ಶೇ 3, ಕುಟುಂಬವು ಕಲ್ಯಾಣ- ಆರೋಗ್ಯಕ್ಕೆ ಶೇ 4, ಶಿಕ್ಷಣಕ್ಕೆ ಶೇ 11, ಗ್ರಾಮೀಣಾಭಿವೃದ್ಧಿಗೆ ಶೇ 6 ನೀಡಲಾಗಿದೆ. ಈ ಮೇಲಿನ ಅಂಕಿ ಅಂಶಗಳನ್ನು ನೋಡಿದರೆ ಸಾಕು ಸರ್ಕಾರ ಯಾವುದಕ್ಕೆ ಆಧ್ಯತೆ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಬಜೆಟ್‌‌ನಿಂದ ಸರ್ವತೋಮುಖ ಅಭಿವೃದ್ಧಿ ಅಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.

ಎಲ್ಲಾ ಹಳೆಯ ಯೋಜನೆಗಳಿಗೆ ಹೊಸ ಹೆಸರು ನೀಡಿ ನಿಮ್ಮ ಚೇಲಾಗಳು ಸಂಭ್ರಮಪಡುವಂತೆ ಮಾಡಲು ಮಾತ್ರ ಈ ಬೋಗಸ್ ಬಜೆಟ್ ಮಂಡನೆ ಮಾಡಿದ್ದೀರಾ ಎಂದು ಕಿಡಿಕಾರಿದರು.

ದತ್ತಾತ್ರೇಯ ನಗರ ವಾರ್ಡ್ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮೋಹನ್ ಮಾತನಾಡಿ, ಕಳೆದ ಬಾರಿಯ ಬಜೆಟ್‌ನಲ್ಲೂ ಮಹಿಳೆಯರಿಗೆ ಬಸ್‌ಪಾಸ್ ನೀಡುವುದಾಗಿ ಹೇಳಿದ್ದ ನೀವು ಈ ಬಾರಿಯೂ ಅದೇ ಭರವಸೆ ನೀಡಿದ್ದೀರಾ. ನಿರ್ಭಯಾ ಸೇಫ್ ಸಿಟಿ ಹೆಸರಿನಲ್ಲಿ ಮತ್ತೆ ಸಿಸಿ ಕ್ಯಾಮೆರಾ ಅಳವಡಿಸುವುದಾಗಿ ಹೇಳಿ ಮಹಿಳಾ ಸುರಕ್ಷತೆ ಹೆಸರಿನಲ್ಲಿ ಕಣ್ಣೊರೆಸುವ ತಂತ್ರ ಮಾಡಲಾಗಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮಹಿಳೆಯರಿಗೆ ಕೇವಲ ಸಾಲ ನೀಡುತ್ತೇವೆ ಎಂದು ಹೇಳಿರುವ ನೀವು ಸಾಲದ ಬದಲು ಸಹಾಯಧನ ಕೊಡಿ ಇಲ್ಲದಿದ್ದರೆ ಈ ಬಜೆಟ್‌ ಅನ್ನು ಹಿಂಪಡೆದುಕೊಳ್ಳಿ ಎಂದು ಒತ್ತಾಯಿಸಿದರು.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ