ಜೇವರ್ಗಿ: ಪಟ್ಟಣದ ಹಳೆಯ ತಹಸೀಲ ಕಚೇರಿ ಹಿಂಬದಿ ಇರುವ ಕನ್ನಡ ಭವನದಲ್ಲಿ ಬುಧವಾರ (ಮಾ.10) ಬೆಳಗ್ಗೆ 11 ಗಂಟೆಗೆ ಜಾನಪದ ಕಲಾ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಾನಪದ ಕಲಾ ತಂಡಗಳಿಂದ ತತ್ವಪದ, ಜಾನಪದ ಹಾಡುಗಳು, ಪುರವಂತಿಕೆ ಭಜನಾ ಪದಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಸೊನ್ನದ ಡಾ.ಶಿವಾನಂದ ಸ್ವಾಮೀಜಿ ವಹಿಸಲಿದ್ದಾರೆ.
ಉದ್ಘಾಟನೆಯನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಮತ್ತು ತಹಸೀಲ್ದಾರ್ ಸಿದರಾಯ ಬೋಸಗಿ ನೆರವೇರಿಸಲಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪದ್ಮ ಪುರಸ್ಕೃತ ಮಂಜಮ್ಮ ಜೋಗತಿ ನೇತೃತ್ವ ವಹಿಸುವರು.
ರಾಜಶೇಖರ ಸೀರಿ ಅಧ್ಯಕ್ಷತೆ ವಹಿಸುವರು. ಜಾನಪದ ಪರಿಷತ್ ಸದಸ್ಯ ರಾಜೇಂದ್ರ ಯರನಾಳ,ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಿ.ಬಿ.ಪಾಟೀಲ, ವಿಜಯಕುಮಾರ ತೇಗಲತಿಪ್ಪಿ, ಉದ್ಯಮಿಗಳಾದ ಬಸವರಾಜ ಸಾಸಾಬಾಳ, ಬಾಪುಗೌಡ ಪಾಟೀಲ, ವೀರೇಶ ಕಂದಗಲ, ಶಾಂತಲಿಂಗ ಪಾಟೀಲ, ನಾಗಪ್ಪ ಸಜ್ಜನ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಎಸ್.ಕೆ.ಬಿರಾದಾರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ ತಿಳಿಸಿದ್ದಾರೆ.