NEWSನಮ್ಮಜಿಲ್ಲೆನಮ್ಮರಾಜ್ಯಸಿನಿಪಥ

ಕೋಟ್ಯಂತರ ಜನರ ಬೆವರಿನ ಸಂಸ್ಕೃತಿಯ ಪ್ರತಿನಿಧಿ ಜಾನಪದ ವಿವಿ :ಡಾ. ಆರ್‌.ಬಾಲಸುಬ್ರಮಣ್ಯಂ

ಗೊಟಗೋಡಿಯ ಬಯಲು ರಂಗಮಂದಿರದಲ್ಲಿ ಜಾನಪದ ವಿವಿ ಐದನೇ ಘಟಿಕೋತ್ಸವ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಹಾವೇರಿ: ಜಾನಪದ ವಿಶ್ವವಿದ್ಯಾಲಯವು ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾದ ವಿಶ್ವವಿದ್ಯಾಲಯವಾಗಿದೆ. ನಮ್ಮ ಸಂಸ್ಕೃತಿ ಪರಂಪರೆಯ ಮೂಲಧಾತುವಾಗಿರುವ ಈ ನೆಲದ ಕೋಟ್ಯಂತರ ಜನರ ಬೆವರಿನ ಸಂಸ್ಕೃತಿಯ ಪ್ರತಿನಿಧಿಯಾಗಿರುವ ಜಾನಪದ ವಿಶ್ವವಿದ್ಯಾಲಯದ ಬೆಳವಣಿಗೆಗೆ ಸರ್ಕಾರ ಆದ್ಯತೆ ನೀಡಬೇಕು. ಅಗತ್ಯವಾದ ಅನುದಾನವನ್ನು ಒದಗಿಸಬೇಕು ಎಂದು ಸ್ವಾಮಿ ವಿವೇಕಾಂದ ಯೂಥ್ ಮೂಮೆಂಟ್‍ನ ಸಂಸ್ಥಾಪಕ ಡಾ.ಆರ್.ಬಾಲಸುಬ್ರಮಣ್ಯಂ ಹೇಳಿದರು.

ಗೊಟಗೋಡಿಯ ಬಯಲು ರಂಗಮಂದಿರದಲ್ಲಿ ಮಂಗಳವಾರ ಜರುಗಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವದಲ್ಲಿ ಮಾತನಾಡಿ, ಈ ವಿಶ್ವವಿದ್ಯಾಲಯವನ್ನು ವಿಭಿನ್ನವಾಗಿ ಬೆಳೆಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧವಾಗಬೇಕು. ದೂರದರ್ಶಿತ್ವದಿಂದ, ಬದ್ಧತೆಯಿಂದ ವಿವಿಯ ಬೆಳವಣಿಗೆಗೆ ಮುಂದಾಗಬೇಕು. ಜಾಗತಿಕ ಪ್ರಸಿದ್ಧಿಗೆ ಎಲ್ಲ ನೆರವನ್ನು ನೀಡಬೇಕು ಎಂದು ವಿನಯ ಪೂರ್ವಕವಾಗಿ ಆಗ್ರಹಿಸಿಸುತ್ತೇನೆ ಎಂದರು.

ಜಾನಪದ ಕೇವಲ ಮೌಖಿಕ ಪರಂಪರೆ ಮಾತ್ರವಲ್ಲ, ಕೇವಲ ಹಳ್ಳಿಗೆ ಸೀಮಿತವಾಗಿಲ್ಲ. ಜಾನಪದ ವಿಶ್ವ ವ್ಯಾಪಿಯಾಗಿದೆ. ಅದು ನಗರೀಕರಣವನ್ನು, ತಂತ್ರಜ್ಞಾನವನ್ನು ಒಳಗೊಂಡಿದೆ. ಅಲಿಖಿತ ಪರಂಪರೆ ಮಾತ್ರವಲ್ಲ ಲಿಖಿತ ಪರಂಪರೆಯೂ ಒಳಗೊಂಡಿದೆ. ಜಾನಪದವೆಂದರೆ ಹಳ್ಳಿಯದು ಮತ್ತು ಹಳೆದು ಮಾತ್ರ ಎಂಬ ರೂಢಿಮೂಲ ವಿಚಾರಧಾರೆಯನ್ನು ದಾಟಿ ಸೈದ್ಧಾಂತಿಕವಾಗಿ ಬೆಳೆಯಬೇಕಾಗಿದೆ. ಇಂತಹ ವಿಷಯಗಳ ಬಗ್ಗೆ ಜಾನಪದ ವಿಶ್ವವಿದ್ಯಾಲಯ ಗಮನಹರಿಸಬೇಕು.

ಸಂಶೋಧನೆಗೆ ಆದ್ಯತೆ ನೀಡಬೇಕು. ಜನಪದ ಪ್ರದರ್ಶನ ಕಲೆಗಳನ್ನು ಸಮಕಾಲಿನಗೊಳಿಸಬೇಕು ಜಾನಪದ ಅಧ್ಯಯನಕ್ಕಾಗಿ ತೆರೆಯಲಾದ ಏಷ್ಯಾದಲ್ಲಿಯೇ ಏಕೈಕವಾದ ವಿಶ್ವವಿದ್ಯಾನಿಲಯ ಇದಾಗಿದೆ. ಭಾರತದ ಎಲ್ಲ ರಾಜ್ಯಗಳ ಹಾಗೂ ವಿಶ್ವದ ವಿದ್ಯಾರ್ಥಿಗಳು ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದಲ್ಲಿ ಕಲಿಕೆಗೆ ಪ್ರವೇಶ ಪಡೆಯುವಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಕೊರೊನಾ ಕಾಲಘಟ್ಟದಲ್ಲಿರುವ ಇಂದು ಇಡೀ ಜಗತ್ತು ವಿಜ್ಞಾನ ತಂತ್ರಜ್ಞಾನದ ಕಲಿಗೆ ಹೆಚ್ಚಿನ ಆದ್ಯತೆ ನೀಡಿದೆ. ಜೀವನದ ಭದ್ರತೆ ಹಾಗೂ ಜೀವ ಉಳಿಸಿಕೊಳ್ಳಿವಿಕೆಯತ್ತ ಗಮನ ಹರಿಸಿದೆ. ಶಿಕ್ಷಣ ಕ್ಷೇತ್ರದ ಬಯೋ ವಿಜ್ಞಾನದಂತೆ ಜಾನಪದ ವಿಜ್ಞಾನವು ಸಾಮಾಜಿಕ ಜೀವನದಲ್ಲಿ ದೃಢತೆ, ಆರ್ಥಿಕ ಸುಸ್ಥಿರತೆ ತರಬಲ್ಲದು. ಜನರ ಮಾನಸಿಕ ದೃಢತೆಯನ್ನು ತರಬಲ್ಲದು. ಸರ್ಕಾರವು ಇಂತಹ ಕ್ಷೇತ್ರಗಳಿಗೂ ಆದ್ಯತೆ ನೀಡಬೇಕು ಎಂದರು.

ಜನಪದ ಜ್ಞಾನ ಜತೆಗೆ ಪದವಿಯನ್ನೂ ಸಹ ಜಾನಪದ ವಿವಿ ನೀಡುತ್ತಿದೆ. ಪದವಿ ನಮಗೆ ಕೆಲಸ ಕೊಡುವ ಯಂತ್ರ ಎಂದು ಭಾವಿಸಬೇಡಿ. ಒಂದು ಭಾವನಾತ್ಮಕ ಸಂಬಂಧದಿಂದ ಹೋರ ಹೋಗುತ್ತಿದ್ದಿರಿ. ನಿಮ್ಮ ಜೀವನ ಶೈಲಿ, ಕಲೆ, ಆಲೋಚನೆಗಳನ್ನು ವೃದ್ಧಿಪಡಿಸಿಕೊಂಡು ಒಂದು ಪವಿತ್ರವಾದ ಜವಾಬ್ದಾರಿಯನ್ನು ಪಡೆದುಕೊಳ್ಳುತ್ತಿರುವುದರಿಂದ ನಿಮ್ಮ ಭವಿಷ್ಯ ಭವ್ಯವಾಗುತ್ತದೆ ಎಂದು ಪದವಿ ಪಡೆದ ವಿದ್ಯಾರ್ಥಿಗಳಿಗೆ ಹಾರೈಸಿದರು.

ಜಗತ್ತಿನ ಆಧುನಿಕ ಬೆಳವಣಿಗೆಯ ಹೊಸ ಆಯಾಮದ ಹಿನ್ನೆಲೆಯಲ್ಲಿ ಮುಂದಿನ ಐದಾರು ವರ್ಷಗಳಲ್ಲಿ ಜಗತ್ತಿನಲ್ಲಿ ಸ್ಥಾಪಿತವಾದ ಬಹುಪಾಲು ವಿಶ್ವವಿದ್ಯಾಲಯಗಳು ಅಪ್ರಸ್ತುತವಾಗುತ್ತಿವೆ. ಐದುಸಾವಿರ ವಿವಿಗಳ ಪೈಕಿ ಕೇವಲ 50 ವಿವಿಗಳು ಮಾತ್ರ ಉಳಿಯಬಲ್ಲವು ಎಂದು ಹೇಳಲಾಗುತ್ತಿದೆ. ನಮ್ಮ ಬದುಕಿಗೆ ಹತ್ತಿರವಾಗಬಲ್ಲ. ಶಿಕ್ಷಣ ಕ್ರಮಗಳು, ವಿಶ್ವವಿದ್ಯಾಲಯಗಳು ಉಳಿಯಬಲ್ಲವು. ಈ ಆಯಾಮದಲ್ಲಿ ನಮ್ಮ ಬದುಕಿನ ನಮ್ಮ ಸಂಸ್ಕøತಿಗೆ ಹತ್ತಿರವಿರುವ ಜನಪದ ವಿಶ್ವವಿದ್ಯಾಲಯವು ಉಳಿಯಬಲ್ಲದು. ಜಾನಪದ ಅಧ್ಯಯನ ಈ ವಿಶ್ವವಿದ್ಯಾಲಯವನ್ನು ಉಳಿಸಬೇಕು, ಬೆಳೆಸಬೇಕು, ಜಾನಪದ ಎಂದರೆ ಕೇವಲ ಸಂಗೀತ, ನೃತ್ಯ ಎಂದು ನಾವು ಭಾವಿಸರಬಾರದು ಎಂದು ಹೇಳಿದರು.

ಕುಲಪತಿ ಪ್ರೊ.ಡಿ.ಬಿ.ನಾಯಕ, ಕುಲಸಚಿವ ಪ್ರೊ.ಕೆಎನ್ ಗಂಗಾನಾಯಕ್, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್. ಮಂಜುನಾಥ ಸಾಲಿ, ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಪುರಸ್ಕೃತ ವೀರಗಾಸೆ ಕಲಾವಿದ ಎಂ.ಆರ್.ಬಸಪ್ಪ ಸೇರಿದಂತೆ ವಿವಿಧ ನಿಖಾಯಗಳ ಡೀನರು-ಮುಖ್ಯಸ್ಥರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ವಿವಿಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಡಿದ್ದರು.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ