NEWSಕೃಷಿನಮ್ಮರಾಜ್ಯ

ಬೆಂಗಳೂರಿನಲ್ಲಿ ಶೀಘ್ರದಲ್ಲೇ ಕುಕ್ಕುಟ ರೋಗಗಳ ಪತ್ತೆ ಅತ್ಯಾಧುನಿಕ ಕೇಂದ್ರ ಸ್ಥಾಪನೆ : ಡಾ.ಸುಶಾಂತ್ ರೈ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಅತ್ಯಾಧುನಿಕ ಕುಕ್ಕುಟ ರೋಗ ಪ್ರಯೋಗಾಲಯ ಮತ್ತು ಸಂಶೋಧನೆ & ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ (ಕೆವಿಎಎಫ್ಎಸ್‌ಯು) ಅವರಣದಲ್ಲಿ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕರ್ನಾಟಕ ಫೌಲ್ಟ್ರೀ ಫಾರ್ಮರಸ್ ಬ್ರಿಡರ್ಸ್ ಅಸೋಸಿಯೇಷನ್ (ಕೆಪಿಎಫ್‌ಬಿಎ ) ಅಧ್ಯಕ್ಷ ಡಾ.ಸುಶಾಂತ್ ರೈ ಹೇಳಿದ್ದಾರೆ.

ಕುಕ್ಕುಟ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಅಭಿನಂದಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕೇಂದ್ರವು ಕರ್ನಾಟಕ ಮತ್ತು ಇಡೀ ದೇಶಕ್ಕೇ ವರದಾನವಾಗಿದ್ದು, ಇದು ಕುಕ್ಕುಟ ವಿಜ್ಞಾನದಲ್ಲಿ ಆರಂಭಿಕ ಸಂಶೋಧನೆಗಳನ್ನು ನಡೆಸಲಿದೆ ಎಂದು ವಿವರಿಸಿದರು.

ಕೆವಿಎಎಫ್ಎಸ್‌ಯು ಇದಕ್ಕಾಗಿ ತನ್ನ ಕ್ಯಾಂಪಸ್ನಲ್ಲಿ ಒಂದು ಕಟ್ಟಡವನ್ನು ನೀಡಿದ್ದು, ಕೇಂದ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದೆ. ಇದು ಕೆಪಿಎಫ್‌ಬಿಎ ಪಯಣದಲ್ಲಿ ಐತಿಹಾಸಿಕ ಮೈಲುಗಲ್ಲು ಆಗಲಿದೆ ಎಂದು ಹೇಳಿದರು.

ಕೋಳಿಗಳು ಹೇಗೆ ರೋಗವನ್ನು ಕೊರೊನಾ ವೈರಸ್‌ಗಿಂತ ವೇಗವಾಗಿ ಹರಡಬಲ್ಲವು ಎಂಬ ಬಗ್ಗೆ ವದಂತಿಗಳು ಹುಟ್ಟಿಕೊಂಡಿದ್ದನ್ನು ನೆನಪಿಸಿಕೊಂಡ ಡಾ.ಸುಶಾಂತ್ ರೈ, ಇದು ಬ್ರಾಯ್ಲರ್ ಮಾರುಕಟ್ಟೆಯಲ್ಲಿ ಹಿಂದೆಂದಿಗಿಂತಲೂ ವಹಿವಾಟು ಕುಸಿತಕ್ಕೆ ಕಾರಣವಾಯಿತು.

ಕೆಪಿಎಫ್‌ಬಿಎ ಮತ್ತು ದೇಶದ ಇತರ ಸಂಘ ಸಂಸ್ಥೆಗಳು ಈ ವದಂತಿಗಳನ್ನು ತಳ್ಳಿಹಾಕಲು ಮತ್ತು ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸಲು ಶತಪ್ರಯತ್ನ ಮಾಡಬೇಕಾಯಿತು. ಕರ್ನಾಟಕದಲ್ಲಿ ಹಲವು ಮಂದಿ ಅಧಿಕಾರಿಗಳು ಈ ವಲಯಕ್ಕೆ ಬೆಂಬಲ ನೀಡಿದ್ದರಿಂದ ಇದು ಸಾಧ್ಯವಾಯಿತು ಎಂದರು.

ಕೆವಿಎಎಫ್ಎಸ್‌ಯು ಕುಲಪತಿ ಡಾ.ಎಚ್.ಡಿ.ನಾರಾಯಣಸ್ವಾಮಿ ಮಾತನಾಡಿ, ಈ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವು ವಿವಿಧ ರೋಗ ಹರಡುವುದನ್ನು ನಿಭಾಯಿಸಲು ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಕುಕ್ಕುಟ ವಲಯಕ್ಕೆ ಭಾರಿ ಪ್ರಯೋಜನವಾಗಲಿದೆ ಎಂದು ಅಭಿಪ್ರಾಐಪಟ್ಟರು.

ಕೆಪಿಎಫ್‌ಬಿಎ ವತಿಯಿಂದ ಎಂಎಲ್ಸಿ ಗೋವಿಂದರಾಜುಲು, ಕೆವಿಎಎಫ್ಎಸ್‌ಯು ಕುಲಪತಿ ಡಾ.ಎಚ್.ಡಿ.ನಾರಾಯಣಸ್ವಾಮಿ, ಮಂಡಳಿ ಸದಸ್ಯ ಪ್ರೊ.ಎಸ್.ಯತಿರಾಜ್, ಕುಲಸಚಿವ ಡಾ.ಕೆ.ಸಿ.ವೀರಣ್ಣ, ಪಶುಸಂಗೋಪನೆ ಮತ್ತು ಪಶುಚಿಕಿತ್ಸಾ ಸೇವೆಗಳ ವಿಭಾಗದ ನಿರ್ದೇಶ ಡಾ.ಬಿ.ಎನ್.ಶಿವರಾಮ್, ಕರ್ನಾಟಕ ಸಹಕಾರ ಕುಕ್ಕುಟ ಒಕ್ಕೂಟ (ಕೆಸಿಎಪಿಎಫ್) ಅಧ್ಯಕ್ಷ ಡಿ.ಕೆ.ಕಾಂತರಾಜು, ಕೆಸಿಪಿಎಫ್ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಚ್.ಶಿವರುದ್ರಪ್ಪ, ವೆಂಕಟೇಶ್ವರ ಹ್ಯಾಚರೀಸ್ ಪ್ರೈವೇಟ್ ಲಿಮಿಟೆಡ್ನ ಪ್ರಧಾನ ವ್ಯವಸ್ಥಾಪಕ ಎಂ.ಆರ್.ಮಗ್ದುಂ ಮತ್ತು ಕೆಪಿಎಫ್ಬಿಎ ತಾಂತ್ರಿಕ ಸಮಿತಿ ಅಧ್ಯಕ್ಷ ಡಾ.ಜಿ.ಬಿ.ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು.

ಕೆಪಿಎಫ್‌ಬಿಎ ಪ್ರಧಾನ ಕಾರ್ಯದರ್ಶಿ ಡಾ.ಅಂಜನ್ ಗೋಸ್ವಾಮಿ ಸ್ವಾಗತಿಸಿದರು. ಕೆಪಿಎಫ್‌ಬಿಎ ಕಾರ್ಯನಿರ್ವಾಹಕ ಕಾರ್ಯದರ್ಶಿ ಇನಾಯತ್ ಉಲ್ಲಾ ಖಾನ್ ವಂದಿಸಿದರು.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ