CrimeNEWSನಮ್ಮಜಿಲ್ಲೆ

 ಅತ್ಯಾಚಾರ ಆರೋಪಿಯ ಬಂಧನ ಯಾವಾಗ?

ಸರಣಿ ಟ್ವೀಟ್‌ಗಳ ಮೂಲಕ ಸರ್ಕಾರ ಪ್ರಶ್ನಿಸಿದ ಕರ್ನಾಟಕ ಕಾಂಗ್ರೆಸ್

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾಳೆ. ಆರೋಪಿ ರಮೇಶ್ ಜಾರಕಿಹೊಳಿ ಬಂಧನ ಯಾವಾಗ? ಎಂದು ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್‌ಗಳ ಮೂಲಕ ಸರ್ಕಾರವನ್ನು ಈ ಕುರಿತು ಮಂಗಳವಾರ ಪ್ರಶ್ನೆ ಮಾಡಿದೆ.

ಬಿಜೆಪಿ ಕರ್ನಾಟಕ, ಬಸವರಾಜ ಬೊಮ್ಮಾಯಿ ಅವರೇ ಈಗ ಹೇಳಿ ಅತ್ಯಾಚಾರ ಆರೋಪಿಯ ಬಂಧನ ಯಾವಾಗ?” ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ದೇಶದ ಕಾನೂನು ನಿಮಗೆ ಗೊತ್ತಿಲ್ಲ ಎಂದು ಎಚ್ಚರಿಸಿದೆ.

ಸಂತ್ರಸ್ತ ಯುವತಿ ಬೆಂಗಳೂರಿನಲ್ಲಿ ಪ್ರತ್ಯಕ್ಷವಾದರೆ ರಮೇಶ್ ಜಾರಕಿಹೊಳಿ ಗೋಕಾಕ್‌ನಲ್ಲಿದ್ದರು. ಸೋಮವಾರ ಪೊಲೀಸ್ ವಿಚಾರಣೆ ಎದುರಿಸಿದ್ದ ಅವರು ಗೋಕಾಕ್‌ನ ನಿವಾಸಕ್ಕೆ ತೆರಳಿದ್ದರು.

ಮಗಳವಾರ ಮಧ್ಯಾಹ್ನ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿದರು. ಸುಮಾರು ಅರ್ಧಗಂಟೆ ದೇವಾಲಯದಲ್ಲಿದ್ದ ಬಳಿಕ ಗೋಕಾಕ್‌ಗೆ ವಾಪಸ್ ಆಗಿದ್ದಾರೆ.

ಕರ್ನಾಟಕ ಕಾಂಗ್ರೆಸ್ #ArrestRapistRamesh ಹ್ಯಾಷ್ ಟ್ಯಾಗ್ ಮೂಲಕ ಸರಣಿ ಟ್ವೀಟ್ ಮಾಡುತ್ತಿದೆ. ಬಿಜೆಪಿ ಆಡಳಿತದಲ್ಲಿ ಕಾನೂನು ಬದಲಾಗಿದೆ. ಇಲ್ಲಿ ಸಂತ್ರಸ್ತೆಯನ್ನು ಪೊಲೀಸ್ ವಶಕ್ಕೆ ಪಡೆಯಬಹುದು, ಆರೋಪಿ ಸ್ವಇಚ್ಛೆಯಂತೆ ತಿರುಗಾಡಿಕೊಂಡಿರಬಹುದು!! ಎಂದು ಟೀಕಿಸಿದೆ.

ಸಂತ್ರಸ್ತೆ ಬಂದು ನ್ಯಾಯಾಧೀಶರೆದುರು ಹೇಳಿಕೆಯನ್ನೂ ಕೊಟ್ಟಾಯಿತು. ಇಷ್ಟಾದರೂ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ಬೀದಿ ಗೂಳಿಯಂತೆ ತಿರುಗಿಕೊಂಡಿದ್ದಾರೆ, ಇನ್ನೂ ಕೂಡ ಆರೋಪಿಯ ಬಂಧನವಾಗಲಿಲ್ಲ ಏಕೆ #BuildupBommai ಅವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

“ಸಂತ್ರಸ್ತೆ ಕೋರ್ಟಿಗೆ ಬಂದು ಹೇಳಿಕೆ ನೀಡಿದ ಮೇಲೂ ಅತ್ಯಾಚಾರ ಆರೋಪಿಯ ಬಂಧನವಾಗಲಿಲ್ಲವೆಂದರೆ ಏನರ್ಥ ಬಸವರಾಜ ಬೊಮ್ಮಾಯಿ ಅವರೇ?” ಎಂದು ಪ್ರಶ್ನಿಸಿದೆ.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ