ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸೋಂಕು ಕಡಿಮೆ ಆಗಿದೆ ಎಂದು ತೋರಿಸಿಕೊಳ್ಳಲು ಸರ್ಕಾರ ಕೊರೊನಾ ಸೋಂಕಿತರ ಟೆಸ್ಟ್‌ಅನ್ನೇ ಕಡಿಮೆ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ರಾಜ್ಯದಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದ್ದರು ಅದನ್ನು ಮರೆ ಮಾಚಲು ಸರ್ಕಾರ ಲ್ಯಾಬ್‌ಗಳಲ್ಲಿ ಟೆಸ್ಟ್ ಮಾಡುವುದನ್ನೇ ಇಳಿಸುವ ಮೂಲಕ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎಂದು ತೋರಿಸಿಕೊಳಳುವ ಕಳ್ಳಮಾರ್ಗವನ್ನು ಅನುಸರಿಸುತ್ತಿದೆ.
ಸರ್ಕಾರಕ್ಕೆ ಈ ರೀತಿ ಟೆಸ್ಟ್ ಮಾಡುವುದನ್ನೇ ಕಡಿಮೆ ಮಾಡಿದರೆ ಮುಂದಿನ ದಿನಗಳಲ್ಲಿ ಸೋಂಕಿತನ ಸಂಖ್ಯೆ ಲೆಕ್ಕಕ್ಕೇ ಸಿಗದಷ್ಟು ಹೆಚ್ಚಾಗುತ್ತಾರೆ ಎಂಬ ಸಣ್ಣ ಅರಿವು ಇಲ್ಲವೆ ಎಂದು ತಜ್ಞರಾದಿಯಾಗಿದೆ ಸಾಮಾನ್ಯರೂ ಹೇಳುತ್ತಿದ್ದಾರೆ.
ಇಷ್ಟಾದರೂ ಸರ್ಕಾರ ರಾಜ್ಯದಲ್ಲಿ ಕೊರೊನಾ ತಗ್ಗುತ್ತಿದೆ. ಯಾರು ಭಯಪಡಬೇಡಿ ಲಾಕ್‌ಡೌನ್ ಯಶಸ್ವಿಯಾಗುತ್ತಿದೆ ಎಂದು ಉಡಫೆಯ ಹೇಳಿಕೆ ನೀಡುತ್ತಿದ್ದು, ಇದರಿಂದ ರಾಜ್ಯದ ಜನರು ಇನ್ನಷ್ಟು ಸೋಂಕಿಗೆ ಬಲಿಯಾಗುತ್ತಿದ್ದಾರೆ.
ಹೀಗಾಗಿ ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸಿ ಸೋಂಕಿತರನ್ನು ಪತ್ತೆಮಾಡಿ ಟೆಸ್ಟ್ ಮಾಡುವುದಕ್ಕೆ ಮೊದಲು ಮುಂದಾಗಬೇಕಲು ಎಂದು ಒತ್ತಾಯಿಸುತ್ತಿದ್ದಾರೆ.
ಈ ಹಿಂದೆ ಶೇ.10ರಷ್ಟು ಇದ್ದ ಪಾಸಿಟಿವ್ ಪ್ರಕರಣಗಳು ಈಗ ಶೇ.45ಕ್ಕೆ ಏರಿಕೆ ಆಗುತ್ತಿದೆ. ಇಷ್ಟಾದರೂ ಸರ್ಕಾರ ಟೆಸ್ಟ್ ಪ್ರಮಾಣವನ್ನು ತಗ್ಗಿಸಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಯುತ್ತಿದೆ ಎಂದು ಹೇಳಿಕೊಳ್ಳುವ ಮೂಲಕ ತನ್ನ ಬೆನ್ನನ್ನು ತಾನೆ ತಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದು ಭಾರಿ ಅಪಾಯಕಾರಿ ಬೆಳವಣಿಗೆ ಎಂದು ರಾಜ್ಯದ ಜನರಲ್ಲಿ ಆತಂಕ ಮಡುಗಟ್ಟುತ್ತಿದೆ.
ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಸರಿಯಾದ ರೀತಿಯಲ್ಲಿ ಸೋಂಕಿತರನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ಹೆಜ್ಜೆಯಾಕಬೇಕಿದೆ.