ವಿಜಯಪಥ ಸಮಗ್ರ ಸುದ್ದಿ
ಚಿಕ್ಕಮಗಳೂರು: ಮನೆಗೆ ಬಂದ ಕೊರೊನಾ ಸೋಂಕಿತ ಅಣ್ಣನನ್ನು ಸಹೋದರನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರಿನ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ನಡೆದಿದೆ.
ಮಹಾವೀರ (45) ಮೃತ. ಪಾಶ್ವನಾಥ ಕೊಲೆ ಮಾಡಿದ ಆರೋಪಿ.
ಸೋಂಕಿನಿಂದ ಗುಣಮುಖವಾಗದಿದ್ದರೂ ಮಹಾವೀರ ಹಠ ಹಿಡಿದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ.
ಮನೆಗೆ ಬಂದ ಅಣ್ಣನನ್ನು ತಮ್ಮ ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.