ವಿಜಯಪಥ ಸಮಗ್ರ ಸುದ್ದಿ
ಮೈಸೂರು: ತಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಾಗಿ ಕೋವಿಡ್ ಐಸೋಲೇಶನ್ ಕೇಂದ್ರವನ್ನು ಎಲ್‌ಆಂಡ್‌ಟಿ ಟೆಕ್ನಾಲಜಿ ಸರ್ವೀಸಸ್ ಲಿಮಿಟೆಡ್ ಆರಂಭಿಸಿದೆ.
ಕೋವಿಡ್ ಶಂಕಿತರು ಹಾಗೂ ದೃಢಪಟ್ಟ ಉದ್ಯೋಗಿಗಳು ಮತ್ತು ಅವರ ಕುಟುಂಬದ ಆರೋಗ್ಯದ ಜವಾಬ್ದಾರಿಯನ್ನು ಈ ಮೂಲಕ ಲಿಮಿಟೆಡ್ ಹೊತ್ತುಕೊಂಡಿದೆ.
ಸರ್ಕಾರ ಹಾಗೂ ಡಬ್ಲುಎಚ್‌ಒ ಮಾರ್ಗದರ್ಶಿ ಸೂಚಿಯಂತೆ ಐಸೋಲೇಶನ್ ಕೇಂದ್ರವನ್ನು ಮೈಸೂರಿನಲ್ಲಿ ಆರಂಭಿಸಿರುವ ಸಂಸ್ಥೆಯು ತಜ್ಞ ವೈದ್ಯರು, ವೈದ್ಯಕೀಯ ಸಿಬ್ಬಂದಿಯ ನೆರವಿನಿಂದ ಸಿಬ್ಬಂದಿ ಹಾಗೂ ಅವರ ಕುಟುಂಬದ ಆರೈಕೆಗೆ ಮುಂದಾಗಿದೆ.
ಈ ಕೇಂದ್ರದಲ್ಲಿ ದಿನದ 24ತಾಸು ಆಂಬುಲೆನ್ಸ್ ಸೇವೆ, ನರ್ಸಿಂಗ್, ವೈದ್ಯರು ಹಾಗೂ ಅರವೆ ವೈದ್ಯಕೀಯ ಸಿಬ್ಬಂದಿ ಸೇವೆ, ಲಕ್ಷಣಗಳಿಲ್ಲದೆ ಕೋವಿಡ್ ದೃಢಪಟ್ಟ ಸೋಂಕಿತರಿಗೆ ಒಪಿಡಿ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.