ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಪಟ್ಟಣದ ಲಾಕ್ ಡೌನ್ ನಿರ್ವಹಣೆಗೆ ಮತ್ತು ಸ್ವಚ್ಛತೆಗೆ ಹಗಲಿರುಳು ದುಡಿಯುತ್ತಿರುವ ಕೊರೊನಾ ವಾರಿಯರ್ಸ್ ಗಳಾಗಿ ದುಡಿಯುತ್ತಿರುವ ಪೊಲೀಸರು ಹಾಗೂ ಪೌರ ಕಾರ್ಮಿಕರಿಗೆ ಪುರಸಭೆ ಸದಸ್ಯ ವಿ.ಮೋಹನ್ ಭಾನುವಾರ ಮಧ್ಯಾಹ್ನದ ಭೋಜನವನ್ನು ವಿತರಿಸಿದರು.
ಕೋವಿಡ್ -19 ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಯಲ್ಲಿರಲು ಶ್ರಮಿಸುತ್ತಿರುವ ಪೊಲೀಸರಿಗೆ ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ಹಾಗೂ ಸ್ವಚ್ಛತೆಗೆ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಪುರಸಭೆ ಆವರಣದಲ್ಲಿ ಮಧ್ಯಾಹ್ನದ ಭೋಜನವನ್ನು ಸದಸ್ಯ ವಿ.ಮೋಹನ್ ಉಚಿತವಾಗಿ ಕಲ್ಪಿಸಿದ್ದರು.
ಅಧ್ಯಕ್ಷ ಎನ್.ಸೋಮು ಮಾತನಾಡಿ, ಕೊರೊನಾದಂತಹ ಮಾರಕ ವೈರಾಣು ರೋಗಕ್ಕೆ ದೇಶ ಸಿಲುಕಿರುವ ಸಂಕಷ್ಟದ ಕಾಲದಲ್ಲಿ ಜನರ ಆರೋಗ್ಯವನ್ನು ಕಾಪಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಪೊಲೀಸ್ ಹಾಗೂ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ.
ಲಾಕ್ ಡೌನ್ ನಿಂದಾಗಿ ಶ್ರಮಿಕ ಕೊರೊನಾ ವಾರಿಯರ್ಸ್ ಗಳಿಗೆ ಉಪಾಹಾರ ಹಾಗೂ ಭೋಜನ ಸೌಲಭ್ಯವನ್ನು ಕಲ್ಪಿಸಬೇಕು. ಈ ದೆಸೆಯಲ್ಲಿ ನಮ್ಮ ಸದಸ್ಯ ವಿ.ಮೋಹನ್ ಭೋಜನ ಕಲ್ಪಿಸುವ ಮೂಲಕ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಸದಸ್ಯ ವಿ.ಮೋಹನ್ ಮಾತನಾಡಿ, ಕೊರೊನಾ ರೋಗ ನಿಯಂತ್ರಣಕ್ಕೆ ನಾವೆಲ್ಲರೂ ಸ್ವಯಂ ಪ್ರೇರಣೆಯಿಂದಲೇ ಜಾಗೃತರಾಗಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಕಡ್ಡಾಯವಾಗಿ ಮಾಸ್ಕ್ ಬಳಸಬೇಕು ಎಂದು ಕರೆ ನೀಡಿದರು.
ಪುರಸಭಾ ಸದಸ್ಯ ಅಹಮದ್ ಸಯೀದ್, ಮುಖಂಡರಾದ ಗೋಪಿ ಬೋರೇಗೌಡ, ನಾಗರಾಜು(ಮೊಸರು), ಪ್ರದಿ, ನಿಖಿಲ್, ವಿಶ್ವ(ಡಿ. ವಿ. ಡಿ), ವಿಶು, ಸಂದೀಪ್, ಲಕ್ಷ್ಮಣ್, ಶಿವು ಮತ್ತಿತರರು ಇದ್ದರು.