NEWSನಮ್ಮರಾಜ್ಯರಾಜಕೀಯ

ಅನ್ನವಿಲ್ಲದೆ ಯವನಿಗೆ ಶರಣಾಗುತ್ತಿರುವ ಬಡವರಿಗೆ ಒಪ್ಪೊತ್ತಿನ ಊಟವನ್ನಾದರು ಹಾಕುವ ಉದಾರತೆ ಮೆರೆಯಲಿ ಸಿಎಂ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿ ಬಡವರನ್ನು ಆರ್ಥಿಕವಾಗಿ ಇನ್ನಷ್ಟು ದುರ್ಬಲರನ್ನಾಗಿ ಮಾಡುವ ಮೂಲಕ ಸಾವಿನ ಕೂಪಕ್ಕೆ ನೂಕುತ್ತಿದೆ.

ಇದಕ್ಕೆ ಇಂದಿನ ಒಂದು ಉದಾಹರಣೆಯೂ ಪ್ರಮುಖವಾಗಿದೆ. ಹೌದು! ಚಾಮರಾಜನಗರದ ಎಚ್‌.ಮೂಕನಹಳ್ಳಿಯಲ್ಲಿ ಇಂದು ಒಂದೇ ಕುಟುಂಬದ 4 ಮಂದಿ ಜೀವನ ಸಾಗಿಸಲು ಕಷ್ಟವಾದ ಹಿನ್ನೆಲೆಯಲ್ಲಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಕೊರೊನಾ ಸೋಂಕು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಒಂದೇ ಕುಟುಂಬ ನಾಲ್ವರು ಆತ್ಮಹತ್ಯೆ

ಈ ನಾಲ್ವರ ಸಾವಿಗೆ ನೇರಹೊಣೆ ರಾಜ್ಯ ಸರ್ಕಾರವೇ ಆಗಿದೆ. ಅಂದರೆ, ಲಾಕ್‌ಡೌನ್‌ ಹೇರಿರುವ ಸರ್ಕಾರ ಬಡವರ ಕಷ್ಟಕ್ಕೆ ಸ್ಪಂದಿಸಿ ಕನಿಷ್ಠಪಕ್ಷ ಅವರಿಗೆ ಒಪ್ಪೊತ್ತಿನ ಊಟವನ್ನಾದರೂ ಹೊಟ್ಟೆತುಂಬ ನೀಡಿದ್ದರೆ, ಇಂದು ಈ ರೀತಿ ನೂರಾರು ಬಡವರು ತಮ್ಮ ಪ್ರಾಣವನ್ನು ಯವನಿಗೆ ಒಪ್ಪಿಸುತ್ತಿರಲಿಲ್ಲ. ಈ ರೀತಿ ಬಡವರು ವಿವಿಧ ರೀತಿಯಲ್ಲಿ ಸಾವಿಗೆ ಶರಣಾಗುತ್ತಿರುವುದು ದುರಾದೃಷ್ಟವೇ.

ಈಗಲೂ ಕಾಲ ಮಿಂಚಿಲ್ಲ ಒಂದು ದೃಢ ನಿರ್ಧಾರ ತೆಗೆದುಕೊಂಡು ರಾಜ್ಯದಲ್ಲಿರುವ ಪ್ರತಿ ಬಡ ಕುಟುಂಬಗಳಿಗೆ ಶಾಸಕರು, ಜಿಪಂ, ತಾಪಂ ಮತ್ತು ಗ್ರಾಪಂ ಸದಸ್ಯರ ಮೂಲಕ ಹಣದ ಬದಲಿಗೆ ನಿತ್ಯ ಬಳಕೆಯ ವಸ್ತುಗಳನ್ನು ದೇಣಿಗೆ ರೀತಿಯಲ್ಲಾದರೂ ನೀಡಬೇಕು ಎಂದು ನೊಂದ ಸಾವಿರಾರು ಬಡವರ ಪರವಾಗಿ ವಿಜಯಪಥ ಸರ್ಕಾರಕ್ಕೆ ಮನವಿ ಮಾಡುತ್ತಿದೆ.

ಈ ಬಗ್ಗೆ ಸ್ವಲ್ಪವೂ ಯೋಚಿದರೆ ಬಡವರಿಗೆ ಒಂದು ಹೊತ್ತಿನ ಊಟವನ್ನು ಹಾಕುವ ಉದಾರತೆಯನ್ನು (ಬದ್ದತೆ ಮೆರೆಯಬೇಕಿದ್ದ ಸರ್ಕಾರ) ತೋರಬೇಕು. ಇದು ಸರ್ಕಾರದ ಆದ್ಯ ಕರ್ತವ್ಯ ಎಂಬುವುದು ನಮಗೆ ಗೊತ್ತಿದೆ. ಆದರೆ ಇಂದು ಆ ರೀತಿ ಜವಾಬ್ದಾರಿ ತೋರುವುದಕ್ಕೂ ಹಿಂದೆ ಸರಿಯುತ್ತಿರುವುದರಿಂದ ಮನವಿ ಮಾಡುತ್ತಿದ್ದೇವೆ.

ಇನ್ನಾದರೂ ನಾವು ಜನರಿಗೋಸ್ಕರ ಇರುವುದು ಎಂಬುದನ್ನು ಅರಿತು ಅವರ ನೋವಿಗೆ ಸ್ಪಂದಿಸಬೇಕು ಎಂದು ಸಮಸ್ತ ರಾಜ್ಯದ ಬಡವರ ಪರವಾಗಿ ಬೇಡಿಕೊಳ್ಳುತ್ತಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರದ ಅಂಚಿನಲ್ಲಿದ್ದು, ಇಂಥ ಒಂದೊಳ್ಳೆ ಕೆಲಸವನ್ನು ಮಾಡಿಯಾದರೂ ಅಧಿಕಾರದ ಸಾರ್ಥಕತೆಯನ್ನಾದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ.

 

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ