NEWSನಮ್ಮಜಿಲ್ಲೆ

ಗ್ರಾಮೀಣ ಜನರಿಗೆ ಲಸಿಕೆ ನೀಡಲು ಮೊಬೈಲ್ ಮೆಡಿಕಲ್ ಸೌಲಭ್ಯ ಆರಂಭಿಸಿ: ಕುರುಬೂರು ಶಾಂತಕುಮಾರ್

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ : ಕೊರೊನಾ ವ್ಯಾಕ್ಸಿನೇಷನ್‌ನ್ನ ಆನ್ ಲೈನ್ ನೋಂದಣಿ ಮೂಲಕ ನೀಡುವ ಬದಲು ಗ್ರಾಮೀಣ ಜನರಿಗೆ ನೇರವಾಗಿ ನೀಡಲು ಮೊಬೈಲ್ ಮೆಡಿಕಲ್ ಸೌಲಭ್ಯವನ್ನು ಆರಂಭಿಸಬೇಕೆಂದು ರಾಜ್ಯ ಸರ್ಕಾರವನ್ನು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಾಗೂ ಗ್ರಾಮೀಣ ಜನರ ಕೊರೊನಾ ಸೇವಾ ಪಡೆಯ ಸಂಚಾಲಕ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಕಬಿನಿ ಅತಿಥಿಗೃಹ ಆವರಣದಲ್ಲಿ ಬುಧವಾರ ಅಕ್ಷಯಪಾತ್ರ ಫೌಂಡೇಶನ್ ಹಾಗೂ ಗ್ರಾಮೀಣ ಜನರ ಕೊರೊನಾ ಸೇವಾ ಪಡೆಯ ವತಿಯಿಂದ ಫ್ರೆಂಟ್ ಲೈನ್ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಆಹಾರ ಪದಾರ್ಥಗಳ ಕೀಟ್ ವಿತರಿಸಿ ಮಾತನಾಡಿದ ಅವರು ಹಳ್ಳಿಗಾಡಿನ ಪ್ರದೇಶಗಳಲ್ಲಿ ಶೇ.74 ರಷ್ಟು ಜನರು ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಬಳಸುತ್ತಿಲ್ಲ. ಕೊರೊನಾ ವ್ಯಾಕ್ಸಿನ್ ಪ್ರತಿಯೊಬ್ಬರಿಗೂ ಸಿಗುವಂತಾಗಲು ರಾಜ್ಯ ಸರ್ಕಾರ ಮೊಬೈಲ್ ಮೆಡಿಕಲ್ ಸೌಲಭ್ಯವನ್ನು ಕಲ್ಪಿಸಿ ಆನ್ಲೈನ್ ನೋಂದಣಿ ಮಾಡದವರಿಗೂ ವ್ಯಾಕ್ಸಿನೇಷನ್ ನೀಡಬೇಕೆಂದು ಒತ್ತಾಯಿಸಿದರು.

ಮಾರಕ ವೈರಾಣು ರೋಗಕ್ಕೆ ಎಲ್ಲರೂ ಹೆದರಿ ಮನೆಯಲ್ಲೇ ಕುಳಿತು ಬಿಟ್ಟರೆ ಕಾಯಿಲೆಯನ್ನು ಗುಣ ಪಡಿಸುವವರು ಇಲ್ಲದಂತಾಗುತ್ತದೆ. ಸಂಕಷ್ಟದ ಸಂದರ್ಭದಲ್ಲಿಯೂ ಆಶಾ ಕಾರ್ಯಕರ್ತೆಯರು ನಿತ್ಯ ಶಂಕಿತರನ್ನು ಪತ್ತೆಹಚ್ಚಿ, ತಪಾಸಣೆಗೆ ನೆರವಾಗಿ ಹಾಗೂ ಚಿಕಿತ್ಸೆಯನ್ನ ಕೊಡಿಸುವಲ್ಲಿ ದುಡಿಯುತ್ತಿದ್ದಾರೆ. ಸ್ವಚ್ಛತೆ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಇಂತಹ ಫ್ರೆಂಟ್ ಲೈನ್ ವಾರಿಯರ್ಸ್ ಗಳಿಗೆ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ಇವರ ಸೇವೆಗೆ ಅಳಿಲು ಸೇವೆಯನ್ನು ಸಲ್ಲಿಸಲು ಅಕ್ಷಯಪಾತ್ರ ಸಂಸ್ಥೆಯ ಮೂಲಕ ಆಹಾರ ಪದಾರ್ಥಗಳ ಕಿಟ್ ಗಳನ್ನು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ನೀಡುತ್ತಿದ್ದೇವೆ. ಕಬ್ಬು ಬೆಳೆಗಾರರ ಸಂಘ ಹಾಗೂ ರೈತಪರ ಸಂಘಟನೆಗಳಿಂದಲೂ ಗ್ರಾಮೀಣ ಜನರಿಗಾಗಿ ಸೇವಾ ಪಡೆಯನ್ನು ರಚನೆ ಮಾಡಿ ಸೋಂಕಿಗೆ ತುತ್ತಾದ ಸಾವಿರಾರು ಜನರಿಗೆ ಆರೋಗ್ಯ ಸಹಾಯವನ್ನು ಮಾಡುತ್ತಿದ್ದೇವೆ ಎಂದರು.

ಆಡಳಿತರೂಢ ಸರಕಾರ ಹಾಗೂ ಪ್ರತಿಪಕ್ಷಗಳು ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ಮಾಡಿಕೊಳ್ಳುತ್ತಾ ಅವರವರೇ ಕೆಸರನ್ನು ಎರಚಿ ಕೊಳ್ಳುತ್ತಿದ್ದಾರೆ. ಇಂತಹವರಿಂದ ರಾಜ್ಯವಾಗಲಿ ಅಥವಾ ದೇಶವಾಗಲಿ ಉದ್ದಾರವಾಗಲ್ಲ. ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಇನ್ನಿತರ ದುಡಿಯುವ ವರ್ಗದ ಜನರಿಂದಲೇ ಇಂದು ದೇಶ ಅಭಿವೃದ್ಧಿಯಾಗಿ ಬೆಳೆಯುತ್ತಿದೆ. ದೇಶವನ್ನು ಕಟ್ಟುವ ಕಾಯಕದಲ್ಲಿ ನಿಷ್ಠೆಯಿಂದ ದುಡಿಯುತ್ತಿರುವ ಗ್ರಾಮೀಣ ಜನರನ್ನು ರೋಗದಿಂದ ರಕ್ಷಣೆ ಮಾಡಲು ರಾಜ್ಯ ಸರ್ಕಾರ ಇನ್ನಾದರೂ ಗ್ರಾಮೀಣ ಪ್ರದೇಶಗಳತ್ತ ಗಮನಹರಿಸಬೇಕೆಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

ಅಕ್ಷಯಪಾತ್ರ ಫೌಂಡೇಶನಿನ ಜ್ಞಾನೇಶ್ ಮಾತನಾಡಿ, ಭಾರತದಲ್ಲಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದೇಶಗಳಲ್ಲಿ ಸೇವಾ ಕಾರ್ಯಕ್ರಮವನ್ನು ಅಕ್ಷಯ ಪಾತ್ರ ಫೌಂಡೇಶನ್ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ಹಿಂದೆಯೂ ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮಗಳನ್ನು ಹಲವಾರು ಶಾಲೆಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಕೊರೊನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತರಿಗೆ ದಿನಸಿ ಪದಾರ್ಥಗಳ ಸೌಲಭ್ಯವನ್ನು ನೀಡುವಂತೆ ಸಂಘಟನೆಗಳಿಂದ ಸಲಹೆ ಬಂದ ಹಿನ್ನೆಲೆಯಲ್ಲಿ ಇಂತಹ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ರಾಜ್ಯ ಕಬ್ಬು ಬೆಳಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ಎಂ.ದೇವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಸಿದ್ದೇಶ್ ಕುರುಬೂರು, ಪ್ರಧಾನ ಕಾರ್ಯದರ್ಶಿ ಪ್ರಸಾದ ನಾಯಕ, ಮುಖಂಡರಾದ ಹಾಡ್ಯ ರವಿ, ಗೌರಿಶಂಕರ್, ಕುಮಾರ್, ಅಪ್ಪಣ್ಣ, ವೀರೇಶ ಹೆಮ್ಮಿಗೆ ಹಾಗೂ ಇನ್ನಿತರರು ಹಾಜರಿದ್ದರು.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್