NEWS

ಲಿವಿಂಗ್ ಟುಗೆದರ್‌ನಲ್ಲಿದ್ದು ಮಗು ಮಾಡಿಕೊಂಡ ಜೋಡಿ: ಜನ್ಮಕೊಟ್ಟ ಕಂದಮ್ಮನ ಬಿಸಾಕಿತು!

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಲಿವಿಂಗ್ ಟು ಗೆದರ್‌ನಲ್ಲಿದ್ದು, ಮಗು ಮಾಡಿಕೊಂಡಿಕೊಂಡಿದ್ದ 21 ವರ್ಷದ ಹುಡುಗ, ಹುಡುಗಿಗೆ ಈಗ ಮಗು ಬೇಡವಾಗಿದ್ದು, ನಿರ್ದಯಿಗಳಾಗಿ ಮಗುವನ್ನು (ಈಗ ಮಗುವಿಗೆ 25 ದಿನ) ಎಸೆಯಲು ಮುಂದಾಗಿದ್ದರು. ಆ ಮಗು ಈಗ ಕೊಳ್ಳೇಗಾಲದ ಜೀವನಜ್ಯೋತಿ ಟ್ರಸ್ಟ್‌ನಲ್ಲಿ ಆಶ್ರಯ ಪಡೆದಿದೆ.

ಇಂತಹ ಅಮಾನವೀಯ ಘಟನೆಯೊಂದು ಅರಮನೆಗಳ ನಗರಿ ಮೈಸೂರಿನಲ್ಲಿಯೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಕನಿಷ್ಠ ಮಾನವೀಯತೆಯೂ ಇಲ್ಲದೆ, ಈ ಜೋಡಿ ಮಗುವನ್ನು ಎಸೆಯಲು ಮುಂದಾಗಿದ್ದರು. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

21 ವರ್ಷದ ಯುವಕ ಮತ್ತು ಯುವತಿ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ಇಬ್ಬರ ಮನೆಯವರೂ ಆರ್ಥಿಕವಾಗಿ ಸ್ಥಿತಿವಂತರೇ. ಕಾಲೇಜು ದಿನಗಳಲ್ಲಿ ಇಬ್ಬರೂ ಸ್ನೇಹಿತರಾಗಿದ್ದು, ನಂತರ ಪ್ರೀತಿಸಿ ಜತೆಗೆ ಸುತ್ತಾಡಿದ್ದಾರೆ. ಒಂದಷ್ಟು ದಿನ ಒಂದೇ ಮನೆಯಲ್ಲಿ ಒಟ್ಟಿಗೆ ಇದ್ದಿದ್ದಾರೆ. ಈ ಪರಿಣಾಮ ಅವರಿಗೆ ಗಂಡು ಮಗು ಜನಿಸಿದೆ. ಆದರೆ, ಆ ನಂತರ ಇಬ್ಬರಿಗೂ ಮಗು ಬೇಡವಾಗಿದೆ.

ಇದರಿಂದ ಅವರು 12 ದಿನಗಳ ಹಸುಗೂಸನ್ನು ಎಸೆಯಲು ಮುಂದಾದರು. ಇದನ್ನು ತಿಳಿದ ಪರಿಚಯದವರು ಮಗುವನ್ನು ಎಸೆಯಬೇಡಿ, ನಾವು ಸಾಕುತ್ತೇವೆ ಎಂದು ಪಡೆದಿದ್ದಾರೆ. ಈ ಘಟನೆಯಾದ ನಾಲ್ಕೈದು ದಿನಗಳ ಬಳಿಕ ಈ ವಿಷಯ ಮಕ್ಕಳ ಕಲ್ಯಾಣ ಸಮಿತಿಗೆ ಗೊತ್ತಾಗಿದೆ. ತಕ್ಷಣ ಮಧ್ಯ ಪ್ರವೇಶಿಸಿದ ಸಮಿತಿಯ ಸದಸ್ಯರು ಕಾನೂನಿನ ಅನುಮತಿಯಿಲ್ಲದೆ, ಹೀಗೆ ಮಗುವನ್ನು ಇಟ್ಟುಕೊಳ್ಳುವುದು ತಪ್ಪು ಎಂದು ಹೇಳಿ ನಗರದ ಪೊಲೀಸ್ ಠಾಣೆಯೊಂದಕ್ಕೆ ಹೆತ್ತವರನ್ನು ಕರೆಸಿ ವಿಚಾರಣೆ ಮಾಡಿದಾಗ ಇಬ್ಬರೂ ಮಗು ಬೇಡ ಎಂದಿದ್ದಾರೆ.

ಠಾಣೆಯಲ್ಲಿ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಕಾನೂನಿನ ಪ್ರಕಾರ ಇಬ್ಬರಿಗೂ ಮದುವೆಯ ವಯಸ್ಸು ಆಗಿದ್ದು, ಮದುವೆ ಮಾಡಿಕೊಂಡು ಮಗು ಸಾಕುವಂತೆ ಸಲಹೆ ನೀಡಿದ್ದಾರೆ. ಆದರೆ, ಇಬ್ಬರೂ ಕೂಡ ತಮ್ಮ ತಮ್ಮ ಮನೆಗಳಲ್ಲಿ ಒಪ್ಪುವುದಿಲ್ಲ. ನಮಗೆ ಮದುವೆಯಾಗಲೂ ಇಷ್ಟವಿಲ್ಲ ಎಂದು ಹೇಳಿ ಮದುವೆಯಾಗಿ ಮಗು ಸಾಕಲು ನಿರಾಕರಿಸಿದ್ದಾರೆ. ಈ ವಿಷಯ ಎರಡೂ ಮನೆಯವರಿಗೂ ತಿಳಿದಿದೆ. ಆದರೆ, ಅವರೂ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.

ಅಂತಿಮವಾಗಿ ಮೇ 19ರಂದು ಮಗುವನ್ನು ವಶಕ್ಕೆ ಪಡೆದ ಮಕ್ಕಳ ಕಲ್ಯಾಣ ಸಮಿತಿ ಮಗುವನ್ನು ಕೊಳ್ಳೇಗಾಲದ ಜೀವನಜ್ಯೋತಿ ಟ್ರಸ್ಟ್‌ನ ದತ್ತು ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಮನಸ್ಸು ಬದಲಾಯಿಸಿಕೊಂಡು ಮಗುವನ್ನು ವಾಪಸ್‌ ಪಡೆಯಲು ಹೆತ್ತವರಿಗೆ 60 ದಿನಗಳ ಅವಕಾಶವಿದೆ. ಮಗು ಹಸ್ತಾಂತರದ ವೇಳೆ ಎಸ್‌ಜೆಪಿಯು ಪ್ರಸ್ನನಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದಿವಾಕರ್, ಅಪೇಕ್ಷಿತಾ, ಶ್ರುತಿ, ಮಕ್ಕಳ ಕಲ್ಯಾಣ ಸಮಿತಿ ಈ.ಧನಂಜಯ ಎಲಿಯೂರು ಇದ್ದರು.

ಬಹುತೇಕರ ವಿರೋಧದ ನಡುವೆಯೂ ಮದುವೆಯಾಗದೆ ಕಾನೂನು ನಿಗದಿಪಡಿಸಿರುವ ನಿರ್ದಿಷ್ಟ ವಯಸ್ಸಿನ (ಮೇಜರ್) ಗಂಡು ಮತ್ತು ಹೆಣ್ಣು ಲಿವಿಂಗ್ ಟುಗೆದರ್‌ನಲ್ಲಿ ಇರಲು ಮತ್ತು ಮದುವೆಯಾಗದೆ ಮಗು ಪಡೆಯಲು ಕಾನೂನಿನ ಅಡಿಯಲ್ಲಿ ಅವಕಾಶವಿದೆ. ಆದರೆ, ಇಂತಹ ಅವಕಾಶಗಳಿಂದ ಕಂದಮ್ಮಗಳು ಅನಾಥವಾಗುತ್ತಿವೆ. ಅದಕ್ಕೆ ಇದೊಂದು ಪ್ರಕರಣ ಸಾಕ್ಷಿಯಂತಿದೆ.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್