Vijayapatha – ವಿಜಯಪಥ
Friday, November 1, 2024
NEWSಉದ್ಯೋಗದೇಶ-ವಿದೇಶನಮ್ಮರಾಜ್ಯ

ದೆಹಲಿಯ ಕರ್ನಾಟಕ ಭವನದ ವಿವಿಧ 32 ನೇರ ನೇಮಕಾತಿ ಹುದ್ದೆಗಳ ದಾಖಲೆ ಪರಿಶೀಲನೆ, ಪ್ರಾವೀಣ್ಯತೆ ಪರೀಕ್ಷೆ ವೇಳಾಪಟ್ಟಿ ಪ್ರಕಟ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ದೆಹಲಿಯ ಕರ್ನಾಟಕ ಭವನದಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಕಿಚನ್ ಮೇಟ್, ಸಹಾಯಕ ವ್ಯವಸ್ಥಾಪಕರು, ಸ್ವಾಗತಕಾರರು/ದೂರವಾಣಿ ಪ್ರವರ್ಧಕರು, ರೂಂ ಬಾಯ್/ಬೇರರ್, ಪ್ಯೂನ್-ಕಂ-ವಾಚ್ ಮೆನ್ ಹಾಗೂ ಗಾರ್ಡನರ್/ಸ್ವೀಪರ್ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಹೊರಡಿಸಲಾದ ಅಧಿಸೂಚನೆಯಂತೆ,

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳ ಅನ್ವಯಿಸುವ ಹುದ್ದೆಗಳ ದಾಖಲೆ ಪರಿಶೀಲನೆ ಹಾಗೂ ಪ್ರಾವೀಣ್ಯತೆ ಪರೀಕ್ಷೆಗಾಗಿ 1:5ರ ಅನುಪಾತದಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು www.karnatakabhavan.karnataka.gov.in ರಲ್ಲಿ ಜುಲೈ14 ರಂದು ಪ್ರಕಟಿಸಲಾಗಿದೆ.

ದಾಖಲೆ ಪರಿಶೀಲನೆ ಮತ್ತು ಪ್ರಾವೀಣ್ಯತೆ ಪರೀಕ್ಷಾ ವೇಳಾಪಟ್ಟಿ ಇಂತಿದೆ: ಕಿಚನ್ ಮೇಟ್ ಹುದ್ದೆಗಾಗಿ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:29-07-2021ರ ಗುರುವಾರ ಬೆಳಿಗ್ಗೆ 9.30 ರಿಂದ ದಾಖಲೆ ಪರಿಶೀಲನೆ ನಡೆಯಲಿದ್ದು, ಅದೇ ದಿನ ಬೆಳಿಗ್ಗೆ 11 ರಿಂದ ಪ್ರಾವೀಣ್ಯತೆ ಪರೀಕ್ಷೆಯೂ ನಡೆಯಲಿದೆ.

ಸಹಾಯಕ ವ್ಯವಸ್ಥಾಪಕರ ಹುದ್ದೆಗೆ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:29-07-2021ರ ಗುರುವಾರ ಮದ್ಯಾನ್ಹ 2.30 ರಿಂದ ದಾಖಲೆ ಪರಿಶೀಲನೆ ನಡೆಯಲಿದೆ.

ಸ್ವಾಗತಕಾರರು / ದೂರವಾಣಿ ಪ್ರವರ್ಧಕರ ಹುದ್ದೆಗಾಗಿ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:29-07-2021ರ ಗುರುವಾರ ಮದ್ಯಾಹ್ನ 2.30 ರಿಂದ ದಾಖಲೆ ಪರಿಶೀಲನೆ ನಡೆಯಲಿದೆ.

ರೂಂ ಬಾಯ್ / ಬೇರರ್ ಹುದ್ದೆಗಾಗಿ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:30-07-2021ರ ಶುಕ್ರವಾರ ಬೆಳಿಗ್ಗೆ 9.30 ರಿಂದ ದಾಖಲೆ ಪರಿಶೀಲನೆ ನಡೆಯಲಿದ್ದು, ಅದೇ ದಿನ ಬೆಳಿಗ್ಗೆ 11 ಗಂಟೆಗೆ ಪ್ರಾವೀಣ್ಯತೆ ಪರೀಕ್ಷೆ ಇರಲಿದೆ.

ಪ್ಯೂನ್ -ಕಂ-ವಾಚ್ ಮೆನ್ ಹುದ್ದೆಗೆ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:30-07-2021ರ ಶುಕ್ರವಾರ ಮಧ್ಯಾಹ್ನ 2.30ರಿಂದ ದಾಖಲೆಗಳ ಪರಿಶೀಲನೆ ನಡೆಯಲಿದೆ.

ಗಾರ್ಡನರ್/ ಸ್ವೀಪರ್ ಹುದ್ದೆಗೆ ಬೆಂಗಳೂರಿನ ಹೈಗ್ರೌಂಡ್ಸನ ಕುಮಾರ ಕೃಪ ಅತಿಥಿ ಗೃಹ ಇಲ್ಲಿ ದಿನಾಂಕ:30-07-2021ರಂದು ಶುಕ್ರವಾರ ಮಧ್ಯಾಹ್ನ 2.30 ರಿಂದ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.

ದಾಖಲೆ ಪರಿಶೀಲನೆ ಹಾಗೂ ಪ್ರಾವೀಣ್ಯತೆ ಪರೀಕ್ಷೆಗೆ ಪ್ರಕಟಿಸಿರುವ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ವೇಳಾಪಟ್ಟಿಯನುಸಾರ ದಾಖಲೆ ಪರಿಶೀಲನೆ ಮತ್ತು ಪ್ರಾವೀಣ್ಯತೆ ಪರೀಕ್ಷೆಗೆ ಹಾಜರಾಗುವುದು. ನೇಮಕಾತಿ ಅಧಿಸೂಚನೆಯ 7.2ರಲ್ಲಿ ಪ್ರಾವೀಣ್ಯತೆ ಪರೀಕ್ಷೆ ಶೀರ್ಷಿಕೆಯಡಿಯಲ್ಲಿ ತಿಳಿಸಿರುವಂತೆ, ನವದೆಹಲಿಯ ಕರ್ನಾಟಕ ಭವನವು ಅಭ್ಯರ್ಥಿಗಳೊಂದಿಗೆ ವೈಯಕ್ತಿಕವಾಗಿ ಯಾವುದೇ ಪತ್ರ ವ್ಯವಹಾರ ನಡೆಸಲಾಗುವುದಿಲ್ಲ.

ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯ ಎಲ್ಲಾ ಮೂಲ ದಾಖಲೆಗಳು ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ನಿಗದಿತ ಸಮಯಕ್ಕೆ ಹಾಜರಾಗುವಂತೆಯೂ, ಪ್ರಾವೀಣ್ಯತೆ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಭಾವಚಿತ್ರವಿರುವ ಚುನಾವಣಾ ಐಡಿ, ಆಧಾರ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಪಾಸ್ ಫೋರ್ಟ್, ಸರ್ಕಾರಿ ನೌಕರರ ಐಡಿ ಸೇರಿದಂತೆ ಯಾವುದಾದರೊಂದು ಗುರುತಿನ ಚೀಟಿಯನ್ನು ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಹಾಜರಪಡಿಸತಕ್ಕದ್ದೆಂದೂ, ತಪ್ಪಿದಲ್ಲಿ ಪ್ರಾವೀಣ್ಯತೆ ಪರೀಕ್ಷೆಗೆ ಪ್ರವೇಶ ನೀಡಲಾಗುವುದಿಲ್ಲ.

ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರು ದಾಖಲೆ ಪರಿಶೀಲನೆ ಮತ್ತು ಪ್ರಾವೀಣ್ಯತೆ ಪರೀಕ್ಷೆಗೆ ಸಹ ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಆಯ್ಕೆಯಾಗಿದ್ದರೆ, ಅಂತಹವರು ಹುದ್ದೆಗಳ ಆಯ್ಕೆಯ ಆದ್ಯತೆಯನ್ನು (Preference) ಲಿಖಿತವಾಗಿ ಸಲ್ಲಿಸಬೇಕೇಂದು ಪ್ರಕಟಣೆ ತಿಳಿಸಿದೆ.

ದಾಖಲೆ ಪರಿಶೀಲನೆ ಹಾಗೂ ಅನ್ವಯಿಸುವ ಹುದ್ದೆಗಳಿಗಾಗಿ ನಡೆಸುವ ಪ್ರಾವೀಣ್ಯತೆ ಪರೀಕ್ಷೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಬಾಧಿತರಾಗಬಹುದಾದ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಮತ್ತು ಪ್ರಾವೀಣ್ಯತೆ ಪರೀಕ್ಷೆಗಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದರೆ, ಜುಲೈ 26ರ ಸಂಜೆ 5.30ರೊಳಗಾಗಿ ಅಧ್ಯಕ್ಷರು, ನೇರ ನೇಮಕಾತಿ ಆಯ್ಕೆ ಸಮಿತಿ ಹಾಗು ಉಪ ನಿವಾಸಿ ಆಯುಕ್ತರು (ಎಚ್.ಕೆ), ಕರ್ನಾಟಕ ಭವನ, ಕಾವೇರಿ, ಸಂಖ್ಯೆ 10, ಕೌಟಿಲ್ಯ ಮಾರ್ಗ್, ಚಾಣಕ್ಯಪುರಿ, ನವದೆಹಲಿ-110021 ಇವರಿಗೆ ತಲುಪುವಂತೆ ಲಿಖಿತವಾಗಿ ಅಥವಾ [email protected] ಇ-ಮೇಲ್ ಮೂಲಕವೂ ಕಳುಹಿಸಬಹುದಾಗಿದೆ.

ನಿಗದಿತ ಸಮಯದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧ್ಯಕ್ಷರು, ನೇರ ನೇಮಕಾತಿ ಆಯ‍್ಕೆ ಸಮಿತಿ ಹಾಗೂ ನವದೆಹಲಿಯ ಕರ್ನಾಟಕ ಭವನದ ಉಪ ನಿವಾಸಿ ಆಯುಕ್ತರೂ ಆದ ಎಚ್.ಪ್ರಸನ್ನ ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...