Please assign a menu to the primary menu location under menu

NEWSಉದ್ಯೋಗದೇಶ-ವಿದೇಶ

ಭವಿಷ್ಯದಲ್ಲಿ ಅಗತ್ಯ ಕೌಶಲಗಳ ಕೊರತೆಯಿಂದ ನಿರುದ್ಯೋಗ : ಸಮೀಕ್ಷೆಯಿಂದ ಬಹಿರಂಗ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಭವಿಷ್ಯದಲ್ಲಿ ಅಗತ್ಯ ಇರುವ ಕೌಶಲಗಳಲ್ಲಿ ತರಬೇತುಗೊಳಿಸಿದರೆ ತಮ್ಮ ವೃತ್ತಿ ಬದುಕಿನಲ್ಲಿ ಅಮೋಘವಾದ ಯಶಸ್ಸು ಸಾಧಿಸಬಹುದು ಎಂದು ಸಮೀಕ್ಷೆಯೊಂದರಲ್ಲಿ ಭಾಗವಹಿಸಿದ್ದವರ ಪೈಕಿ 10ಕ್ಕೆ 7 ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಇರುವ ಕೌಶಲದ ಕೊರತೆ ಮತ್ತು ವೃತ್ತಿಪರರಿಗೆ ಇರುವ ಸವಾಲುಗಳ ಮಧ್ಯೆ ಇರುವ ಕಂದಕವನ್ನು ಗಮನದಲ್ಲಿ ಇಟ್ಟುಕೊಂಡು ಉನ್ನತ ಶಿಕ್ಷಣ ಕಂಪನಿ ಇಮ್ಯಾಜಿನ್ ಎಕ್ಸ್‌ಪಿ (ImaginXP) ಸಮೀಕ್ಷೆಯೊಂದನ್ನು ನಡೆಸಿತ್ತು.

141 ಕಾರ್ಪೊರೇಟ್​ನ 1100 ಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಇದರಿಂದ ಗೊತ್ತಾಗಿರೋದು ಏನೆಂದರೆ, ಶೇ. 33ರಷ್ಟು ಯುವ ಜನರಿಗೆ ಸದ್ಯಕ್ಕೆ ನಿರುದ್ಯೋಗ ಸಮಸ್ಯೆ ಎದುರಾಗುವುದಕ್ಕೆ ಕಾರಣ ಭವಿಷ್ಯಕ್ಕೆ ಅಗತ್ಯ ಇರುವ ಕೌಶಲಗಳು ಇಲ್ಲದಿರುವುದು.

ಇವತ್ತಿಗೆ ಭಾರತದ ಜಿಇಆರ್‌ ಶೇ 26.6ರಷ್ಟಿದೆ. ಅದರರ್ಥ, ಜನಸಂಖ್ಯೆಯಲ್ಲಿ ಶೇ.74ರಷ್ಟು 18ರಿಂದ 23 ವರ್ಷದವರು (ಉನ್ನತ ಶಿಕ್ಷಣ ಅರ್ಜಿದಾರರಾಗಲು ಸೂಕ್ತ ವಯಸ್ಸಿನವರು) ಉನ್ನತ ಶಿಕ್ಷಣ ವ್ಯವಸ್ಥೆ ಅಡಿಯಲ್ಲಿ ಇಲ್ಲ.

ಅದಕ್ಕೆ ಕಾರಣ ಇಷ್ಟೇ.. ಒಂದೋ ಉನ್ನತ ಶಿಕ್ಷಣ ಅವರ ಕೈಗೆಟುಕುವಂತೆ ಇಲ್ಲ ಅಥವಾ ಪಡೆಯುವುದಕ್ಕೆ ಆಗುತ್ತಿಲ್ಲ. ಇದರ ಜತೆಗೆ 2023ರ ಹೊತ್ತಿಗೆ ಭಾರತಕ್ಕೆ ಡಿಜಿಟಲ್ ಕೌಶಲ ಇರುವಂಥ 27 ಲಕ್ಷ ಮಂದಿಯ ಅಗತ್ಯ ಬರುತ್ತದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ.53ರಷ್ಟು ಮಂದಿ ಒಪ್ಪಿಕೊಂಡಿರುವಂತೆ, ತಮ್ಮಿಚ್ಛೆಗೆ ತಕ್ಕಂತೆ ಉದ್ಯೋಗ ಹುಡುಕಲು ಸಾಧ್ಯವಾಗಿಲ್ಲ. ಇನ್ನು ತಮ್ಮ ಪದವಿ ಪೂರ್ಣ ಆದ ಮೇಲೆ ಅಂದುಕೊಂಡಂತೆ ವೇತನ ಬರುತ್ತಿಲ್ಲ ಎಂದಿರುವವರ ಪ್ರಮಾಣ ಶೇ. 60ರಷ್ಟು.

ಇಮ್ಯಾಜಿನ್ ಎಕ್ಸ್‌ಪಿ ಸ್ಥಾಪಕ ಹಾಗೂ ಸಿಇಒ ಶಶಾಂಕ್ ಶ್ವೇತ್ ಎಕನಾಮಿಕ್ ಟೈಮ್ಸ್ ಜತೆಗೆ ಮಾತನಾಡುತ್ತಾ, ಭವಿಷ್ಯದಲ್ಲಿ ಅಗತ್ಯ ಬರುವ ಕೌಶಲಗಳನ್ನು ಯುವಜನರಿಗೆ ವಿಸ್ತರಿಸುತ್ತಾ, ಇಮ್ಯಾಜಿನ್ ಎಕ್ಸ್‌ಪಿ ಏನನ್ನಾದರೂ ಬದಲಿಸಬಹುದಾದಂಥ ಉದ್ಯೋಗಿ ವರ್ಗವನ್ನು ಸೃಷ್ಟಿಸುತ್ತಿದೆ.

ವಿವಿಧ ತಂತ್ರಜ್ಞಾನಗಳಲ್ಲಿ ಅವರು ಕೇವಲ ಕೌಶಲ ಇರುವವರಷ್ಟೇ ಅಲ್ಲ. ಅದರ ಜತೆಗೆ ಆವಿಷ್ಕಾರಗಳ ಬಗ್ಗೆ ಕೂಡ ಉತ್ಸಾಹ ಇರುತ್ತದೆ. ಇದರಿಂದ ಸಹಜವಾಗಿಯೇ ಉದ್ಯೋಗವನ್ನು ಅರಸಿ ಹೋಗುವವರು ಉದ್ಯೋಗ ಸೃಷ್ಟಿಸುವವರಾಗುತ್ತಾರೆ ಎಂದು ಹೇಳಿದ್ದಾರೆ.

ಉದ್ಯೋಗ ಇದ್ದರೂ ಅದಕ್ಕೆ ಅಗತ್ಯವಾದ ಕೌಶಲ ಇರುವವರು ದೊರೆಯುತ್ತಿಲ್ಲ. ಕಾಲೇಜುಗಳಲ್ಲಿ ಪದವಿ ಪಡೆದ ನಂತರವೂ ಕೆಲಸಕ್ಕೆ ಪೂರಕವಾದ ಕೌಶಲಗಳನ್ನು ಕಲಿಸುವಲ್ಲಿ ಹಾಗೂ ಸಿದ್ಧಗೊಳಿಸುವಲ್ಲಿ ಶಿಕ್ಷಣ ವ್ಯವಸ್ಥೆ ವಿಫಲ ಆಗುತ್ತಿದೆ ಎಂಬ ಆಕ್ಷೇಪ ವ್ಯಾಪಕವಾಗಿದೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...