ಬೆಂಗಳೂರು: ತಮೋಹ ಆರ್ಟ್ಸ್ ಫೌಂಡೇಷನ್ ಡಿ. 4 ರಂದು ವಿಸ್ತೃತಿ ನೃತ್ಯೋತ್ಸವ- 2021ಹಮ್ಮಿಕೊಂಡಿದೆ.
ಬೆಂಗಳೂರಿನ ಮಲ್ಲೇಶ್ವರ 14ನೇ ಕ್ರಾಸ್ನಲ್ಲಿರುವ ಸೇವಾ ಸದನದಲ್ಲಿ ಅಂದು ಬೆಳಗ್ಗೆ 9ಕ್ಕೆ ಈ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದೆ.
ಶಾಂತಲಾ ಆರ್ಟ್ಸ್ ಅಕಾಡೆಮಿ ಕಲಾ ನಿರ್ದೇಶಕರಾದ ವಿದ್ವಾನ್ ಪುಲಿಕೇಶಿ ಕಸ್ತೂರಿ ನೃತ್ಯೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರಾದ ತಮೋಹ ಆರ್ಟ್ಸ್ ಫೌಂಡೇಷನ್ ನಿರ್ದೇಶಕಿ ವಿದುಷಿ ಗಾಯತ್ರಿ ಮಯ್ಯ ತಿಳಿಸಿದ್ದಾರೆ.
ಭರತನಾಟ್ಯ ಕಲಾವಿದರಾದ ಅತುಲಾ ಚಂದ್ರಶೇಖರ್, ಶಶಾಂಕ ಕಿರಣ್ ನಾಯರ್, ಮಯೂರಿ ಕಾರಂತ, ಪಿ. ಆದ್ಯಾ ಮಯ್ಯ, ಸಿ. ಜಯಲತಾ, ವಿದ್ವಾನ್ ವಿನ್ಸೆಂಟ್ ಪೌಲ್, ಪ್ರಶಾಂತಿ ಸತೀಶ್, ವಿದುಷಿ ಮಹಿಮಾ ಹರೀಶ್ ಕಲಾ ಪ್ರದರ್ಶನ ನೀಡಲಿದ್ದಾರೆ.
ಕಾರ್ಯಕ್ರಮದ 2ನೇ ಹಂತದಲ್ಲಿ ಯಕ್ಷದೇಗುಲದ ಶ್ರೀರಾಮ ಹೆಬ್ಬಾರ್ ಅವರಿಂದ ವಿಶೇಷ ಯಕ್ಷಗಾನ, ಮೇಘನಾ ಚಂದ್ರಮೌಳಿ ಮತ್ತು ಪ್ರಿಯಾಂಕಾ ರಾಮಚಂದ್ರಯ್ಯ ಅವರಿಂದ ಕೂಚಿಪುಡಿ ನೃತ್ಯವಿದೆ.
ವಿದ್ವಾನ್ ಮೈಸೂರು ಬಿ. ನಾಗರಾಜ್ ಶಿಷ್ಯೆಯರಿಂದ ವಿಶೇಷ ಕಥಕ್ ನೃತ್ಯ, ಮಹಿಮಾ ದಶ್ ಮತ್ತು ನಂದನಾ ಶಶಿಕುಮಾರ್ರಿಂದ ಒಡಿಸ್ಸಿ ನೃತ್ಯ, ಚೈತ್ರಾ ಅನಂತ್ ಮತ್ತು ಎಂ. ರಾಜೇಶ್ವರಿ ಭರತನಾಟ್ಯ ಪ್ರಸ್ತುತಿ ಸಂಪನ್ನಗೊಳ್ಳಲಿದೆ.
ಕಲಾ ರಸಿಕರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ವಿದುಷಿ ಗಾಯತ್ರಿ ಮಯ್ಯ ವಿನಂತಿಸಿದ್ದಾರೆ.