NEWSನಮ್ಮಜಿಲ್ಲೆಸಿನಿಪಥ

ತಮ್ಮ ಸಂಭಾವನೆ ಬಹಿರಂಗ ಪಡಿಸಿದ ನಟ: ಸಿನಿಮಾಗೆ 2 ಕೋಟಿ, ಟಿವಿಗೆ 3 ಕೋಟಿ ರೂ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಿನಿಮಾದವರು ಎಂದರೆ ಎಲ್ಲರೂ ಏನು ಎಂದು ಸ್ವಲ್ಪ ಗಮನನೀಡುವುದು ಅಂದರೆ ಕಿವಿ ಅರಳಿಸಿಕೊಳ್ಳುತ್ತಾರೆ. ಇನ್ನು ಸಿನಿಮ ಮಂದಿಯೇ ತಮ್ಮ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದರೆ, ಇನ್ನೂ ಕುತೂಹಲ ಅಭಿನಾನಿಗಳಲ್ಲಿ ಹೆಚ್ಚಾಗುತ್ತದೆ.

ಅಂದರೆ ಚಿತ್ರರಂಗದ ನಟ ನಟಿಯರ ಸಂಭಾವನೆ ವಿಚಾರ ಸಾಕಷ್ಟು ಗುಟ್ಟಾಗಿಯೇ ಇರುತ್ತದೆ. ಯಾರು ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದು ಸಿನಿಮಾ ಮಾಡಿಸಿದವರಿಗೆ ಮತ್ತು ಮಾಡಿದವರಿಗೆ ಬಿಟ್ಟಿದರೆ ಅಭಿಮಾನಿಗಳನ್ನು ತಲುಪುವುದೇ ಇಲ್ಲ ಎಂದೇ ಹೇಳಬಹುದು. ಅಂತ ವಿಷಯವನ್ನು ಬಹಿರಂಗ ಪಡಿಸುವುದಕ್ಕೆ ಇಷ್ಟ ಪಡುವುದಿದೂ ಇಲ್ಲ.

ಇನ್ನು ಸಂಭಾವನೆ ವಿಚಾರ ಸದಾ ಗಾಸಿಪ್ ನಂತೆಯೇ ತೇಲು ಬರುತ್ತಿರುತ್ತದೆ. ಆದರೆ, ಇದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬ ತಮ್ಮ ಸಂಭಾವನೆ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ನಾನು ಎಷ್ಟು ಸಂಭಾವನೆ ಪಡೆಯುತ್ತೇನೆ ಎನ್ನುವುದನ್ನು ವಿವರಿಸಿದ್ದಾರೆ.

ಹೌದು! ಇಂದು ಬೆಂಗಳೂರಿನಲ್ಲಿ ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾದ ಪ್ರೆಸ್ ಮೀಟ್ ಆಯೋಜನೆ ಆಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದರು. ತಮ್ಮ ಹಳೆಯ ದಿನಗಳನ್ನೂ ಮೆಲಕು ಹಾಕಿ, ಈ ಹಿಂದೆ ಶೂಟಿಂಗ್‌ಗೆ ಹೋಗುವಾಗ ಎಷ್ಟೆಲ್ಲ ಕಷ್ಟ ಪಡುತ್ತಿದ್ದೆವು ಎಂಬುವುದು ದೇವರಿಗಷ್ಟೇ ಗೊತ್ತು. ಇನ್ನು ಸಿನಿಮಾ ರಂಗಕ್ಕೆ ಬಂದಾಗ, ಒಂದು ರೀತಿಯಲ್ಲಿ ಭಯದಿಂದಲೇ ಶೂಟಿಂಗ್ ಗೆ ಹೋಗುತ್ತಿದ್ದೆ. ಯಾರೂ ಆಗ ಪ್ರೀತಿಯಿಂದ ಕಲಿಸಲೇ ಇಲ್ಲ. ಕಷ್ಟಪಟ್ಟು ನಾನು ಈ ಮಟ್ಟಕ್ಕೆ ಬಂದಿದ್ದೇನೆ ಎಂದು ಹೇಳಿದರು.

ಇನ್ನುಸಂಭಾವನೆ ವಿಚಾರದಲ್ಲಿ ನನ್ನ ಹತ್ತಿರ ಮುಚ್ಚುಮರೆ ಇಲ್ಲ. ಸಿನಿಮಾದಲ್ಲಿ ನಟಿಸಲು ಎರಡು ಕೋಟಿ ರೂಪಾಯಿ ತಗೆದುಕೊಳ್ಳುತ್ತೇನೆ. ಟಿವಿ ಅವರು ಮೂರು ಕೋಟಿ ರೂಪಾಯಿ ಕೊಡುತ್ತಾರೆ. ನನ್ನ ಹೆಂಡತಿ ಮಕ್ಕಳನ್ನು ನೆಮ್ಮದಿಯಿಂದ ಸಾಕುವುದಕ್ಕೆ ಇಷ್ಟು ಸಾಕಾಗುತ್ತದೆ. ಬೇರೆ ಯಾವ ವಿಚಾರಕ್ಕೂ ನಾನು ತಲೆ ಹಾಕುವುದಿಲ್ಲ ಎಂದರು.

ನನಗಿರೋದು ಒಬ್ಬರೆ ಹೆಂಡ್ತಿ, ಎರಡು ಮಕ್ಕಳು. ನನ್ನ ಮಕ್ಕಳು ನನ್ನ ಹೆಸರನ್ನು ಎಲ್ಲಿಯೂ ಬಳಸಿಕೊಳ್ಳುವುದಿಲ್ಲ. ನಾನೂ ಕೂಡ ಯಾರ ತಂಟೆಗೂ ಹೋಗುವುದಿಲ್ಲ. ಹಾಗಾಗಿ ನಮ್ಮದು ಸುಖಿ ಕುಟುಂಬ. ದೇವರನ್ನು ನಂಬಿಕೊಂಡು ಬದುಕಿದ್ದೇನೆ. ನಮಗೆಲ್ಲ ಭಗವಂತ ಆನಂದದ ಜೀವನ ಕೊಟ್ಟಿದ್ದಾನೆ ಎಂದು ಎರಡೆರಡು ಮದುವೆ ಆದ ಕಲಾವಿದರನ್ನೂ ತಮ್ಮ ಮಾತಿನ ಮಧ್ಯೆ ಎಳೆತಂದರು.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ