NEWSಆರೋಗ್ಯನಮ್ಮಜಿಲ್ಲೆ

ಮಂಡ್ಯ: ಗ್ಯಾಂಗ್ರೀನ್​ ಆಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿ ಕೈ ಗಿಟ್ಟ ಮಿಮ್ಸ್ ಆಸ್ಪತ್ರೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಮಿಮ್ಸ್ ಆಸ್ಪತ್ರೆಯಲ್ಲಿ ಗ್ಯಾಂಗ್ರೀನ್​ ಆಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು, ಬಳಿಕ ಆಸ್ಪತ್ರೆ ಸಿಬ್ಬಂದಿ ಕತ್ತರಿಸಿ ತೆಗೆದ ಕಾಲಿನ ಭಾಗವನ್ನು ರೋಗಿಯ ಪತ್ನಿಗೆ ಕೊಟ್ಟಿದ್ದಾರೆ. ಇದು ಆಸ್ಪತ್ರೆಯಲ್ಲಿನ ಆಡಳಿತ ಮಂಡಳಿ ನಡೆಯನ್ನು ಬಿಂಬಿಸಿದೆ.

ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದ ಪತಿಯ ಕಾಲು ಕತ್ತರಿಸಿ, ಆಸ್ಪತ್ರೆಯ ಸಿಬ್ಬಂದಿ ಅದನ್ನು ಪತ್ನಿಯ ಕೈಗಿಟ್ಟ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಕತ್ತರಿಸಿ ತೆಗೆದ ಕಾಲಿನ ಭಾಗವನ್ನು ರೋಗಿಯ ಪತ್ನಿಗೆ ಕೊಟ್ಟಿದ್ದ ಸುದ್ದಿ ಎಲ್ಲೆಡೆ ವ್ಯಾಪಿಸುತ್ತಿದ್ದಂತೆ ಎಚ್ಚೆತ್ತ ಆಸ್ಪತ್ರೆ ಆಡಳಿತಾಧಿಕಾರಿಗಳು ಅದನ್ನು ವಾಪಸ್ ಪಡೆದಿದ್ದಲ್ಲದೆ, ಸ್ಪಷ್ಟನೆಯನ್ನೂ ನೀಡಿದ್ದಾರೆ.

ಮಂಡ್ಯದ ಕೀಲಾರ ಗ್ರಾಮದ ಪ್ರಕಾಶ್ ಎಂಬವರು ಗ್ಯಾಂಗ್ರೀನ್​ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಗ್ಯಾಂಗ್ರೀನ್​ ಆಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದರು. ಆದರೆ ಅದಾದ ಬಳಿಕ ಆಸ್ಪತ್ರೆ ಸಿಬ್ಬಂದಿ ಕತ್ತರಿಸಲಾಗಿದ್ದ ಕಾಲಿನ ಭಾಗವನ್ನು ತಂದು ಪ್ರಕಾಶ್ ಅವರ ಪತ್ನಿ ಭಾಗ್ಯಮ್ಮ ಅವರಿಗೆ ಕೊಟ್ಟಿದ್ದರು.

ಏಕಾಏಕಿ ಹೀಗೆ ಕತ್ತರಿಸಿದ್ದ ಕಾಲನ್ನು ತಂದು ಕೈಗಿಟ್ಟಿದ್ದರಿಂದ ತಬ್ಬಿಬ್ಬಾದ ಭಾಗ್ಯಮ್ಮ ಏನು ಮಾಡಬೇಕು ಎಂದು ತೋಚದೆ ಅತ್ತಿದ್ದರು. ಅಲ್ಲದೆ ಆ ಕಾಲನ್ನು ನೀವೇ ಎಲ್ಲಾದರೂ ಮಣ್ಣು ಮಾಡಿ, ನಾವೇ ಮಾಡಬೇಕೆಂದರೆ ಸಾವಿರಾರು ರೂ. ಖರ್ಚಾಗುತ್ತದೆ ಎಂದು ಆಸ್ಪತ್ರೆಯ ಆ ಸಿಬ್ಬಂದಿ ಭಾಗ್ಯಮ್ಮಗೆ ಹೇಳಿ ಉದ್ದಟತನ ತೋರಿಸಿದ್ದ.

ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಮಂಡ್ಯದ ಮಿಮ್ಸ್​ ನಿರ್ದೇಶಕ ಡಾ.ಮಹೇಂದ್ರ ಸ್ಪಷ್ಟನೆ ನೀಡಿದ್ದು, ರೋಗಿಯ ಮೊಣಕಾಲಿನ ಕೆಳಭಾಗವನ್ನು ತೆಗೆಯಲಾಗಿತ್ತು. ವೈದ್ಯಕೀಯ ನಿಯಮಗಳ ಪ್ರಕಾರ ಅದನ್ನು ಸಂಬಂಧಿತ ಏಜೆನ್ಸಿಯವರ ಮೂಲಕವೇ ವಿಲೇ ಮಾಡಿಸಬೇಕು. ಆದರೆ ಕತ್ತರಿಸಿದ ಕಾಲಿನ ಭಾಗವನ್ನು ದುರದೃಷ್ಟವಶಾತ್​ ಡಿ ಗ್ರೂಪ್ ಸಿಬ್ಬಂದಿ ರೋಗಿಯ ಪತ್ನಿಗೆ ನೀಡಿದ್ದಾರೆ. ಆಕೆ ಗಾಬರಿಯಾಗಿ ಕಣ್ಣೀರು ಹಾಕಿದ್ದಾರೆ. ಅದು ನನ್ನ ಗಮನಕ್ಕೆ ಬರುತ್ತಿದ್ದಂತೆ ವಾಪಸ್ ಪಡೆಯಲಾಗಿದೆ. ಅದನ್ನು ನಿಯಮ ಪ್ರಕಾರ ವಿಲೇ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಪ್ರಕರಣ ಸಂಬಂಧ 24 ಗಂಟೆಯೊಳಗೆ ವರದಿ ನೀಡುವಂತೆ ಸರ್ಜರಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಆಸ್ಪತ್ರೆಯ ಯಾವುದೇ ತ್ಯಾಜ್ಯವನ್ನು ರೂಲ್ಸ್ ಪ್ರಕಾರವೇ ವಿಲೇವಾರಿ ಮಾಡುವಂತೆ ಸುತ್ತೋಲೆ ಹೊರಡಿಸಿದ್ದೇನೆ ಎಂದು ಹೇಳಿದರು.

ಕಾನೂನು ಬಾಹಿರವಾಗಿ ವಿಲೇವಾರಿ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇನೆ. ರೋಗಿಯ ಪತ್ನಿ ಬಳಿ ಸಿಬ್ಬಂದಿ ಹಣ ಕೇಳಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ವಿಚಾರಣೆ ವೇಳೆ ಅದು ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.

ಇನ್ನು ಆಸ್ಪತ್ರೆಗೆ ಮೂಳೆ ಮುರಿತ, ಗ್ಯಾಂಗ್ರೀನ್​ನಿಂದ ಬಳಲುತ್ತಿರುವವರು ಬಂದರೆ ಬಹುತೇಕವಾಗಿ ಈ ವಿಭಾಗದ ವೈದ್ಯರು ಕೂಡ ನಿರ್ಲಕ್ಷ್ಯ ಮಾಡುತ್ತಿರುವುದು ಕಂಡು ಬರುತ್ತಿದೆ. ಅಲ್ಲದೆ ವೈದ್ಯರು ಸರಿಯಾದ ಸಮಯದಕ್ಕೆ ಚಿಕಿತ್ಸೆ ನೀಡುವಲ್ಲಿಯೂ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೂಡ ಇದೆ. ಈ ವಿಭಾಗಕ್ಕೆ ಬರುವ ರೋಗಿಗಳು ನರಳುತ್ತಿದ್ದರು, ನರ್ಸ್‌ ಇತರ ಸಿಬ್ಬಂದಿ ಸ್ಪಂದಿಸುವುದಿಲ್ಲ. ಈ ಬಗ್ಗೆ ವೈದ್ಯರಿಗೆ ತಿಳಿಸಿದರೆ ಸರಿಯಾದ ವೈದ್ಯಕೀಯ ಉಪಕರಣಗಳು ಇಲ್ಲ. ಅವುಗಳ ಕೊರತೆ ಇದೆ ಎಂದು ಹೇಳಿಕೆ ನೀಡುತ್ತಿರುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಅಂಗಾಂಗಗಳು ಮನುಷ್ಯನಿಗೆ ಬಹಳ ಮುಖ್ಯ. ಯಾವುದಾದರೂ ಒಂದು ಭಾಗ ಊನವಾದರೂ ಆತನ ಭವಿಷ್ಯವೇ ಬಹುತೇಕ ಮುಗಿದು ಹೋಗಿ ಬಿಡುತ್ತದೆ. ಹೀಗಾಗಿ ಗ್ಯಾಂಗ್ರೀನ್​ನಿಂದ ಅಥವಾ ಮೂಳೆ ಮುರಿತಕ್ಕೊಳಗಾಗಿ ಬರುವ ರೋಗಿಗಳನ್ನು ಸರಿಯಾದ ಸಮಯಕ್ಕೆ ಚಿಕಿತ್ಸೆ ಒಳಪಡಿಸಿ ಕಿಚಿತ್ಸೆ ನೀಡಬೇಕು. ಇನ್ನಾದರೂ ಮಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು ಎಂದು ನೊಂದ ರೋಗಿಗಳು ಒತ್ತಾಯ ಮಾಡಿದ್ದಾರೆ.

ಅಲ್ಲದೆ ಈ ವಿಭಾಗದ ವೈದಯರ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಅಸೆಷ್ಟೋ ಜೀವಗಳು ನೋವು ತಾಳಲಾರದೆ ಪ್ರಾಣಕಳೆದುಕೊಂಡಿವೆ. ಆದರೆ ಆ ಬಗ್ಗೆ ಇದುವರೆಗೂ ಯಾರು ದೂರು ದಾಖಲಿಸಿಲ್ಲ. ಕಾರಣ ಸರ್ಕಾರಿ ಆಸ್ಪತ್ರೆಗೆ ಬರುವವರು ಬಹುತೇಕ ಬಡವರು, ಅವರು ಅವರು ಆರ್ಥಿಕವಾಗಿ ಸಬಲರಲ್ಲ ಕಾರಣ ಜೀವ ಹೋದ ಮೇಲೆ ನೋವಿನಲ್ಲೇ ಮಣ್ಣು ಸುಮ್ಮನಾಗುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಈ ವಿಭಾಗದ ಮುಖ್ಯಸ್ಥರೂ ಸರಿದಾರಿಗೆ ತರುವತ್ತ ಕ್ರಮ ಜರುಗಿಸಬೇಕಿದೆ.

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC