ಬೆಂಗಳೂರು: ಸಂಸ್ಥೆಯ ಸೇವೆ ಜತೆಜತೆಗೆ ಕ್ರಿಯಾಶೀಲವಾಗಿ ಕನ್ನಡ ಸೇವೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ನಿರತರಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿಬ್ಬಂದಿ ವರ್ಗದವರನ್ನು ಗುರುತಿಸಿ ಗೌರವಿಸಲು ಸಸ್ಯಯಜ್ಞ ತಂಡ ಅರ್ಜಿ ಆಹ್ವಾನಿಸಿದೆ.
67ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಸ್ಯಯಜ್ಞ ತಂಡದ ವತಿಯಿಂದ ನಡೆಸುವ ರಾಜ್ಯವ್ಯಾಪಿ “ಕನ್ನಡದ ತೇರು ಕಾವ್ಯ ಅಭಿಯಾನ”ದ ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದಲ್ಲಿ ಕ್ರಿಯಾಶೀಲರಾಗಿ ಕನ್ನಡ ಸೇವೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ಸಸ್ಯಯಜ್ಞ ತಂಡದ ಸಂತೋಷ್ ಮಡೇನೂರು ತಿಳಿಸಿದ್ದಾರೆ.
ಎಲೆ ಮರೆ ಕಾಯಿಗಳ ರೀತಿ ಇರುವ ವ್ಯಕ್ತಿಗಳ ಸಂಪೂರ್ಣ ಸಾಧನೆಗಳ ವಿವರ, ಹುದ್ದೆ, ಕಾರ್ಯ ಸ್ಥಳ ಮತ್ತು ಭಾವಚಿತ್ರಗಳ ಮಾಹಿತಿಯನ್ನು 15- 10- 2022 ರ ಒಳಗೆ ಸಸ್ಯಯಜ್ಞ ತಂಡದ ಆಯ್ಕೆ ಸಮಿತಿಗೆ ಮೊ: 9036768610ಕ್ಕೆ ವಾಟ್ಸಾಪ್ ಮೂಲಕ ಕಳುಹಿಸುವುದು.
ಸಾಹಿತ್ಯ ಚಿಂತನೆಯ ಜತೆಗೆ ಈ ಸೂಕ್ಷ್ಮ ಕನ್ನಡದ ಕೆಲಸಕ್ಕೆ ಸೃಜನಶೀಲ ವ್ಯಕ್ತಿತ್ವವುಳ್ಳ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲ ಸಿಬ್ಬಂದಿಗಳ ಸಂಪೂರ್ಣ ಸಹಕಾರ ಪ್ರೋತ್ಸಾಹ ಅತ್ಯಗತ್ಯ. ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸಿ ಅರ್ಹರ ಗುರುತಿಸಲು ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.