ಬೆಂಗಳೂರು: ಭಾರತ ಸ್ವಾತಂತ್ರ್ಯ ಪೂರ್ವದಲ್ಲಿನ ಕಮ್ಯೂನಿಸ್ಟ್ ಹಾಗೂ ವೈದಿಕ ಸಿದ್ಧಾಂತ ಸಂಸ್ಕೃತಿಯ ತಳಹದಿಯ ಮೇಲೆ ನಿಂತಿರುವ ಕೆಲವೊಂದು ಸಂಘಟನೆಗಳು. ಇನ್ನು ನಮ್ಮ KSRTC ಯಲ್ಲಿ ತಮ್ಮ ಪ್ರಾಬಲ್ಯ, ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಇನ್ನೂ ಮುಂದೆ ಏನು ಮಾಡಬೇಕು ಎನ್ನುವುದು ತಿಳಿಯದೇ ದಿಕ್ಕು ತೋಚದತಾಗಿದೆ.
ನಮ್ಮ KSRTC ನಿಗಮದಲ್ಲಿ ಈ ಕಮ್ಯೂನಿಸ್ಟ್ ವಾದಿಗಳು ಸುಮಾರು ವರ್ಷಗಳಿಂದ ಮೇಲೂ ಕೀಳು ಮಟ್ಟದ ಆಡಳಿತ ನಡೆಸಿಕೊಂಡು ಬಂದಿರುತ್ತಾರೆ, ಕಾರಣ ಶಿಕ್ಷಣದ ಕೊರತೆಯಿಂದ, ನಮ್ಮ ಸಂಸ್ಥೆಯಲ್ಲಿ ದುಡಿಯುವ ವರ್ಗದ ಜನರು ಇವರ ಬಣ್ಣ ಬಣ್ಣದ ಮಾತುಗಳನ್ನು ನಂಬಿ ಮೋಸಹೋಗಿದ್ದಾರೆ.
ಸ್ವಾತಂತ್ರ್ಯ ಭಾರತದ ನಂತರ ನಮ್ಮ ದೇಶದಲ್ಲಿ ಸಂವಿಧಾನ ಬಂದ ನಂತರ ಮಂದ ಗತಿಯಲ್ಲಿ ಶಿಕ್ಷಣ, ಉದ್ಯೋಗ, ಬುದ್ದಿ ಮಟ್ಟ ಆಚಾರ, ವಿಚಾರ ಯೋಚನೆ ಮಾಡುವ ಶಕ್ತಿ ತಿಳಿವಳಿಕೆ ಪ್ರಾಮಾಣಿಕ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಇಂದು ಭಾರತದ ಪ್ರತಿಯೊಬ್ಬ ಮನುಷ್ಯನ ಬೇಕು ಬೇಡಗಳನ್ನು ಈಡೇರಿಸಿ ಕೊಳ್ಳಲು ಹಾಗೂ ಮೂಲಭೂತ ಸೌಕರ್ಯ ಪಡೆದು ಕೊಳ್ಳಲು ಹವಣಿಸುತ್ತಿದ್ದಾರೆ.
ಆದರೆ, ನಮ್ಮ KSRTC ಯಲ್ಲಿ ಇದೆ ತರಹ ಮುಂದುವರಿದು, ನಮಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ಕೇಳಲು ಇತಿಹಾಸ ಪುಟದಲ್ಲಿ ಸೇರುವ ಹಾಗೆ ಏಪ್ರಿಲ್ 2021 ರಲ್ಲಿ ಮುಷ್ಕರ ಮಾಡಿದ್ದೇವೆ. ಆದರೆ, ಬೇತಾಳನಂತೆ ಬೆನ್ನು ಹತ್ತುವ ಸಂಘಟನೆಗಳು ತಮ್ಮ ವೈದಿಕ ಸಿದ್ಧಾಂತಗಳು ಹಾಗೂ ಕಮ್ಯೂನಿಸ್ಟರು ಸೇರಿ ಸಮಾನತೆ, ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳನ್ನು ಪಡೆದುಕೊಂಡರೆ ಮೂಲ ಸಿದ್ಧಾಂತಕ್ಕೆ ಧಕ್ಕೆ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಮುಳುಗಿ ನಮ್ಮನ್ನು ಆರ್ಥಿಕವಾಗಿ ಮುಳುಗಿಸಿ ಇಂದು ಈ ಸ್ಥಿತಿಗೆ ತಂದು ನಿಲ್ಲಿಸಿವೆ.
ಸದ್ಯ ಈಗ ನೌಕರರ ಮನಸ್ಸಿನಲ್ಲಿ ಭಯ, ಭಯ, ಭಯ ಎಂಬುದನ್ನು ಹುಟ್ಟುಹಾಕಿ. ಅವರ ಈ ಭಯದ ಮೇಲೆ ತಮ್ಮ ಸೌಧವನ್ನು ಕಟ್ಟಿಕೊಳ್ಳಲು ಮತ್ತೆ ಅವಣಿಸುತ್ತಿವೆ. ಇದನ್ನು ಅರಿತ ಕೆಲವರು ಕೂಟದವರ ಹಿಂದೆ ಬೇತಾಳದಂತೆ ಬೆನ್ನು ಹತ್ತಿ, ವಜಾ, ಅಮಾನತು, ವರ್ಗಾವಣೆ. ಎಫ್‌ಐಆರ್ ಮಾಡಿಸುವಲ್ಲಿ ಸಫಲತೆ ಕಂಡು, ನಾವು ಗೆದ್ದೇಬಿಟ್ಟೆವು ಎಂಬ ಹುಂಬುತನದಲ್ಲಿ ಮುಳುಗಿ ಸಂಭ್ರಮಿಸುತ್ತಿವೆ.
ಇನ್ನು ಈ ಕಿಡಿಗೇಡಿ ಕಾರ್ಮಿಕ ವಿರೋಧಿ ಸಂಘಟನೆಗಳ ಮಾತು ನಂಬಿಕೊಂಡು ಅವರ ಹಾದಿಯಲ್ಲೇ ಹೆಜ್ಜೆ ಹಾಕುವ ಮೂಲಕ ತಮ್ಮ ತಲೆಯ ಮೇಲೆ ತಾವೇ ಕಲ್ಲು ಎತ್ತಿ ಹಾಕಿಕೊಂಡಿದ್ದಾರೆ ಕೆಲ ನೌಕರರು.
ಆದರೆ, ಆ ಎಲ್ಲ ನೌಕರರಿಗೆ ಇಂದಿನ ಪರಿಸ್ಥಿತಿ ಅರಿವಾಗುತ್ತಿದ್ದು, ನಾವು ನಂಬಿ ಮೋಸ ಹೋಗಿದ್ದೇವೆಯೇ ಇಲ್ಲವೇ ಎಂಬ ಸ್ವಲ್ಪ ಗೊಂದಲದಲ್ಲೂ ಮುಳಿಗಿ ಹೊರ ಬರಲು ಎಣಗಾಡುತ್ತಿದ್ದಾರೆ. ಆದರೆ ಒಂದಂತು ಸತ್ಯ ಮುಂದೆ ನಮ್ಮ KSRTC ಸಂಸ್ಥೆಯಲ್ಲಿ ಕಮ್ಯೂನಿಸ್ಟರ ಕಾಲ ಅಂತ್ಯವಾಗಲಿದೆ. ದುಡಿಯುವ ವರ್ಗಕ್ಕೆ ಅನ್ಯಾಯ ಮಾಡಿದರೆ, ಯಾವ ಸರ್ಕಾರಕ್ಕೆ ಉಳಿಗಾಲ ಇಲ್ಲ.
ನ್ಯಾಯ ಸಮ್ಮತವಾದ ಹಾಗೂ ಲಿಖಿತವಾಗಿ ಸರ್ಕಾರವೇ ಕೊಟ್ಟ ಭರವಸೆಯಂತೆ ನಮ್ಮ ಬೇಡಿಗಳನ್ನು ಸರ್ಕಾರ ಈಡೇರಿಸಬೇಕು. ಈ ಮೂಲಕ ತಾವು ಮಾಡುತ್ತಿರುವ ತಪ್ಪನ್ನು ಈಗಲಾದರೂ ಸರ್ಕಾರ ತಿದ್ದಿಕೊಂಡ ನೌಕರರಿಗೆ ನ್ಯಾಯ ಕೊಡುವಲ್ಲಿ ಮುಂದಾಗಬೇಕು ಎಂದು ಸಾರಿಗೆ ನೌಕರರು ಆಗ್ರಹಿಸಿದ್ದಾರೆ.