ನವಲಗುಂದ: NWKRTC ಹುಬ್ಬಳ್ಳಿ ವಿಭಾಗದ ನವಲಗುಂದ ಘಟಕದಲ್ಲಿ ನೌಕರರು ಅವರವರ ಕರ್ತವ್ಯ ಮಾಡಬೇಕಾದರೂ ಬ್ರೋಕರ್‌ಗಳಿಗೆ ಇಂತಿಷ್ಟು ಕೊಡಲೇ ಬೇಕು ಎಂಬ ನಿಯವಿರುವ ಆರೋಪ ಕೇಳಿ ಬಂದಿದೆ. ಇದರಿಂದ ನಿಷ್ಠಾವಂತ ನೌಕರರು ಕರ್ತವ್ಯ ಮಾಡುವುದು ತಲೆ ನೋವಾಗಿದೆಯಂತೆ.
ಇನ್ನು ಈ ಬಗ್ಗೆ ಗಮನಹರಿಸಬೇಕಾದರ ಡಿಪೋ ವ್ಯವಸ್ಥಾಪಕರು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದರು ಏನು ಕ್ರಮ ಜರುಗಿಸುತ್ತಿಲ್ಲ ಎಂದು ನೌಕರರು ಆರೋಪಿಸಿದ್ದು, ಒಂದೆರಡು ದಿನ ರಜೆ ತೆಗೆದುಕೊಳ್ಳಬೇಕು ಎಂದರೂ ಮಧ್ಯವರ್ತಿಗಳು ಮಧ್ಯೆ ಬರಲೇ ಬೇಕಿದೆ ಎಂದು ನೊಂದ ನೌಕರರು ಆರೋಪ ಮಾಡಿದ್ದಾರೆ.
ಆಟೋ ರಜೆ ಹೊರತು ಪಡಿಸಿ ಸಾಮಾನ್ಯ ರಜೆ ಪಡೆಯಲು ಒಂದು ದಿನಕ್ಕೆ 200 ರೂ. 3 ದಿನಕ್ಕೆ 500 ಫಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದಿಷ್ಟೇ ಅಲ್ಲದೆ ರೂಟ್ ಹಾಕಿಸಿಕೊಳ್ಳಬೇಕಾದರೂ ತಿಂಗಳಿಗೆ 1000 ರೂ.ನಿಂದ 1500 ರೂ. ಕೊಡಬೇಕು ಎಂಬ ಆರೋಪ ಕೇಳಿ ಬಂದಿದೆ.
ಇಲ್ಲದರ ಮಧ್ಯೆ ನಾವು ಕರ್ತವ್ಯ ನಿರ್ವಹಿಸುವುದಕ್ಕೆ ತುಂಬ ಕಷ್ಟವಾಗುತ್ತಿದ್ದು ಇದರಿಂದ ಸ್ವಲ್ಪ ಮಟ್ಟಿಗಾದರೂ ಸಮಸ್ಯೆ ನೀಗಿಸಬೇಕಾದರೆ ಸಿನಿಯಾರಿಟ್ ಪ್ರಕಾರ ಕರ್ತವ್ಯ ನೀಡಬೇಕು. 22 ದಿನ ಡ್ಯೂಟಿ ಮಾಡಿರುವವರಿಗೆ ಅಗತ್ಯಬಿದ್ದರೆ ರಜೆ ನೀಡಬೇಕು. ಅಲ್ಲದೆ ಘಟಕ ಮಟ್ಟದಲ್ಲಿ ನಡೆಯುತ್ತಿರುವ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮೇಲಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ನಿತ್ಯ ಕಿರಿಕಿರಿ ಅನುಭವಿಸುತ್ತಿರುವ ನೌಕರರು ಮನವಿ ಮಾಡಿದ್ದಾರೆ.