ಪಿರಿಯಾಪಟ್ಟಣ: ವೈಕುಂಠ ಏಕಾದಶಿ (Vaikuntha Ekadashi) ಅಂಗವಾಗಿ ಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ- (Special Puja) ಪ್ರಾರ್ಥನೆ ಹಾಗೂ ಪ್ರಸಾದ ವಿತರಣಾ ಕಾರ್ಯಕ್ರಮ ನೆರವೇರಿತು.
ಪಟ್ಟಣದ ಚನ್ನಪಟ್ಟಣ ಬೀದಿಯ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಸೇರಿದಂತೆ ನಗರದ ಬಹುತೇಕ ವಿಷ್ಣು ದೇವಾಲಯಗಳಲ್ಲಿ ಇಂದು ವಿಶೇಷ ಪೂಜೆ-ಹೋಮ-ಹವನಾದಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಚನ್ನಪಟ್ಟಣ ಬೀದಿಯ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಸಾಧಾರಣವಾಗಿ ವೈಕುಂಠ ಏಕಾದಶಿಯಂದು ನಸುಕಿನ ಜಾವವೇ ದೇವಾಲಯದ ದ್ವಾರಗಳನ್ನು ತೆರೆಯಲಾಗುತ್ತದೆ. ಆದರೆ, ಸರ್ಕಾರದ ಕೋವಿಡ್-19 ಸಾಂಕ್ರಾಮಿಕದ ಮುನ್ಸೂಚನೆಯ ಹಿನ್ನೆಲೆಯಲ್ಲಿ ಚನ್ನಪಟ್ಟಣ ಬೀದಿಯ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ಬೆಳಗಿನ ಜಾವ ಭಕ್ತಾದಿಗಳಿಗೆ ದರ್ಶನಾವಕಾಶ ನೀಡಿ ಪ್ರಸಾದ ವಿತರಿಸಮಾಯಿತು.
ಈ ಹಿಂದಿನ ವರ್ಷಗಳಲ್ಲಿ ದೇವಾಲಯಗಳ ಮುಂದೆ ಮೈಲುದ್ದದ ಸಾಲುಗಳು ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮಗಳು ಕಂಡುಬರುತ್ತಿದ್ದವು. ಆದರೆ, ಈ ಬಾರಿ ಎಂದಿನ ಜನದಟ್ಟಣೆ ಅಷ್ಟಾಗಿ ಕಾಣಲಿಲ್ಲ. ಕೋವಿಡ್ ಮಾರ್ಗಸೂಚಿ ಸ್ಥಳೀಯರು ಮಾತ್ರ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಪ್ರಚಾರ ಇಲ್ಲದ ಕಾರಣ ಸಾರ್ವಜನಿಕರು ಹೆಚ್ಚಾಗಿ ದೇವಾಲಯದಲ್ಲಿ ದರ್ಶನಕ್ಕೆ ಬಂದಿರಲಿಲ್ಲ.
ದೇವಸ್ಥಾನ ಮಂಡಳಿಯವರು ಮಾತ್ರ ವೈಕುಂಠ ದ್ವಾರದ ಮೂಲಕ ದೇವಾಲಯ ಪ್ರವೇಶಿಸಿ ಪೂಜೆ-ಪ್ರಾರ್ಥನೆ ನೆರವೇರಿಸಿದರು. ಪ್ರತಿ ವರ್ಷ ಸಾರ್ವಜನಿಕರು ಹಾಗೂ ಭಕ್ತಾದಿಗಳು ವೈಕುಂಠ ಏಕಾದಶಿಯಂದು ವೈಕುಂಠದ್ವಾರ ತೆರೆಯುತ್ತದೆ. ಅಂದು ವಿಷ್ಣು ದೇವರ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಶ್ರೀ ಕೃಷ್ಣ ಯಾದವರ ಸಂಘದ ಅಧ್ಯಕ್ಷ ಪಿ.ಡಿ.ಪ್ರಸನ್ನ, ಗೌರವಾಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಸತ್ಯನಾರಾಯಣ, ಪುರೋಹಿತ ಪದ್ಮರಾಜ್, ಮುಖಂಡರಾದ ಸುರೇಶ್, ಮಹದೇವ್, ರವಿ, ತೇಜಸ್, ಕೃಷ್ಣಮೂರ್ತಿ, ಧನಪಾಲ್, ಶರಣ್, ರವಿ, ಪಲ್ಲಿ, ಮಿಡಿ ಸೇರಿದಂತೆ ಭಕ್ರಾದಿಗಳು ಹಾಗೂ ಸಾರ್ವಜನಿಕರು ಇದ್ದರು.