NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಪ್ರಯಾಣಿಕರಿಗೆ ಕೊಟ್ಟ ಟಿಕೆಟ್‌ ಟೈಮ್‌ಅನ್ನೇ ಬದಲಾಯಿಸಿ ನಿರ್ವಾಹಕನ ಅಮಾನತು ಮಾಡಿಸಿದ ತನಿಖಾಧಿಕಾರಿಗಳು !?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್‌ ಅವರು ನಿಗಮದ ನೌಕರರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರೆ ಇತ್ತ ಏನೂ ಮಾಡದ ತಪ್ಪಿಗೆ ನೌಕರರಿಗೆ ಕಿರುಕುಳ ನೀಡುವುದನ್ನು ಕೆಲ ಅಧಿಕಾರಿಗಳು ಮುಂದುವರಿಸಿಕೊಂಡು ಹೋಗುತ್ತಲ್ಲೆ ಇದ್ದಾರೆ.

ಹೌದು ಹೊಸ ವರ್ಷದ ಸಂಭ್ರಮಕ್ಕಾಗಿ ಎಂಡಿ ಅನ್ಬುಕುಮಾರ್‌ ನೌಕರರನ್ನು ಆಹ್ವಾನಿಸಿ ಕೇಕ್‌ ಕಟ್‌ ಮಾಡಿ ಹೊಸ ವರ್ಷಾಚರಣೆ ಮಾಡುವ ಮೂಲಕ ಈ ವರ್ಷವನ್ನು ಕಾರ್ಮಿಕರ ಕಲ್ಯಾಣ ವರ್ಷ ಎಂದು ಘೋಷಣೆ ಮಾಡಿದ್ದಾರೆ. ಆದರೆ, ಇದೇ ನಿಗಮದ ಕೆಲ ಅಧಿಕಾರಿಗಳು ಮಾತ್ರ ಇದಾವುದಕ್ಕೆ ಕ್ಯಾರೆ ಎನ್ನದೆ ತಮ್ಮ ದರ್ಪ ಮೆರೆಯುವುದನ್ನು ಮುಂದುವರಿಸುತ್ತಲೇ ಇದ್ದಾರೆ.

ಅದಕ್ಕೆ ತಾಜಾ ನಿದರ್ಶನ ಎಂಬಂತೆ ಒಬ್ಬ ನಿಷ್ಠಾವಂತ ನಿರ್ವಾಹಕನ ವಿರುದ್ಧ ಪಿತೂರಿ ನಡೆಸಿದ ತನಿಖಾಧಿಕಾರಿಗಳ ಮಾತನ್ನು ನಂಬಿದ ಸಾರಿಗೆ ಡಿಸಿ ನಿರ್ವಾಹಕನನ್ನು ಕರೆದು ಘಟನೆ ಬಗ್ಗೆ ವಿಚಾರಿಸದೆ ಏಕಾಏಕಿ ಅಮಾನತು ಮಾಡಿ ಸುಳ್ಳನ್ನೇ ಸತ್ಯಾವೆಂದು ನಂಬಿದ ಮೂರ್ಖರಾಗಿದ್ದಾರೆ.

ಡಿ.2ರಂದು ಬೆಳಗ್ಗೆ 11.28 ಕೊಟ್ಟಿರುವ ಟಿಕೆಟ್‌.

ಘಟನೆ ವಿವರ: ಕೆಳೆದ ಡಿಸೆಂಬರ್‌ 2ರಂದು ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗದ ಮಾಗಡಿ ಘಟಕದ ಬಸ್‌ ಕಲಾಸೀಪಾಳ್ಯ- ಕನಕಪುರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೋಗುತ್ತಿತ್ತು. ಈ ವೇಳೆ ಅಚ್ಚಲು ಗ್ರಾಮದ ಬಳಿ ( ತನಿಖಾಸ್ಥಳವಲ್ಲದ ಜಾಗದಲ್ಲಿ) ಬಸ್‌ ಬರುತ್ತಿದ್ದಂತೆ ತನಿಖಾಧಿಕಾರಿಗಳಾದ ಟಿಐ ಮಹೇಶ್‌ ಮತ್ತು ಎಟಿಐ ಸೋಮಲಿಂಗಪ್ಪ ಎಂಬುವರು ಬಂದು ಟಿಕೆಟ್‌ ಚೆಕ್‌ ಮಾಡಿದ್ದಾರೆ. ಈ ವೇಳೆ ಎಲ್ಲವೂ ಓಕೆ ಆಗಿದೆ.

ಆದರೆ, 6 ಮಂದಿ ಇಳಿಯುತ್ತಿದ್ದಾಗ ಆ 6 ಪ್ರಯಾಣಿಕರಿಗೂ ಒಂದೇ ಟಿಕೆಟ್‌ ಕೊಡಲಾಗಿತ್ತು. ಈ ವೇಳೆ ಮುಂದೆ ಹೋಗಿ ಇಳಿದ ಮೂವರ ಬಳಿ ಟಿಕೆಟ್‌ ಇರಲಿಲ್ಲ. ಕಾರಣ ಚೆಂಜ್‌ ಕೊಡಬೇಕಿದ್ದರಿಂದ ಆ ಟಿಕೆಟ್‌ ಅನ್ನು ನಿರ್ವಾಹಕರು ನೋಡಿ ಚೆಂಜ್‌ ಕೊಡುತ್ತಿದ್ದರು. ಆದರೆ ಅದನ್ನು ನಂಬದ ತನಿಖಾಧಿಕಾರಿಗಳು ನಮ್ಮನ್ನು ನೋಡಿ ಟಿಕೆಟ್‌ ಕೊಟ್ಟಿದ್ದೀಯ (ಟಿಕೆಟ್‌ ಹರಿದಿದ್ದೀಯಾ) ಎಂದು ಆರೋಪ ಮಾಡಿ ಆರೋಪಣ ಪತ್ರವನ್ನು ನೀಡಿ ಹೋಗಿದ್ದರು.

ಇದಾದ 22 ದಿನದ ಬಳಿಕ ಅಂದರೆ ಡಿಸೆಂಬರ್‌ 24ರಂದು ರಾಮನಗರ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಅಂದು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ್ದ ಕುಮಾರ್‌ ಅರವನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ ಇಲ್ಲಿ ಪ್ರಮುಖವಾಗಿ ತಿಳಿದುಕೊಳ್ಳಬೇಕಿರುದನ್ನೇ ತಿಳಿದು ಕೊಳ್ಳದ ಡಿಸಿ ಈ ರೀತಿ ತನಿಖಾಧಿಕಾರಿಗಳ ಸುಳ್ಳು ಆರೋಪವನ್ನೇ ನಂಬಿ ಅಮಾನತು ಮಾಡಿರುವುದು ಎಷ್ಟು ಸರಿ ಎಂಬುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ನಿರ್ವಾಹಕನಿಗೆ ತನಿಖಾಧಿಕಾರಿಗಳು ನೀಡಿರುವ ಆರೋಪ ಪಟ್ಟಿ ಜತೆಗೆ ಟಿಕೆಟ್‌.

ಇನ್ನು ಅಂದು ಬೆಳಗ್ಗೆ 11 ಗಂಟೆ 28 ನಿಮಿಷಕ್ಕೆ ಟಿಕೆಟ್‌ ಕೊಟ್ಟಿದ್ದಾರೆ. ಆದರೆ ತನಿಖಾಧಿಕಾರಿಗಳು 11 ಗಂಟೆ 36ನಿಮಿಷಕ್ಕೆ ತನಿಖೆಗೆ ಬಸ್‌ ಹತ್ತಿದ್ದಾರೆ. ಈ ಎರಡರ ವ್ಯತ್ಯಾಸವಿದೆ, ಆದರೆ ಕತ್ತರ್‌ನಾಕ್‌ ತನಿಕಾಧಿಕಾರಿಗಳು ಬಳಿಕ ಆ ಟಿಕೆಟ್‌ ಟೈಮ್‌ ಅನ್ನೇ ಬದಲಾಯಿಸಿ ನಕಲಿ ಟಿಕೆಟ್‌ ತೆಗೆದುಕೊಂಡು ನಿರ್ವಾಹಕ ಕುಮಾರ್‌ ಅವರನ್ನು ಅಮಾನತು ಮಾಡಿಸಿ ದರ್ಪ ಮೆರೆದಿದ್ದಾರೆ.

17 ವರ್ಷಗಳಿಂದ ಸಂಸ್ಥೆಗೆ ನಿಷ್ಠಾವಂತನಾಗಿ ಒಂದು ಗೈರು ಹಾಜರಿಯೂ ಇಲ್ಲದೆ ಕೆಲಸ ಮಾಡುತ್ತಿರುವ ನೌಕರನನ್ನು ಈ ರೀತಿ ಅಮಾನತು ಮಾಡಿರುವುದು ತುಂಬ ನೋವಿನ ಸಂಗತಿ ಎಂದು ಘಟಕದ ಸಹೋದ್ಯೋಗಿಗಳು ಮರುಕ ವ್ಯಕ್ತಪಡಿಸುತ್ತಿದ್ದಾರೆ.

ಇದಷ್ಟೇ ಅಲ್ಲದೆ ಏನು ತಪ್ಪನ್ನೇ ಮಾಡದ ಇಂಥ ಅನೇಕ ನೌಕರರ ವಿರುದ್ಧ ಕೆಲ ಅಧಿಕಾರಿಗಳು ದರ್ಪ ಮೆರೆಯುತ್ತಿರುವುದು ನಿಗಮದ ಅಭಿವೃದ್ಧಿಗೂ ಮಾರಕವಾಗುತ್ತದೆ. ಅಲ್ಲದೆ ಇವರ ಲಂಚಾವತಾರಕ್ಕೆ ನೌಕರರನ್ನು ಈ ರೀತಿ ಅಮಾನತು ಮಾಡುವುದು ಹಣಕ್ಕೆ ಬೇಡಿಕೆ ಇಟ್ಟು ನಂತರ ಅಮಾನತು ಆದೇಶವನ್ನು ಹಿಂಡೆಯುವುದು ಕೂಡ ಸಂಸ್ಥೆಯ ಕೆಲ ಅಧಿಕಾರಿಗಳು ಮಾಡುತ್ತಿದ್ದಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೂ ಈ ಬಗ್ಗೆ ಸೂಕ್ತ ಕ್ರಮ ಮಾತ್ರ ಆಗುತ್ತಿಲ್ಲ.

ಕಾನೂನು ಹೋರಾಟಕ್ಕೆ ಸಜ್ಜಾದ ನೌಕರ: ಈ ಸಂಬಂಧ ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್‌.ಬಿ. ಶಿವರಾಜು ಅವರನ್ನು ಇಂದು (ಜ.3) ಸಿಟಿ ಸಿವಿಲ್‌ ನ್ಯಾಯಾಲಯದ ಅವರಣದಲ್ಲಿ ಭೇಟಿ ಮಾಡಿದ ಅಮಾನತುಗೊಂಡಿರುವ ನಿರ್ವಾಹಕ ಕುಮಾರ್‌ ಕಾನೂನು ಸಲಹೆ ಕೇಳಿದ್ದಾರೆ. ಈ ವೇಳೆ ವಕೀಲರು ಮೊದಲು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಈ ಸಂಬಂಧ ನಿಮ್ಮ ಲಿಖಿತ ಉತ್ತರ ಕೊಟ್ಟಿದ್ದೀರಾ? ಕೊಟ್ಟಿದ್ದರೆ ಎರಡು ದಿನ ಕಾಯಿರಿ ಅವರಿಂದ ನಿಮಗೆ ಏನು ಉತ್ತರ ಬರುತ್ತದೆ ನೋಡೋಣ. ಒಂದು ವೇಳೆ ನಿಮ್ಮ ಅಮಾನತು ಆದೇಶ ವಾಪಸ್‌ ಪಡೆದು ಡ್ಯೂಟಿ ಕೊಟ್ಟರೆ ಹೋಗಿ, ಇಲ್ಲದಿದ್ದರೆ ಹೈ ಕೋರ್ಟ್‌ನಲ್ಲಿ ಅಮಾನತು ಆದೇಶಕ್ಕೆ ತಡೆ ನೀಡುವ ಸಂಬಂಧ ಅರ್ಜಿ ಸಲ್ಲಿಸಬಹುದು ಎಂದು ಸಲಹೆಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ