ಮೈಸೂರು: ಚಾಮುಂಡಿಬೆಟ್ಟದ ಬಸ್ ನಿಲ್ದಾಣ ಸಮೀಪ 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತು.
ಅರಮನೆ ನಗರಿ ಮೈಸೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಅವಘಡ ಸಂಭವಿಸಿದೆ. ನಾಡ ದೇವತೆ ಚಾಮುಂಡಿಯ ದರ್ಶನಕ್ಕೆ ಬಂದ ಭಕ್ತರಲ್ಲಿ ಇದರಿಂದ ಕೆಲ ಕಾಲ ಆತಂಕ ಮೂಡಿತ್ತುತು. ಆದರೆ ದೇವಿಯ ಕೃಪೆ ಮತ್ತು ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.
ಗುಜರಾತ್‌ನಿಂದ ಪ್ರವಾಸಿಗರನ್ನು ಹೊತ್ತ ಬಸ್ ಚಾಮುಂಡಿಬೆಟ್ಟಕ್ಕೆ ಬಂದಿತ್ತು. ಈ ವೇಳೆ ಬೆಟ್ಟದ ಸಮೀಪದ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಡಿಸೇಲ್ ಸೋರಿಕೆಯಿಂದ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೆ ಚಾಲನೆಯಲ್ಲಿದ ಬಸ್‌ನ ಸೈಲೆನ್ಸರ್ ನಿಂದ ಹೊಗೆ ಬರಲಾರಂಭಿಸಿದೆ.
ಕೂಡಲೇ ಅದನ್ನು ಗಮನಿಸಿದ ಚಾಲಕ ಬೆಂಕಿಯ ಸಂಪರ್ಕದ ವೈರ್‌ಗಳನ್ನು ಕಟ್ ಮಾಡಿದ್ದಾರೆ. ಇತ್ತ ಪ್ರವಾಸಿಗರನ್ನು ತಕ್ಷಣವೇ ಬಸ್‌ನಿಂದ ಕೆಳಗಿಳಿಸಿದ್ದಾರೆ. ಪರಿಣಾಮ ಬಸ್ ಭಸ್ಮವಾಗುವುದು ತಪ್ಪಿದ್ದು ಇತ್ತ ಪ್ರಯಾಣಿಕರು ದೊಡ್ಡ ಅವಘಡದಿಂದ ಪಾರಾದಂತಾಗಿದೆ.