NEWSದೇಶ-ವಿದೇಶನಮ್ಮರಾಜ್ಯ

ಕೆಲ ಮಾನಗೇಡಿ ಮಾಧ್ಯಮಗಳ ಹಣದಾಸೆಗೆ ಬಲಿಯಾಗಿರೋ ಅಮಾಯಕರು, ನಿಷ್ಠಾವಂತ ಅಧಿಕಾರಿಗಳು, ಕುಟುಂಬಗಳ ಪಟ್ಟಿಯೇ ದೊಡ್ಡದಿದೆ

ವಿಜಯಪಥ ಸಮಗ್ರ ಸುದ್ದಿ

ಮಾರಾಟವಾದ ಒಬ್ಬ ಪತ್ರಕರ್ತ ಸಾವಿರ ಭಯೋತ್ಪಾದಕನಿಗೆ ಸಮ! ಭಾರತದ ಸಂವಿಧಾನ ಶಿಲ್ಪಿ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿರೋ ಈ ಮಾತು ಸರ್ವಕಾಲಿಕ ಸತ್ಯ. ಅದನ್ನೂ ಚಾಚುತಪ್ಪದೇ ತಾ ಮುಂದು ನಾ ಮುಂದು ಅನ್ನೋ ರೀತಿಯಲ್ಲಿ ಜಿದ್ದಿಗೆ ಬಿದ್ದು ಸಾಬೀತು ಮಾಡಲು ಹೋಗುತ್ತಿವೆ, ಈಗಿನ ಒಂದಷ್ಟು ಮಾಧ್ಯಮಗಳು. ಇಂತಹ ಮಾನಗೇಡಿ ಮಾಧ್ಯಮಗಳ ಹಣದಾಸೆಗೆ ಬಲಿಯಾಗಿರೋ ಅಮಾಯಕ ವ್ಯಕ್ತಿಗಳ, ಕುಟುಂಬಗಳ, ನಿಷ್ಠಾವಂತ ಅಧಿಕಾರಿಗಳ ಪಟ್ಟಿಯೇ ದೊಡ್ಡದಿದೆ.

ಸದ್ಯ ಹಾಳಾಗುತ್ತಿರುವ ಸಾಮಾಜಿಕ ಸ್ವಾಸ್ಥ್ಯ, ಭಂಗವಾಗುತ್ತಿರುವ ಶಾಂತಿ, ಕುಂಠಿತವಾಗುತ್ತಿರುವ ಆರ್ಥಿಕ ಪ್ರಗತಿ ಇದೆಲ್ಲದ್ದಕ್ಕೂ ಮುಖ್ಯ ಕಾರಣ ಇದೇ ಒಂದಷ್ಟು ಲಜ್ಜೆಗೇಡಿ ಮಾಧ್ಯಮಗಳು. ತಾವು ಹಾಕುವ ಯಡವಟ್ಟು ಸುದ್ದಿಗಳಿಂದ ಯಾರ್ ಮನೆ ಹಾಳಾದ್ರೂ, ಇನ್ಯಾರದ್ದೋ ವ್ಯಕ್ತಿತ್ವಕ್ಕೆ ಕಳಂಕ ಬಂದ್ರೂ, ಮತ್ತ್ಯಾರದ್ದೋ ಅಮಾಯಕರ ಅಮೂಲ್ಯ ಜೀವ ಹೋದ್ರೂ ಅದ್ಯಾವ್ದು ಅವರಿಗೆ ಲೆಕ್ಕಕ್ಕಿಲ್ಲ.

ಒಂದಷ್ಟು ಮಾಧ್ಯಮಗಳ ಮುಖ್ಯ ಅಜೆಂಡಾ, ತಾವು ಯಾವ ಮಾರ್ಗದಲ್ಲಾದ್ರೂ ಹಣ ಮಾಡ್ಬೇಕು ಅನ್ನೋದಷ್ಟೇ.! ಅದಕ್ಕೋಸ್ಕರ ಯಾರ ಮನೆಯ ಬೆಡ್ ರೂಂನಲ್ಲಿ ಕ್ಯಾಮೆರಾ ಇಡೋಕೂ ಹೇಸಲ್ಲ ಈ ನೀಚರು. ಮತ್ತೊಂದೆಡೆ ವ್ಯಕ್ತಿ–ವ್ಯಕ್ತಿಗಳ ನಡುವೆ, ಜಾತಿ-ಜಾತಿಗಳ ನಡುವೆ, ಧರ್ಮ–ಧರ್ಮಗಳ ನಡುವೆ ತಂದಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಸಮಾಜವನ್ನ ಸದ್ದಿಲ್ಲದೇ ಒಡೆಯುವ ಕೆಲಸವನ್ನು ನಾಜೂಕಾಗಿ ಈಗಿನ ಒಂದಷ್ಟು ಮಾಧ್ಯಮಗಳು ಮಾಡಿಕೊಂಡು ಬರುತ್ತಿವೆ.

ಕೇಸರಿ-ಬಿಳಿ-ಹಸಿರು ನಡುವೆ ಒಂದು ಅಶೋಕ ಚಕ್ರ.! ಇದನ್ನು ನೋಡಿದ್ರೆ ನಾನು ಭಾರತೀಯ ಅನ್ನೋ ಹೆಮ್ಮೆ ಮೂಡುತ್ತೆ. ಜೊತೆಗೆ ನಮ್ಮ ಮೈಯಲ್ಲಿ ನಮಗರಿವಿಲ್ಲದಂತೆ ಒಂದು ಪವರ್ ಪಾಸ್ ಆಗುತ್ತೆ, ರೋಮಾಂಚನವಾಗುತ್ತೆ. ಈ ಬಾವುಟವನ್ನು ಪ್ರಪಂಚದ ಯಾವ ಮೂಲೆಯಲ್ಲಿದ್ದುಕೊಂಡು ಯಾರೇ ನೋಡಿದ್ರೂ ಇದು ನಮ್ಮ ಹೆಮ್ಮೆಯ ಭಾರತ ಅನ್ನೋ ಗುರುತನ್ನು ಅವರು ಹಿಡಿಯುತ್ತಾರೆ. ಆದ್ರೆ ಇದೇ ಪವಿತ್ರ ಮಾಧ್ಯಮದಲ್ಲಿ ತುರುಕಿಕೊಂಡಿರೋ ಕೆಲ ದುರುಳರು, ನಮ್ಮ ದೇಶವನ್ನು ಒಡೆಯುವ ಕೆಲಸವನ್ನ ರಾಜಾರೋಷವಾಗಿ ಮಾಡಿಕೊಂಡು ಬರುತ್ತಿದ್ದಾರೆ.

ನಮ್ಮದು ಜಾತ್ಯತೀತ ರಾಷ್ಟ್ರ, ಇಲ್ಲಿ ಎಲ್ಲರೂ ಸಮಾನರು ಅನ್ನೋ ಭಾವವನ್ನು ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವಾರು ಧೀಮಂತ ವ್ಯಕ್ತಿಗಳಿಂದ ಹಿಡಿದು ಸದ್ಯ ಇಂದು ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿರವರು ಸೇರಿದಂತೆ ಪ್ರತಿಯೊಬ್ಬರೂ ಇಟ್ಟುಕೊಂಡಿದ್ದಾರೆ.

ಪ್ರಚಂಚದ ಮುಂದೆ ಭಾರತವನ್ನು ಶಕ್ತಿಶಾಲಿ ರಾಷ್ಟ್ರ ಮಾಡಬೇಕೆಂದು ಒಂದಷ್ಟು ಮಂದಿ ಹಗಲಿರುಳು ಶ್ರಮವಹಿಸಿ ದುಡಿಯುತ್ತಿದ್ದರೆ. ಇನ್ನೊಂದೆಡೆ ಕೇಸರಿಯನ್ನು ಪ್ರತಿನಿಧಿಸುವ ಹಿಂದೂಗಳ ಮೇಲೆ ಹಸಿರನ್ನು ಪ್ರೀತಿಸುವ ಮುಸ್ಲಿಂರನ್ನು ಎತ್ತುಕಟ್ಟೋದು..! ಶುಭ್ರ ಬಿಳಿ ಬಣ್ಣವನ್ನ ಸಂಕೇತವನ್ನಿಟ್ಟುಕೊಂಡು ತಮ್ಮ ಧಾರ್ಮಿಕತೆಯನ್ನು ಇಷ್ಟಪಡುವ ಕ್ರೈಸ್ತರ ಮೇಲೆ ಮತ್ತೊಂದು ರೀತಿಯಲ್ಲಿ ಸಮರ ಸಾರೋದನ್ನ ಈ ಕೆಲ ಸಮಾಜಘಾತುಕ ದೃಶ್ಯಮಾಧ್ಯಮಗಳು ತಮ್ಮ ದಿನನಿತ್ಯದ ಅವಿಭಾಜ್ಯ ಭಾಗ ಅನ್ನೋ ರೀತಿಯಲ್ಲಿ ಮಾಡಿಕೊಂಡು ಬರುತ್ತಿವೆ.! ನಮ್ಮ ನಮ್ಮಲ್ಲೇ ಪರಸ್ಪರ ದ್ವೇಷ ಭಾವವನ್ನು ಮೂಡಿಸಿ ತಮ್ಮ ಹಿಡನ್ ಅಜೆಂಡಾವನ್ನು ಸಾಧಿಸುತ್ತಿವೆ!

ಯೋಚನೆ ಮಾಡಿ, ಒಂದು ಕುಟುಂಬದಲ್ಲಿ ಬಿರುಕಿದ್ದರೆ ಹೇಗೆ ಆ ಕುಟುಂಬ ನೆಮ್ಮದಿಯಿಂದ ಇರೋಕೆ ಸಾಧ್ಯ ಇಲ್ವೋ..? ಹಾಗೆಯೇ ಭಾರತಾಂಬೆಯ ಮಕ್ಕಳಾಗಿರೋ ನಾವು ಪರಸ್ಪರ ದ್ವೇಷ, ಅಸೂಯೆಯಿಂದ ಕಚ್ಚಾಡ್ತಿದ್ರೆ ನಿಜಕ್ಕೂ ವ್ಯಕ್ತಿಗತ ಅಭಿವೃದ್ಧಿ ಆಗುತ್ತಾ..? ನಮ್ಮ ಸಮಾಜದ ಅಭಿವೃದ್ಧಿ ಆಗುತ್ತಾ..? ದೇಶ ಅಭಿವೃದ್ಧಿ ಕಡೆ ಮುಖ ಮಾಡುತ್ತಾ..? ಛಾನ್ಸೇ ಇಲ್ಲ..!

ಯಾಕಂದ್ರೆ ನಾವೆಲ್ಲರೂ ಆ ದಿಕ್ಕಿನಲ್ಲಿ ಸಾಗ್ತಿದ್ರೂ ನಮ್ಮನ್ನ, ನಮಗರಿವಿಲ್ಲದಂತೆ ಕಂಟ್ರೋಲ್ ಮಾಡ್ತಿದ್ದಾರೆ ಈ ನೀಚರು.! ಅವರ ತೀಟೆ ತೀರಿಸಿಕೊಳ್ಳಲು ಸಮಾಜ ಒಡೆಯುವಂತಹ ಕೆಲಸವನ್ನು ರಾಜಾರೋಷವಾಗಿ ಮಾಡ್ತಿದ್ರೂ ಅಂತವರಿಗೆ ಲಗಾಮು ಹಾಕುವ ಕೆಲಸವನ್ನು ನಮ್ಮ ವ್ಯವಸ್ಥೆ ಮಾಡದೇ ಇರೋದು ನಿಜಕ್ಕೂ ದುರಂತ.! ಹಾಗಾಗಿಯೇ ಒಬ್ಬ ಮಾರಾಟವಾದ ಪರ್ತಕರ್ತ ಸಾವಿರ ಭಯೋತ್ಪಾದಕನಿಗೆ ಸಮ ಅನ್ನೋ ಮಾತನ್ನು ಬಹಳ ದಶಕಗಳ ಹಿಂದೆಯೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಹೇಳಿದ್ದು.

ಒಬ್ಬ ಭಯೋತ್ಪಾದಕನೇ, ಸಮಾಜಕ್ಕೆ ಯಾವ ರೀತಿ ಮಾರಕವಾಗಬಲ್ಲ ಅನ್ನೋ ಕಲ್ಪನೆ ನಮಗೆಲ್ಲ ಇದೆ, ಹಾಗಿದ್ದಾಗ ಒಬ್ಬ ಮಾರಾಟವಾದ ಪರ್ತಕರ್ತನಲ್ಲಿ ಸಾವಿರ ಭಯೋತ್ಪಾದಕನ ಶಕ್ತಿ ಇರುತ್ತೆ ಅಂದ್ರೆ ಆತ ಸಮಾಜಕ್ಕೆ ಎಷ್ಟು ಹಾನಿ ಮಾಡಬಲ್ಲ ನೀವೇ ಯೋಚಿಸಿ..!

ಆದ್ರೂ ನಾವು ನಿರಾಶರಾಗುವ ಅವಶ್ಯಕತೆ ಇಲ್ಲ, ಯಾಕಂದ್ರೆ ಎಲ್ಲದಕ್ಕೂ ಒಂದು ಅಂತ್ಯ ಅನ್ನೋದು ಇದ್ದೇ ಇರುತ್ತೆ. ಅದಕ್ಕೂ ಸಮಯ ಬಂದೇ ಬರುತ್ತೆ.! ಈ ನಿಟ್ಟಿನಲ್ಲಿ ನಿನ್ನೆ ಸುಪ್ರೀಂ ಕೋರ್ಟ್ ಬೀಸಿರೋ ಛಾಟಿ ಇಂದಿನ ಮಾನಗೆಟ್ಟ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಲು ಸರಿಯಾದ ಸಮಯ. ಇನ್ನೂ ತಮ್ಮನ್ನ ತಾವು ತಿದ್ದಿಕೊಳ್ಳಲ್ಲ ಅಂತಾದ್ರೆ ಜನರೇ ಬುದ್ದಿ ಕಲಿಸೋ ಸಮಯವೂ ದೂರವಿಲ್ಲ!

l ಪ್ರಶಾಂತ್ ಮೂಡಿಗೆರೆ, ಪತ್ರಕರ್ತ, ಚಿಕ್ಕಮಗಳೂರು

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ