NEWSದೇಶ-ವಿದೇಶ

ಭಾರತ ಜನಸಂಖ್ಯೆಯ 1% ಶ್ರೀಮಂತರು ದೇಶದ ಒಟ್ಟು 40.5%ಕ್ಕಿಂತ ಹೆಚ್ಚು ಸಂಪತ್ತು ಹೊಂದಿದ್ದಾರೆ: ‘ಆಕ್ಸ್‌ಫ್ಯಾಮ್ ಇಂಡಿಯಾ’

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಭಾರತದ ಜನಸಂಖ್ಯೆಯ 1% ಶ್ರೀಮಂತರು ದೇಶದ ಒಟ್ಟು ಸಂಪತ್ತಿನ 40.5%ಕ್ಕಿಂತ ಹೆಚ್ಚು ಸಂಪತ್ತನ್ನು 2021ರಲ್ಲಿ ಹೊಂದಿದ್ದರು. ಆದರೆ ದೇಶದ ಜನಸಂಖ್ಯೆಯಲ್ಲಿ ಕೊನೆಯ ಸ್ಥಾನದಲ್ಲಿರುವ 50% ಜನರು ಸುಮಾರು 3%ರಷ್ಟು ಸಂಪತ್ತನ್ನು ಮಾತ್ರ ಹೊಂದಿದ್ದಾರೆ ಎಂದು ಲಾಭರಹಿತ ಸಂಸ್ಥೆಯಾಗಿರುವ ‘ಆಕ್ಸ್‌ಫ್ಯಾಮ್ ಇಂಡಿಯಾ’ ವರದಿಯಲ್ಲಿ ವಿವರಿಸಿದೆ.

‘ಶ್ರೀಮಂತರ ಬದುಕುಳಿಯುವಿಕೆ: ಭಾರತ ಪೂರಕ’ ಎಂಬ ವರದಿಯನ್ನು ಆಕ್ಸ್‌ಫ್ಯಾಮ್ ಬಿಡುಗಡೆ ಮಾಡಿದ್ದು, ಭಾರತದ 100 ಶ್ರೀಮಂತ ವ್ಯಕ್ತಿಗಳ ಒಟ್ಟು ಸಂಪತ್ತು 2022ರಲ್ಲಿ 54.12 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ ಎಂದು ಹೇಳಿದೆ. 2022ರಲ್ಲಿ 10 ಶ್ರೀಮಂತ ಭಾರತೀಯರ ಒಟ್ಟು ಸಂಪತ್ತು 27.52 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು, 2021ರಿಂದ 32.8% ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಒಟ್ಟು ಶತಕೋಟ್ಯಾಧಿಪತಿಗಳ ಸಂಖ್ಯೆಯು 2020ರಲ್ಲಿ 102 ಇತ್ತು. 2021ರಲ್ಲಿ 142ಕ್ಕೆ ಏರಿಕೆಯಾಯಿತು. 2022ರಲ್ಲಿ ಈ ಸಂಖ್ಯೆ 166ಕ್ಕೆ ತಲುಪಿದೆ. ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ 22.89 ಕೋಟಿ ಜನರು ಬಡತನದಿಂದ ನರಳುತ್ತಿದ್ದಾರೆ. ಇದು ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ತೆರಿಗೆ ಪದ್ಧತಿಯು ಪ್ರಗತಿಪರವಾಗದಿದ್ದರೆ ಈ ಅಸಮಾನತೆ ಮತ್ತಷ್ಟು ಉಲ್ಬಣವಾಗಬಹುದು ಎಂದು ವರದಿ ಎಚ್ಚರಿಸಿದೆ.

ಪ್ರಗತಿಪರ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆಯ ಪ್ರಮಾಣವು ಹೆಚ್ಚಾದಂತೆ ತೆರಿಗೆ ದರವು ಹೆಚ್ಚಾಗುತ್ತದೆ. ಭಾರತದಲ್ಲಿ ಆದಾಯ ತೆರಿಗೆ ದರಗಳು ಆದಾಯವನ್ನು ಆಧರಿಸಿರುತ್ತದೆ, ಆದರೆ ಪರೋಕ್ಷ ತೆರಿಗೆಗಳು ಅವರ ಗಳಿಕೆಯನ್ನು ಲೆಕ್ಕಿಸದೆ ಎಲ್ಲ ವ್ಯಕ್ತಿಗಳಿಗೆ ಒಂದೇ ರೀತಿಯಲ್ಲಿ ಇರುತ್ತದೆ ಎಂದು ‘ಆಕ್ಸ್‌ಫ್ಯಾಮ್ ಇಂಡಿಯಾ’ ಗಮನಸೆಳೆದಿದೆ.

“ವ್ಯಾಟ್ [ಮೌಲ್ಯವರ್ಧಿತ ತೆರಿಗೆ] ನಂತಹ ತೆರಿಗೆಗಳ ಮೇಲೆ ಭಾರೀ ಅವಲಂಬಿಸುವುದು ಅಸಮಾನತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಬಡ ಜನರು ತಮ್ಮ ಆದಾಯದ ಹೆಚ್ಚಿನ ಪಾಲನ್ನು ಇದಕ್ಕಾಗಿ ಪಾವತಿಸಬೇಕಾಗುತ್ತದೆ” ಎಂದಿದೆ.

ದೇಶದ ಜನಸಂಖ್ಯೆಯ ಕಟ್ಟೆಕಡೆಯಲ್ಲಿರುವ 50%ರಷ್ಟು ಜನರನ್ನು ಮೇಲ್ಬಾಗದಲ್ಲಿನ 10%ರಷ್ಟು ಜನರಿಗೆ ಹೋಲಿಸಿದರೆ ಆದಾಯದ ಶೇಕಡಾವಾರು ಪ್ರಮಾಣದಲ್ಲಿ ಆರು ಪಟ್ಟು ಹೆಚ್ಚು ಪರೋಕ್ಷ ತೆರಿಗೆಯನ್ನು ಶೇ.50ರಷ್ಟು ಜನರು ಪಾವತಿಸುತ್ತಾರೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.

ಆಹಾರ ಮತ್ತು ಆಹಾರೇತರ ವಸ್ತುಗಳಿಂದ ಸಂಗ್ರಹಿಸಲಾದ ಒಟ್ಟು ತೆರಿಗೆಗಳಲ್ಲಿ 64.3%ರಷ್ಟನ್ನು ಕಟ್ಟಕಡೆಯ 50% ಜನರಿಂದ ಪಡೆಯಲಾಗಿದೆ. ಸಂಪತ್ತಿನ ಮೇಲೆ ತೆರಿಗೆಯನ್ನು ವಿಧಿಸಿದರೆ ಸರ್ಕಾರದ ಆದಾಯ ಹೆಚ್ಚುತ್ತದೆ ಎಂದು ಆಕ್ಸ್‌ಫ್ಯಾಮ್ ಶಿಫಾರಸು ಮಾಡಿದೆ. ಈ ಆದಾಯವನ್ನು ದೇಶದ ಅಭಿವೃದ್ಧಿಗೆ ಬಳಸಬಹುದು ಎಂದಿದೆ.

ಉದಾಹರಣೆಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿಯವರು 2017-2021ರ ಅವಧಿಯಲ್ಲಿ ಅವಾಸ್ತವಿಕವಾಗಿ ಗಳಿಸಿದ ಲಾಭಗಳ ಮೇಲೆ ಒಂದು-ಬಾರಿ ತೆರಿಗೆಯನ್ನು ವಿಧಿಸಿದರೆ 1.79 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಬಹುದು. ಇಷ್ಟು ಹಣ ಒಂದು ವರ್ಷಕ್ಕೆ 50 ಲಕ್ಷಕ್ಕೂ ಹೆಚ್ಚು ಭಾರತೀಯ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಾಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ