NEWSನಮ್ಮಜಿಲ್ಲೆನಮ್ಮರಾಜ್ಯಸಿನಿಪಥ

ಸಾರಿಗೆ ನೌಕರರ ಮುಷ್ಕರಕ್ಕೆ ಅಂದು ರಾಕಿಂಗ್‌ ಸ್ಟಾರ್‌ ಯಶ್‌ ಬೆಂಬಲ – ಜ.30ರ ಧರಣಿಗೆ ಸಾಥ್‌ ನೀಡಲಿದೆ ಇಡೀ ಸ್ಯಾಂಡಲ್‌ವುಡ್‌..!?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವೇತನ ಆಯೋಗ ಮಾದರಿಯಲ್ಲಿ ನಮಗೂ ವೇತನ ಕೊಡುವ ಮೂಲಕ ವೇತನ ತಾರತಮ್ಯ ನೀತಿ ಕೈ ಬಿಡಬೇಕು ಎಂದು ಕಳೆದ 2021ರ ಏ.7ರಿಂದ ಏ.21ರವರೆಗೂ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರಕ್ಕೆ ಅಂದು ರಾಕಿಂಗ್‌ಸ್ಟಾರ್‌ ಯಶ್‌ ಸಾಥ್‌ ನೀಡಿದ್ದರು.

ಅದರಂತೆ ಈಗ ಅಂದರೆ ಇದೇ ಜ.30ರಿಂದ ಪ್ರಮುಖವಾಗಿ ಮೂರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮತ್ತೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘ ಸಜ್ಜಾಗುತ್ತಿದ್ದು, ಈ ಧರಣಿಯನ್ನು ಅನೇಕ ಸಿನಿಮಾ ನಟ ನಟಿಯರು ಬೆಂಬಲಿಸುವ ಸೂಚನೆ ನೀಡಿದ್ದಾರೆ.

ಆದರೆ, ಅವರನ್ನು ಕರೆತರುವ ಕೆಲಸವನ್ನು ಸಂಘದ ಪದಾಧಿಕಾರಿಗಳು ಸೇರಿದಂತೆ 4ನಿಗಮಗಳ ಎಲ್ಲ ನೌಕರರು ಪ್ರಯತ್ನಿಸಬೇಕು. ಆ ಮೂಲಕ ತಮ್ಮ ದಶಕಗಳ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು. ಇದೇ ಸರಿಯಾದ ಸಮಯ ಈ ಸಮಯದಲ್ಲಿ ನೌಕರರ ಪರವಿರುವ ಎಲ್ಲ ಸಂಘಟನೆಗಳು ಹೋರಾಟವನ್ನು ಬೆಂಬಲಿಸಬೇಕು.

ಇಲ್ಲಿ ಯಾವುದೇ ಭೇದಭಾವಬಿಟ್ಟು ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಒಗ್ಗಟ್ಟು ಪ್ರದರ್ಶಿಸಿದರೆ, ಸರ್ಕಾರ ಮತ್ತು ಆಡಳಿತ ಮಂಡಳಿ ಮಣಿಯದಿರದು. ಆದರೆ ಸಂಘಟನೆಗಳು ತಮ್ಮ ಮನಸ್ತಾಪಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಅಷ್ಟೇ. ಹೋರಾಟ ಸಫಲವಾದ ಬಳಿಕ ಆಯಾಯ ಸಂಘಟನೆಗಳು ತಮ್ಮ ಅಜಂಡದಂತೆ ಮುಂದುವರಿಯಲಿ. ಇಲ್ಲಿ ನೌಕರರ ಹಿತಕಾಪಾಡುವುದು ಪ್ರಸ್ತುತ ಪ್ರಮುಖವಾಗಿರುವುದರಿಂದ ಎಲ್ಲ ಸಂಘಟನೆಗಳು ಹೋರಟದಲ್ಲಿ ಭಾಗವಹಿಸಬೇಕು.

ಇನ್ನು ಚಾಲಕ, ನಿರ್ವಾಹಕರ ಸಂಕಷ್ಟದ ಅರಿವು ಈಗಗಾಲೇ ಸ್ಯಾಂಡಲ್‌ವುಡ್‌ನ ಬಹುತೇಕ ಎಲ್ಲ ಖ್ಯಾತ ನಟ ನಟಿಯರು ಸೇರಿದಂತೆ ಪ್ರತಿಯೋಬ್ಬರಿಗೂ ಇದೆ. ಹೀಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿರುವ ನಮಗೆ ತಮ್ಮ ಬೆಂಬಲ ಸೂಚಿಸಬೇಕು ಎಂದು ಡಾ.ಶಿವರಾಜ್‌ ಕುಮಾರ್‌, ರವಿಚಂದ್ರನ್‌, ಯಶ್, ದುನಿಯಾವಿಜಿ, ಪ್ರಜ್ವಲ್‌ದೇವರಾಜು ಸೇರಿದಂತೆ ಎಲ್ಲ ತಾರೆಯರಿಗೂ ಪತ್ರ ಬರೆದು ಆಹ್ವಾನಿಸುವ ಮೂಲ ಖುದ್ದು ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಕೋರುವುದು ಅವಶ್ಯವಿದೆ.

ಇದಿಷ್ಟೇ ಅಲ್ಲದೆ ಭೇದ ಮರೆತು ಸಂಘದ ಪದಾಧಿಕಾರಿಗಳಿಗೆ ಎಲ್ಲ ನೌಕರರು ಮತ್ತು ನೌಕರರ ಸಂಘಟನೆಗಳ ಮುಖಂಡರು ಸಾಥ್‌ ನೀಡಬೇಕು. ನೌಕರರ ಮನವಿಗೆ ಬಹುತೇಕ ಎಲ್ಲ ನಟ, ನಟಿಯರು ಸ್ಪಂದಿಸುತ್ತೇವೆ ಎಂದು ಈಗಾಗಲೇ ಹೇಳಿಕೊಂಡಿರುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಅವರನ್ನು ಕರೆತರುವ ಜಾಣ್ಮೆಯನ್ನು ತೋರಬೇಕಿದೆ.

ಈ ಹಿಂದೆ (2101ರಲ್ಲಿ) ಯಶ್‌ ಅವರು ಹೇಳಿಕೆ ನೀಡಿ, ನಾನು ಸ್ವತಃ ಬಸ್ ಚಾಲಕನ ಪುತ್ರನಾಗಿ ನನಗೆ ನಿಮ್ಮ ಕಷ್ಟ ಗೊತ್ತಿದೆ. ನೀವು ಕೆಲಸದ ಮೇಲೆ ಇಟ್ಟಿರುವ ನಂಬಿಕೆ ಕಾಳಜಿಯನ್ನು ನಾನು ಹತ್ತಿರದಿಂದಲೇ ಕಂಡಿದ್ದೇನೆ. ಹೀಗಾಗಿ ನಿಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಯ ನಿಟ್ಟಿನಲ್ಲಿ ನಾನು ನಿಮ್ಮ ಜತೆ ಇದ್ದೇನೆ ಎಂದು ನೌಕರರ ಕೂಟಕ್ಕೆ ಧೈರ್ಯ ತುಂಬಿದ್ದರು.

ಜತೆಗೆ ನಿಮ್ಮ ಬೇಡಿಕೆ ಕುರಿತು ನಾನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೂ ಸುರ್ದೀಘ ಚರ್ಚೆ ಮಾಡಿದ್ದು ಅವರು ನಿಮ್ಮ ವೇತನ ಬೇಡಿಕೆ ಈಡೇರುಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದರು. ಆದರೆ ಆ ಬಳಿಕ ಆಗಿದ್ದು ಏನು ಎಂಬುವುದು ಈಗ ನಮ್ಮ ಕಣ್ಣ ಮುಂದೆಯೇ ಇದೆ. ಮತ್ತೆ ಆ ರೀತಿ ಭರವಸೆ ಕೊಟ್ಟು ಹೋಗುವುದು ಬೇಡ. ಎಲ್ಲವನ್ನು ಸರ್ಕಾರ ಈಡೇರಿಸಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ತಾರೆಯರು, ಕನ್ನಡಪರ ಸಂಘಟನೆಗಳು ಸೇರಿದಂತೆ ಎಲ್ಲರನ್ನು ಹೋರಾಟಕ್ಕೆ ಆಹ್ವಾನಿಸಬೇಕಿದೆ.

ಹೀಗಾದರೆ ಮಾತ್ರ ಸಾರಿಗೆ ನೌಕರರ ಹೋರಾಟಕ್ಕೆ ಬಹುತೇಕ ಫಲ ಸಿಗಬಹುದು. ಇಲ್ಲ ಹೋರಾಟ ಮಾಡುತ್ತೇವೆ ಎಂದು ಹೇಳಿಕೊಂಡು ಕೋಣ ನೀರಿಗೆಳೆಯಿತು ಎತ್ತು ಏರಿಗೆಳೆಯಿತು ಎಂಬ ರೀತಿ ಹೋರಾಟ ಹತ್ತಿಕ್ಕುವ ಕೆಲಸವಾದರೆ ಮತ್ತೆ ನೌಕರರು ಸಮಸ್ಯೆಯ ಸುಳಿಯಗೆ ಸಿಲುಕುತ್ತಾರೆ. ಹೀಗಾಗಿ ಎಲ್ಲರನ್ನು ಆಹ್ವಾನಿಸಿ ಬೆಂಬಲ ಕೇಳುವುದು ಈಗ ಸಂಘದ ಸರದಿಯಾಗಿದೆ.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...