NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ವೇತನ ಹೆಚ್ಚಳ ಸಂಬಂಧ ಹೈ ಕೋರ್ಟ್‌ನಲ್ಲಿ ಜ.30ರೊಳಗೆ ಅರ್ಜಿ ಸಲ್ಲಿಕೆ -ವಕೀಲ ಶಿವರಾಜು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳಲ್ಲೂ ಕಳೆದ ಮೂರು ವರ್ಷದಿಂದ ವೇತನ ಪರಿಷ್ಕರಣೆ ಆಗದಿರುವುದನ್ನು ಪ್ರಶ್ನಿಸಿ ಹೈ ಕೋರ್ಟ್‌ನಲ್ಲಿ ಅತೀ ಶೀಘ್ರದಲ್ಲೇ ಅರ್ಜಿಸಲ್ಲಿಸಲಿದ್ದಾರೆ ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್‌.ಬಿ. ಶಿವರಾಜು ಅವರು.

ಕಳೆದ 2020ರ ಜನವರಿ 1ರಿಂದ ಅಂದರೆ ಸರಿ ಸುಮಾರು 3ವರ್ಷ ಒಂದು ತಿಂಗಳ ಹಿಂದೆಯೇ ನಾಲ್ಕೂ ನಿಗಮಗಳಲ್ಲೂ ವೇತನ ಪರಿಷ್ಕರಣೆ ಆಗಬೇಕಿತ್ತು. ಆದರೆ ಈವರೆಗೂ ಆಗಿಲ್ಲ. ಹೀಗಾಗಿ ಅಧಿಕಾರಿಗಳು ಮತ್ತು ನೌಕರರು ಕಳೆದ ಮೂರು ವರ್ಷದಿಂದಲೂ ವೇತನ ಹೆಚ್ಚಳವಿಲ್ಲದೆ ದುಡಿಯುತ್ತಿದ್ದಾರೆ.

ಕಳೆದ ಮೂರು ವರ್ಷದ ಹಿಂದೆಯೇ ಆಗಬೇಕಿರುವ ವೇತನ ಪರಿಷ್ಕರಣೆ ಇನ್ನೂ ಆಗಿಲ್ಲ. ಹೀಗಾಗಿ ಈ ಬಗ್ಗೆ ಅರ್ಜಿ ಸಲ್ಲಿಸಲಾಗುವುದು ಎಂದು ವಕೀಲರಾದ ಶಿವರಾಜು ತಿಳಿಸಿದ್ದಾರೆ.

ಇನ್ನು ವೇತನ ಸೇರಿದಂತೆ ನೌಕರರಿಗೆ ನಿಗಮಗಳಲ್ಲಿ ಆಗುತ್ತಿರುವ ಅನೇಕ ಸಮಸ್ಯೆಗಳನ್ನು ಈ ಅರ್ಜಿ ಒಳಗೊಂಡಿದ್ದು, ಆ ಎಲ್ಲ ಜ್ವಲಂತ ಸಮಸ್ಯೆಗಳ ಬಗ್ಗೆ ಅರ್ಜಿಸಲ್ಲಿಸಲಾಗುವುದು.

ಇನ್ನು ಈವರೆಗೂ ವೇತನ ಪರಿಷ್ಕರಣೆ ಸಂಬಂಧ ಹೈ ಕೋರ್ಟ್‌ನಲ್ಲಿ ಅರ್ಜಿ ಹಾಕದೆ ಇರುವುದಕ್ಕೆ ಪ್ರಮುಖ ಕಾರಣ ನೌಕರರು ಮತ್ತು ಕೆಲ ಸಂಘಟನೆಗಳ ಮುಖಂಡರು ಸರ್ಕಾರ ಮತ್ತು ಆಡಳಿತ ಮಂಡಳಿಯೊಂದಿಗೆ ನಾವು ಮಾತನಾಡುತ್ತಿದ್ದೇವೆ. ಹೀಗಾಗಿ ಸದ್ಯ ನೀವು ಕೋರ್ಟ್‌ ಮೆಟ್ಟಿಲೇರಬೇಡಿ ಎಂದು ಮನವಿ ಮಾಡಿದ್ದರು. ಹೀಗಾಗಿ  ವಿಳಂಬವಾಗಿದೆ ಎಂದು ತಿಳಿಸಿದರು.

ಆದರೆ, ನೌಕರರ ಮತ್ತು ಸಂಘಟನೆಗಳ ಮನವಿಗೆ ಸರ್ಕಾರವಾಗಲೀ ಅಥವಾ ಆಡಳಿತ ಮಂಡಳಿಯಾಗಲೀ ಸ್ಪಂದಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಇದೇ ಜ.30ರ ಒಳಗೆ ನೌಕರರಿಗೆ ಸರ್ಕಾರದಿಂದ ಸಿಹಿ ಸುದ್ದಿ ಬರದಿದ್ದರೆ ನಾವು ಜ.30ರೊಳಗೇ ಹೈ ಕೋರ್ಟ್‌ನಲ್ಲಿ ವೇತನ ಹೆಚ್ಚಳ ಸಂಬಂಧ ಅರ್ಜಿಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಇನ್ನು ಕೋರ್ಟ್‌ನಲ್ಲಿ ವಕಾಲತ್ತು ವಹಿಸಿ ವಾದ ಮಾಡುವ ಕುರಿತು ನುರಿತ ಹಿರಿಯ ವಕೀಲರ ತಂಡವು ಸಜ್ಜಾಗಿದ್ದು, ಈ ಸಂಬಂಧ ಈಗಾಗಲೇ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ. ಇನ್ನೇನಿದ್ದರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಸಾಧ್ಯವಾದಷ್ಟು ಬೇಗ ನೌಕರರಿಗೆ ಕಳೆದ ಮೂರು ವರ್ಷದಿಂದಲೂ ವೇತನ ಹೆಚ್ಚಳವಾಗದೆ ನನೆಗುದಿಗೆ ಬಿದ್ದಿರುವುದನ್ನು ತೆರವುಗೊಳಿಸಲು ಶ್ರಮಿಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ