ಪಿರಿಯಾಪಟ್ಟಣ : ತಾಲೂಕಿನ ಕಿರಂಗೂರು ಗ್ರಾಮದ ಜಮೀನಿಗೆ ಕಾಡಾನೆಗಳು ಹಿಂಡು ದಾಳಿಮಾಡಿ ಜೋಳದ ಬೆಳೆಯನ್ನು ನಾಶಪಡಿಸಿರುವ ಘಟನೆ ಜರುಗಿದೆ.
ತಾಲೂಕಿನ ಕಿರಂಗೂರು ಗ್ರಾಮದಲ್ಲಿ ಜ.19ರ ತಡರಾತ್ರಿ ನುಗ್ಗಿರುವ ಆನೆಗಳ ಹಿಂಡು ಗ್ರಾಮದ ಜ್ಯೋತಿ ಎಂಬುವವರಿಗೆ ಸೇರಿದ ಸರ್ವೆ ನಂ. 10 ರ ಜಮೀನಿನಲ್ಲಿ ಮತ್ತು ನಟರಾಜು ಎಂಬುವವರಿಗೆ ಸೇರಿದ ಸರ್ವೆ ನಂ.25 ರ ಹೊಲದಲ್ಲಿ ಬೆಳೆದಿದ್ದ ಬೆಳೆಯನ್ನು ನಾಶ ಮಾಡಿವೆ.
ಅನೇಕ ವರ್ಷಗಳಿಂದ ಇರದ ಆನೆದಾಳಿ ಇತ್ತೀಚೆಗೆ ಆನೆ ಕಂದಕಗಳು ಮುಚ್ಚಿಹೋಗಿದ್ದು, ಇವುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ರಿಪೇರಿ ಮಾಡಿಸದ ಕಾರಣ ಆನೆಗಳು ನೇರವಾಗಿ ಪ್ರಸ್ತುತ ಜಮೀನುಗಳಿಗೆ ಬರುತ್ತಿದ್ದು ರೈತರಿಗೆ ನಷ್ಟ ಉಂಟುಮಾಡುತ್ತಿವೆ.
ಅಲ್ಲದೆ ರಾತ್ರಿವೇಳೆ ಜಮೀನಿಗೆ ನುಗ್ಗಿ ಓಡಾಡುತ್ತಿರುವುದರಿಂದ ಆನೆ ದಾಳಿಕೆ ಸಿಲುಕಿ ಫಸಲು ಇನ್ನಷ್ಟು ಹಾನಿಯಾಗುತ್ತಿದ್ದು ರೈತರಿಗೆ ತೊಂದರೆ ಉಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಶೀಘ್ರದಲ್ಲಿ ಕ್ರಮವಹಿಸಿ ಹಾನಿಗೊಳಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.