NEWSನಮ್ಮರಾಜ್ಯಲೇಖನಗಳು

ವಾಟ್ಸ್‌ಆಪ್‌ನಲ್ಲಿ ಇನ್ನು ಮುಂದೆ ಕಾಲ್​ ಶೆಡ್ಯೂಲ್​ ಮಾಡಿಯೂ ಇಟ್ಟುಕೊಳ್ಳಬಹುದು

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಅಲ್ಪಸ್ವಲ್ಪ ಓದು ಬರಹ ಬರುವವರು ಸೇರಿದಂತೆ ಎಲ್ಲರನ್ನು ತನ್ನತ್ತ ಸೆಳೆದುಕೊಂಡಿರುವ ಜನಪ್ರಿ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆಪ್​ ಇತ್ತೀಚೆಗಂತೂ ಹೊಸ ಫೀಚರ್ಸ್​ಗಳನ್ನು ಪರಿಚಯಿಸುವ ಮೂಲಕ ಇತರ ಸಾಮಾಜಿಕ ಜಾಲತಾಣಗಳನ್ನು ಹಿಂದಿಕ್ಕುವುದರಲ್ಲಿ ಸದಾ ಮುಂದಿದೆ ಎಂಬುದನ್ನು ತೋರಿಸುತ್ತಲೇ ಇದೆ.

ತನ್ನ ಬಳಕೆದಾರರಿಗಾಗಿ ಕಳೆದ ವರ್ಷ ಹಲವಾರು ಫೀಚರ್ಸ್​​ಗಳನ್ನು ಹೊರತಂದಿದ್ದಲ್ಲೆ ಈಗ ಮತ್ತೆ ಅದೇ ರೀತಿಯಲ್ಲಿ 2023ರಲ್ಲೂ ಹಲವಾರು ನವೀಕರಣಗಳನ್ನು ಮಾಡುತ್ತಿದ್ದು, ಈ ವರ್ಷದ ಆರಂಭದಿಂದಲೇ WhatsApp ತನ್ನಲ್ಲಿನ ಕಾರ್ಯವೈಖರಿಯಲ್ಲಿ ಬದಲಾವಣೆಯನ್ನು ತರುತ್ತಲೇ ಇದೆ.

ಕೆಲದಿನಗಳ ಹಿಂದಷ್ಟೇ ವಾಟ್ಸ್‌ಆಪ್​ ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್ ಶೇರ್ ಮಾಡುವ ಫೀಚರ್ ಬಿಡುಗಡೆ ಮಾಡಿತ್ತು. ತದನಂತರದಲ್ಲಿ ಬ್ಲಾಕ್​ ಶಾರ್ಟ್​ಕಟ್ (Block Shortcut)​ ಮಾಡುವ ಫೀಚರ್ ಪರಿಚಯಿಸಿತ್ತು. ಇದೀಗ ಮತ್ತೆ ಹೊ ಅಪ್ಡೇಟ್​ ಬಿಡುಗಡೆ ಮಾಡಿದೆ.

ವಾಟ್ಸ್‌ಆಪ್​ ಸದ್ಯ ಪರಿಚಯಿಸುತ್ತಿರುವ ಈ ಫೀಚರ್ ಇದುವರೆಗೆ ಬೇರೆ ಯಾವುದೇ ಅಪ್ಲಿಕೇಶನ್​ಗಳಲ್ಲೂ ಇಲ್ಲ. ಹೀಗಾಗಿ ಈ ಪರಿಚಯಿಸುತ್ತಿರುವ ಈ ಅಪ್ಲಿಕೇಶನ್‌ನಿಂದಾಗಿ ಇನ್ಮುಂದೆ ವಾಟ್ಸ್‌ಆಪ್​ನಲ್ಲಿ ಕಾಲ್​ ಶೆಡ್ಯೂಲ್​ ಮಾಡಿಯೂ ಇಟ್ಟುಕೊಳ್ಳಬಹುದಾಗಿದೆಯಂತೆ.

ವಾಟ್ಸ್‌ಆಪ್‌ನಲ್ಲಿ ಈಗಾಗಲೇ ವಾಯ್ಸ್‌ ಹಾಗೂ ವಿಡಿಯೋ ಕರೆ ಮಾಡಲು ಅವಕಾಶ ನೀಡಲಾಗಿದೆ. ಅದಾಗ್ಯೂ ಈ ವಿಭಾಗದಲ್ಲಿ ಇನ್ನಷ್ಟು ಹೊಸ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿರುವ ವಾಟ್ಸ್‌ಆಪ್ ಬಳಕೆದಾರರಿಗೆ ಮುಂಚಿತವಾಗಿಯೇ ಕರೆಯನ್ನು ನಿಗದಿಪಡಿಸುವ ಆಯ್ಕೆಯ ಫೀಚರ್ಸ್‌ ನೀಡುವಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.

ಈ ಸೌಲಭ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರಲಿದ್ದು, ಈ ಮೂಲಕ ಬೇಕಾದವರ ಜತೆಗೆ ಸಮಯಕ್ಕಿಂತ ಮುಂಚಿತವಾಗಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕರೆಯನ್ನು ಯೋಜಿಸಬಹುದಾಗಿದೆ. ಈ ಮೂಲಕ ಇನ್ಮುಂದೆ ಬಳಕೆದಾರರು ಯಾವುದೇ ಕಾಲ್​ಗಳನ್ನು ವಾಟ್ಸ್‌ಆಪ್​ನಲ್ಲಿ ಮಿಸ್​ ಮಾಡಿಕೊಳ್ಳುವುದಿಲ್ಲ ಎಂದು ಕಂಪೆನಿ ಹೇಳಿದೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ