NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡುತ್ತೇವೆ – ವೇತನ ಶೀಘ್ರ ಪರಿಷ್ಕರಣೆ : ಸಾರಿಗೆ ಸಚಿವರ ಬೇಜವಾಬ್ದಾರಿ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ವೇತನ ಸಂಬಂಧ ಮನಸ್ಸಿಗೆ ಬಂದಂತೆ ಒಂದೊಂದು ಸಮಾರಂಭದಲ್ಲೂ ಒಂದೊಂದು ಹೇಳಿಕೆ ನೀಡುತ್ತ ತಮ್ಮ ಬೇಜವಾಬ್ದಾರಿಯನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಪ್ರದರ್ಶಿಸುತ್ತಿದ್ದಾರೆ.

ಇದೇ ಫೆ.11ರಂದು ಒಂದು ಕಡೆ ವೇತನ ಪರಿಷ್ಕರಣೆ ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಂದು ಕಡೆ 7ನೇ ವೇತನ ಆಯೋಗ ಮಾದರಿ ಜಾರಿ ಮಾಡಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.

ಅಂದರೆ ಸರ್ಕಾರಿ ನೌಕರಿಗೆ ಇನ್ನೂ. ಏಳನೇ ವೇತನ ಆಯೋಗವೇ ಜಾರಿ ಆಗಿಲ್ಲ. ಈ ನಡುವೆಯೇ ಸಾರಿಗೆ ನೌಕರರಿಗೆ ಏಳನೇ ವೇತನ ನೀಡುತ್ತೇವೆ ಎಂದು ಹೇಳಿಕೆ ನೀಡಿರುವುದು ಏಕೆ. ಈ ಸಚಿವರಿಗೆ ತಲೆ ಕೆಟ್ಟಿದೆಯೇ? ಇವರ ಸ್ಥಾನಕ್ಕಾದರೂ ಗೌರವಯುತವಾಗಿ ನಡೆದುಕೊಳ್ಳಬಾರದೆ ಎಂದು ತಮ್ಮದೆ ನಿಗಮದ ನೌಕರರ ಕಿಡಿಕಾರಿದ್ದಾರೆ.

ಈ ರೀತಿ ನೌಕರರನ್ನು ದಾರಿ ತಪ್ಪಿಸಿಕೊಂಡು ಬರುತ್ತಿರುವ ಈ ಬಿಜೆಪಿ ಸರ್ಕಾರ ಈಗಾಗಲೇ ಕಳೆದ 2020ರ ಜನವರಿ 1ರಿಂದ ಜಾರಿಗೆ ಬರಬೇಕಿರುವ ವೇತನ ಹೆಚ್ಚಳವನ್ನು ಮಾಡದೆ ಯಾಮಾರಿಸಿಕೊಂಡು ಬಂದಿದೆ. ಈಗ ಚುನಾವಣೆ ಸಮೀಪದಲ್ಲಿದ್ದರೂ ಈ ರೀತಿ ಗೊಂದಲದ ಹೇಳಿಕೆ ನೀಡುವ ಮೂಲಕ ನಗೆ ಪಾಟಲಿಗೆ ತುತ್ತಾಗಿರುವುದಲ್ಲದೆ ಸಾರಿಗೆ ಅಧಿಕಾರಿಗಳು ಮತ್ತು ನೌಕರರ ಅಸಮಾಧಾನಕ್ಕೂ ಕಾರಣರಾಗಿದ್ದಾರೆ.

ಇನ್ನು ಬಿಜೆಪಿ ಸರ್ಕಾರಕ್ಕೆ ನೌಕರರ ಮತ್ತು ಸಾರ್ವಜನಿಕ ಸೇವೆ ನೀಡುತ್ತಿರುವ ಸಾರಿಗೆ ನಿಗಮ ಮಂಡಳಿಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ಇದರಿಂದ ಸಾರ್ವಜನಿಕರನ್ನೂ ಒಂದು ರೀತಿ ತೊಂದರೆಗೆ ಸಿಲುಕಿಸುತ್ತಿದ್ದು, ಈ ಸರ್ಕಾರ ಯಾರೊಬ್ಬರ ಬಗ್ಗೆಯೂ ಗಮನ ಹರಿಸದಿರುವುದು ಖೇದಕರ ಸಂಗತಿಯಾಗಿದೆ.

ಒಂದು ಕಡೆ ವೇತನ ಆಯೋಗ ಮಾದರಿಯಲ್ಲಿ ಸಾರಿಗೆ ನೌಕರರಿಗೆ ವೇತನ ಕೊಡಲಾಗುವುದು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿಕೆ ನೀಡುತ್ತಾರೆ. ಮತ್ತೆ ವೇತನ ಮರಿಷ್ಕರಣೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು ಅತೀ ಶೀಘ್ರದಲ್ಲೇ ನೌಕರರಿಗೆ ಸಿಹಿ ಸುದ್ದಿ ಕೊಡುತ್ತೇವೆ ಎಂದು ಹೇಳಿಕೆ ನೀಡುತ್ತಾರೆ.

ಸಚಿವರ ಈ ಗೊಂದಲದ ಹೇಳಿಕೆ ಗಮನಿಸಿದರೆ ಇವರ ಸರ್ಕಾರ ಇರುವವರೆಗೂ ಈ ರೀತಿ ಹೇಳಿಕೆ ನೀಡುತ್ತಲೇ ನೌಕರರನ್ನು ಯಾಮಾರಿಸಿಕೊಂಡು ಬಂದಿದೆ. ಇನ್ನು ಇದನ್ನೇ ಮುಂದುವರಿಸಿ ನಂತರ ಚುನಾವಣಾ ನೀತಿಸಂಹಿತೆ ಜಾರಿಯಾಗಿದೆ ಈಗ ಏನು ಮಾಡಲು ಸಾಧ್ಯವಿಲ್ಲ. ಈಬಾರಿ ನಮಗೇ ಓಟ್‌ ಮಾಡಿ ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಹುಸಿ ಭರವಸೆ ನೀಡಿ ಚುನಾವಣೆ ಪ್ರಚಾರದಲ್ಲಿ ಮುಳುತ್ತಾರೆ ಎಂದು ಎನಿಸುತ್ತಿದೆ.

ನಾಚಿಕೆ ಆಗಬೇಕು ಈ ಸರ್ಕಾರಕ್ಕೆ. ಕಳೆದ ಸುಮಾರು 7 ವರ್ಷದಿಂದಲೂ ವೇತನ ಹೆಚ್ಚಳಕ್ಕಾಗಿ ಎದುರು ನೋಡುತ್ತಿರುವ ನೌಕರರನ್ನು ವಜಾ, ಅಮಾನತು, ವರ್ಗಾವಣೆ ಇವುಗಳ ಜತೆಗೆ ಪೊಲೀಸ್‌ ಕೇಸ್‌ ಹಾಕಿಸಿ ದರ್ಪ ಮೆರೆಯುತ್ತಿರುವ ಇದಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನೌಕರರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ