Wednesday, October 30, 2024
CrimeNEWSನಮ್ಮಜಿಲ್ಲೆ

ಬಾರ್‌ನಲ್ಲಿ ವೈನ್‌ಕೊಡಲು ತಡಮಾಡಿದ್ದಕ್ಕೆ ಹಲ್ಲೆ : ಬಾರ್‌ ಕೆಲಸಗಾರ 23ದಿನಗಳ ಬಳಿಕ ಮೃತ – ಇಬ್ಬರ ಬಂಧನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಾರ್‌ನಲ್ಲಿ ಮದ್ಯಕೊಡಲು ತಡಮಾಡಿದ್ದ ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದರಿಂದ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಆಸ್ಪತ್ರೆಗೆ ದಾಖಲಾಗಿದ್ದ ಬಾರ್‌ನಲ್ಲಿ ಕೆಲಸ ಮಾಡುವ ಕಾರ್ಮಿಕ ಚಿಕತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕುಮಾರಸ್ವಾಮಿ ಬಡಾವಣೆಯ ಪೊಲೀಸ್ ಠಾಣೆಗೆ ಅನತಿ ದೂರದಲ್ಲಿರುವ ಎಸ್‍ಆರ್‌ಆರ್‌ ಬಾರ್‌ನಲ್ಲಿ ಕಳೆದ ಜನವರಿ 22ರಂದು ಹಲ್ಲೆಗೊಳಗಾಗಿದ್ದ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ ಎಂಬಾತನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದವನು.

ಸುರೇಶ್ ಹಾಗೂ ವಿನೋದ್ ಎಂಬುವರು ಕುಡಿದ ಅಮಲಿನಲ್ಲಿ ಬಸವರಾಜನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು. ಜ.22ರಿಂದ ಸಾವಿನ ಜತೆ ಹೋರಾಟ ನಡೆಸುತ್ತಿದ್ದ ಬಸವರಾಜು ಗುರುವಾರ ಅಸುನೀಗಿದ್ದಾರೆ.

ಘಟನೆ ವಿವರ: ಸುರೇಶ್ ಹಾಗೂ ವಿನೋದ್ ಇಬ್ಬರೂ ಪದವೀಧರರು. ಎಲೆಕ್ಟ್ರಾನಿಕ್‍ಗೆ ಸಂಬಂಧಿಸಿದ ಕೆಲಸ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು 22 ರರಂದು ಸಂಜೆ ಈ ಇಬ್ಬರು ಎಸ್‍ಆರ್‌ಆರ್‌ ಬಾರ್‌ಗೆ ಬಂದಿದ್ದಾರೆ. ಈ ವೇಳೆ ಬಸವರಾಜ, ಇವರಿಗೆ ವೈನ್‌ ಕೊಡಲು ತಡವಾಗಿದೆ. ಇದರಿಂದ ಬೇಸತ್ತು ಸುರೇಶ್ ಹಾಗೂ ವಿನೋದ್ ಅಲ್ಲಿಂದ ಏನು ಹೇಳದೆ ತೆರಳಿದ್ದರು. ಅಷ್ಟಾಗಿದ್ದರೆ ಮುಗೀತಿತ್ತೆನೋ.

ಆದರೆ ಅದೇ ದಿನ ರಾತ್ರಿ 10.30ರ ವೇಳೆಗೆ ಕಂಠಪಟ್ಟ ಕುಡಿದ್ದ ಈ ಇಬ್ಬರು ಎಸ್‍ಆರ್‌ಆರ್‌ ಬಾರ್‌ಗೆ ಬಂದಿದ್ದಾರೆ. ಬಾರ್ ಕ್ಲೋಸ್ ಆಗಿದ್ದ ಕಾರಣ ಎಲ್ಲರೂ ಕ್ಲೀನಿಂಗ್ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಬಸವರಾಜನ ಜತೆ ಸುರೇಶ್ ಹಾಗೂ ವಿನೋದ್ ಇಬ್ಬರೂ ಸೇರಿ ಕಿರಿಕ್ ಮಾಡಿದ್ದಾರೆ.

ಅದು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋದಾಗ ಇಬ್ಬರು ಆರೋಪಿಗಳು ಬಸವರಾಜನನ್ನ ತಳ್ಳಿದ್ದಾರೆ. ಈ ವೇಳೆ ಬಸವರಾಜನ ತಲೆ ಗೋಡೆಗೆ ಹೊಡೆದು ಕಿವಿ ಭಾಗದಲ್ಲಿ ರಕ್ತ ಬಂದಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಅಂದು ರಾತ್ರಿಯೇ ಕರೆದೊಯ್ದು ಡ್ರೆಸ್ಸಿಂಗ್ ಮಾಡಿಸಲಾಗಿತ್ತು.

ಬಳಿಕ ಈ ಗಾಯ ಸಣ್ಣದು ಎಂದು ಬಸವರಾಜ ಆಸ್ಪತ್ರೆಗೂ ದಾಖಲಾಗದೆ ವಾಪಸ್‌ ಬಂದಿದ್ದ. ಮಾರನೇ ದಿನ ಸುರೇಶ್ ಹಾಗೂ ವಿನೋದ್ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ಕರ್ತವ್ಯಕ್ಕೆ ಹಾಜರಾಗಿದ್ದ. ಸ್ವಲ್ಪ ಸಮಯದ ಬಳಿಕ ತಲೆ ತಿರುಗಿ ಕುಸಿದು ಬಿದ್ದ ಬಸವರಾಜನನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು.

ಆಸ್ಪತ್ರೆಗೆ ದಾಖಲಾದ ಬಸವರಾಜನನ್ನು ತಪಾಸಣೆ ಮಾಡಿದ ವೈದ್ಯರು ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ಬಸವರಾಜ ಕೋಮಾಗೆ ಜಾರಿದ್ದ. ಬಳಿಕ ಆತ ಯಾವುದೇ ಚಿಕಿತ್ಸೆಗೂ ಸ್ಪಂದನೆ ಮಾಡ್ತಿರಲಿಲ್ಲ ಹೀಗೆ ಕೋಮಾಗೆ ಜಾರಿದ್ದ ಬಸವರಾಜ 23 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಈ ಮೊದಲು ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬಸವರಾಜ ಮೃತಪಟ್ಟಿರುವುದರಿಂದ ಈಗ ಕೊಲೆ ಕೇಸನ್ನಾಗಿ ಪರಿವರ್ತಿಸುವ ಸಾಧ್ಯತ ಇದೆ.

ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Leave a Reply

error: Content is protected !!
LATEST
ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ... KSRTC ಬಸ್‌ ಫುಟ್‌ಬೋರ್ಡ್‌ ಮೇಲೆ ಪ್ರಯಾಣಿಸಿದ್ದು ಜನರು - ಆದರೆ 500 ರೂ. ದಂಡ ಕಟ್ಟಿದ್ದು ಮಾತ್ರ ನೌಕರ!! BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ - ಸಂಸ್ಥೆ ಬಸ್‌ಗಳ ಕಾರ್ಯಾಚರಣೆ