ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ಅಧ್ಯಕ್ಷರಾದ ಶರ್ಮಾಜಿರವರಿಗೆ ಈ ಮೂಲಕ ಕಳಕಳಿಯಿಂದ ವಿನಂತಿಸಿಕೊಳ್ಳುವುದೇನೆಂದರೆ ಇಂದು (ಮಾ.8 -2023) ಸಂಜೆ 5:30ಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಸಾಹೇಬರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಗೆ ತಾವು ಭಾಗವಹಿಸುತ್ತಿರುವುದು ಬಹಳ ಸಂತೋಷದ ವಿಚಾರ.
ಹಿಂದಿನ ಇತಿಹಾಸ ತೆಗೆದು ನೋಡಿದರೆ ಸಾರಿಗೆ ಸಂಸ್ಥೆಯ ಶ್ರಮಿಕ ನೊಂದ ಬಹುಪಾಲು ಕಾರ್ಮಿಕರು ತಮ್ಮ ಮೇಲೆ ಅಪಾರವಾದ ಗೌರವ ಹೊಂದಿದ್ದಾರೆ. ನೀವು ಜಂಟಿ ಸಂಘಟನೆಯ ಜತೆಯಲ್ಲಿ ಹೋಗುತ್ತಿರುವುದಕ್ಕೆ ನಮ್ಮದೇನು ತಕರಾರಿಲ್ಲ.
ಆದರೆ, ವೇತನ ವಿಚಾರವಾಗಿ ಚೌಕಾಸಿ ಪರಿಷ್ಕರಣೆಯನ್ನು ಒಪ್ಪಿ ತಾವು ಬೆಂಬಲಿಸಿದರೆ ಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗುವುದಲ್ಲದೆ ತಮ್ಮ ಮೇಲೆ ಇಟ್ಟಿರುವ ಅಪಾರ ಗೌರವವನ್ನು ಕೈಯಾರೆ ಕಳೆದುಕೊಳ್ಳುತ್ತೀರಿ ಎಣಿಸುತ್ತಿದೆ.
ಸಂಘಟನೆಯೊಂದರ ಮುಖಂಡರು ಹಲವಾರು ಬಾರಿ ತಮ್ಮನ್ನು ನಾಮ್ ಕೇ ವಾಸ್ತೆ ಎಂಬಂತೆ ಹೆಸರಿಗೆ ಮಾತ್ರ ಕರೆದುಕೊಂಡು ಹೋಗಿ ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಂಡು ನಿಮಗೆ ಹಲವು ಸನ್ನಿವೇಶದಲ್ಲಿ ಅವಮಾನಿಸಿದ್ದಾರೆ.
ಆದ್ದರಿಂದ ಪ್ರಜ್ಞಾವಂತ ಹಾಗೂ ಉನ್ನತ ವಿದ್ಯಾಭ್ಯಾಸ ಪಡೆದ ಪ್ರೊಫೆಸರ್ ಕೂಡ ಆಗಿದ್ದ ತಾವು ಸಾರಿಗೆ ನೌಕರರ ಪಾಲಿನ ಕಣ್ಮಣಿಯೂ ಆಗಿದ್ದೀರಿ. ಹೀಗಾಗಿ ಅವರಲ್ಲಿ ಶಾಶ್ವತವಾಗಿ ಹೀಗೆ ಇರಬೇಕು ಎಂದು ಬಯಸುತ್ತೇವೆ.
ತಾವು ದಯವಿಟ್ಟು ಈ ಪ್ರತಿ ನಾಲ್ಕು ವರ್ಷಕ್ಕೊಂದು ಬಾರಿ ನಡೆಯುವ ಚೌಕಾಸಿ ವೇತನ ಪರಿಷ್ಕರಣೆಯಿಂದ ಸಾವಿರಾರು ನೌಕರರು ವಜಾ, ವರ್ಗಾವಣೆ, ಅಮಾನತಿಗೊಳಗಾಗುತ್ತಿದ್ದಾರೆ. ಹೀಗಾಗಿ ಇಂತಹ ಮಾರಕ ವೇತನ ಪರಿಷ್ಕರಣೆಯಿಂದ ಹೊರಬಂದು ಶಾಶ್ವತ ಪರಿಹಾರಕ್ಕಾಗಿ ಬೆಂಬಲಿಸಿ. ಸಾರಿಗೆ ನೌಕರರ ಪಾಲಿನ ಆರಾಧ್ಯ ದೈವವಾಗಿ ಎಂದು ಸಮಸ್ತ ಸಾರಿಗೆ ನೌಕರರ ಪರವಾಗಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ. ಧನ್ಯವಾದಗಳೊಂದಿಗೆ.
ಉತ್ತರ ಕರ್ನಾಟಕ ಭಾಗದ ಸಾರಿಗೆ ನೌಕರ