ಮೈಸೂರು/ ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಚಿಲ್ಲರೆ ವಿಚಾರಕ್ಕಾಗಿ ಯುವಕನೊಬ್ಬ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ನಗರದ ಆರ್‌ಗೇಟ್ ಸರ್ಕಲ್ ಬಳಿ ನಡೆದಿದೆ.
ಯುವಕನಿಂದ ಹಲ್ಲೆಗೊಳಗಾದ ನಿರ್ವಾಹಕ ಮಲ್ಲಿಕಾರ್ಜುನ್ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಗುಂಡ್ಲುಪೇಟೆಯಿಂದ ಮೈಸೂರಿಗೆ ಹೊರಟ ಬಸ್ ನಂಬರ್ 310 ರಲ್ಲಿ ಅಪರಿಚಿತ ಯುವಕನೊಬ್ಬ ನಿರ್ವಾಹಕ ಮಲ್ಲಿಕಾರ್ಜುನ್ ಅವರಿಗೆ 100 ರೂ. ನೀಡಿ ಮೈಸೂರಿಗೆ ಪ್ರಯಾಣಿಸಲು ಟಿಕೆಟ್ ಪಡೆದಿದ್ದಾನೆ. ನಂತರ ಕಂಡಕ್ಟರ್ ಮಲ್ಲಿಕಾರ್ಜುನ್ ಬಾಕಿ 30 ರೂ.ಗಳನ್ನು ಮತ್ತೊಬ್ಬ ಪ್ರಯಾಣಿಕರಿಗೆ ಸೇರಿಸಿ ಇಬ್ಬರು ತೆಗೆದುಕೊಳ್ಳುವಂತೆ ಹೇಳಿದ್ದಾರೆ.
ನಿರ್ವಾಕರು ತಾವೇ ಕೊಡದೆ ಮತ್ತೊಬ್ಬರನ್ನು ನನಗೆ ಸೇರಿದ್ದರು ಎಂದು ಕುಪಿತಗೊಂಡ ಆರೋಪಿ ಯುವಕ ನಿರ್ವಾಹಕ ಮಲ್ಲಿಕಾರ್ಜುನ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಯುವಕ ಹಲ್ಲೆ ಮಾಡಿದ ಪರಿಣಾಮ ಕುತ್ತಿಗೆ ಮತ್ತು ಬಲಗಣ್ಣಿಗೆ ತೀವ್ರವಾದ ಪೆಟ್ಟಾಗಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಆದರೆ ವೈದ್ಯರ ಸೂಚನೆ ಮೇರೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಯ ವಿರುದ್ಧ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಕಾರ್ಮಿಕ ಅಧಿಕಾರಿ ರಶ್ಮಿ ತಿಳಿಸಿದ್ದಾರೆ.