ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಖಾಸಗಿ ನಿರ್ವಹಣೆಗೆ ನೀಡುವುದಕ್ಕೆ ವಿರೋಧಿಸುತ್ತಿರುವ ವಿಪಕ್ಷಗಳ ನಡೆಗೆ ಸಂಸದೆ ಸುಮಲತಾ ಅಂಬರೀಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಈ ಈ ಬಗ್ಗೆ ಮಾತನಾಡಿ, ನಿಮ್ಮದೇ ಸರ್ಕಾರದ ಆಡಳಿತದಲ್ಲಿ ಖಾಸಗಿಯವರ ನಿರ್ವಹಣೆಗೆ ನೀಡಲು ಮುಂದಾಗಿದ್ದೀರಿ ಆಗ ಯಾವ ವಿರೋಧವೂ ಇರಲಿಲ್ಲ. ಈಗಿನ ಸರ್ಕಾರ ಪ್ರಕ್ರಿಯೆ ನಡೆಸುತ್ತಿದ್ದಂತೆ ವಿರೋಧ ವ್ಯಕ್ತಪಡಿಸುತ್ತಿರುವುದು ಏತಕ್ಕಾಗಿ? ನಿಮ್ಮ ಉದ್ದೇಶವಾದರೂ ಏನು? ರೈತರಿಗೆ ಅನುಕೂಲವಾಗುವುದು ಬೇಡವೇ ಎಂದು ಕಿಡಿಕಾರಿದ್ದಾರೆ.
ಇನ್ನು ಸರ್ಕಾರ 420 ಕೋಟಿ ರೂ. ಬಂಡವಾಳ ಹೂಡಿದರೂ ಪ್ರತಿಫಲ ಸಿಕ್ಕಿಲ್ಲ. ಸರ್ಕಾರದಿಂದ ನಿರ್ವಹಣೆ ಮಾಡಲು ಇದು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಜತೆಗೆ ಭ್ರಷ್ಟಾಚಾರ, ಹಣ ದುರ್ಬಳಕೆಯಿಂದ ನಲುಗಿರುವ ಮೈಷುಗರ್ ಪುನಶ್ಚೇತನ ಮಾಡುವುದು ಕಷ್ಟಸಾಧ್ಯವಾಗಿರುವುದರಿಂದ ಈ ತೀರ್ಮಾನ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ನನ್ನ ಪ್ರಯತ್ನವೂ ನಡೆದಿದೆ. ಅದನ್ನು ನೀವು ಏಕೆ ಸಹಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಸರ್ಕಾರಿ ಸಕ್ಕರೆ ಕಾರ್ಖಾನೆಗಳ ವಿಷಯದಲ್ಲಿ ರಾಜಕಾರಣ ಮಾಡುತ್ತಿರುವುದನ್ನು ಖಂಡಿಸುತ್ತೇನೆ. ರೈತರಿಗೆ ಒಳಿತನ್ನು ಮಾಡುವುದಕ್ಕಾಗಿಯೇ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರ ನಿರ್ವಹಣೆಗೆ ವಹಿಸಿಕೊಟ್ಟಿದ್ದು ಅಕ್ಟೋಬರ್ ವೇಳೆಗೆ ಪುನರಾರಂಭಗೊಳ್ಳುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸರ್ಕಾರಕ್ಕೆ ಸಾಧ್ಯವಿಲ್ಲ
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರಕಾರದಿಂದ ನಡೆಸಲು ಸಾಧ್ಯವಿಲ್ಲ ಎಂದೇ ಖಾಸಗಿಯವರಿಗೆ ವಹಿಸಿದ್ದೇವೆ. ನಿರಾಣಿ ಗ್ರೂಪ್ ಕಂಪನಿಗೆ ಒಳ್ಳೆಯ ಹೆಸರಿದೆ. ಖಾಸಗೀಕರಣದಿಂದ ಕಾರ್ಖಾನೆ ಅಭಿವೃದ್ಧಿಗೊಳ್ಳಲಿದೆ 430 ಕೋಟಿ ರೂ. ಬಂಡವಾಳ ತೊಡಗಿಸಿ ಸ್ಥಳೀಯ ಎಲ್ಲ ಸಮಸ್ಯೆ ಬಗೆಹರಿಸಲಿದ್ದಾರೆ. ಒಂದೆರಡು ದಿನಗಳಲ್ಲಿ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ ನೀಡಿ ಕಾರ್ಖಾನೆಯ ಕಾರ್ಮಿಕರು ರೈತರ ಸಮಸ್ಯೆ ಆಲಿಸಲಿದ್ದಾರೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail