NEWSನಮ್ಮರಾಜ್ಯರಾಜಕೀಯ

ಪಂಚರತ್ನ ಯೋಜನೆ ಮೂಲಕ ರಾಜ್ಯದಲ್ಲಿ ರಾಮರಾಜ್ಯ ಪ್ರಾರಂಭವಾಗುವ ವಿಶ್ಲೇಷಣೆ ಶುರುವಾಗಿದೆ : ಮಾಜಿ ಸಿಎಂ ಎಚ್‌ಡಿಕೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ನಮ್ಮ ಪಂಚರತ್ನ ಯೋಜನೆಯನ್ನು ರಾಜ್ಯದ ಜನರು ಸ್ವೀಕರಿಸಿದ್ದಾರೆ. ಪಂಚರತ್ನ ಯೋಜನೆ ಮೂಲಕ ರಾಜ್ಯದಲ್ಲಿ ರಾಮರಾಜ್ಯ ಪ್ರಾರಂಭವಾಗುವ ವಿಶ್ಲೇಷಣೆ ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಾರ್ಚ್ 26ರಂದು ಮೈಸೂರಿನಲ್ಲಿ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ ಹಿನ್ನೆಲೆ ಮೈಸೂರಿನ ಉತ್ತನಹಳ್ಳಿ ಸಮೀಪ ಬೃಹತ್ ವೇದಿಕೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಶಾಸಕರಾದ ಜಿ.ಟಿ.ದೇವೇಗೌಡ, ಸಾರಾ ಮಹೇಶ್, ಅಶ್ವಿನ್ ಕುಮಾರ್, ವಿಧಾನಪರಿಷತ್ ಸದಸ್ಯ ಮಂಜೇಗೌಡ ಈ ವೇಳೆ ಇದ್ದರು.

ಬಳಿಕ ಮಾತನಾಡಿದ ಕುಮಾರಸ್ವಾಮಿ, ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆಶೀರ್ವಾದ ಮಾಡಲಿ. ಸಾಂಸ್ಕೃತಿಕ ನಗರಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ನಡೆಯುತ್ತದೆ. ಸುಮಾರು 100 ಎಕರೆಯಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮ ಮಾಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಈ ಒಂದು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಲಿಕ್ಕೆ ಎಲ್ಲರೂ ಸಹ ಕೈಜೋಡಿಸಿ ಕೆಲಸ ಪ್ರಾರಂಭ ಮಾಡಿದ್ದಾರೆ. ನಮ್ಮ ನಿರೀಕ್ಷೆ ಈ ಒಂದು ಕಾರ್ಯಕ್ರಮಕ್ಕೆ ಅತ್ಯಂತ ಜನ ಬೆಂಬಲವನ್ನು ನೀಡಿದ್ದಾರೆ. ಪಂಚರತ್ನ ಯಾತ್ರೆಗೆ ಆಶೀರ್ವಾದ ಮಾಡಿದ್ದಾರೆ. ಅಂತಿಮವಾಗಿ ಈ ಕಾರ್ಯಕ್ರಮದಲ್ಲಿ 10ಲಕ್ಷ ಜನರ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಒಂದು ಕಾರ್ಯಕ್ರಮ 2023ರ ಚುನಾವಣೆ ಪ್ರಚಾರಕ್ಕೂ ಸಾಕ್ಷಿಯಾಗಲಿದೆ ಎಂದರು.

2009-10ರಲ್ಲಿ ನಾನು ಲೋಕಸಭಾ ಸದಸ್ಯನಾಗಿದ್ದೇನೆ. ಆಗ ಮನೆ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದೆವು. ಆದರೆ ಇಂದಿಗೂ ಸಹ ಬಯಲುಮುಕ್ತ ಶೌಚಾಲಯದಲ್ಲಿ ಎಷ್ಟು ಹಿಂದೆ ಬಿದ್ದಿದ್ದೇವೆ ಎಂಬುದನ್ನು ಉತ್ತರ ಕರ್ನಾಟಕದಲ್ಲಿ ಕಾಣಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಭೇಟಿ ನೀಡಿದ್ದಾಗ ನಾನೆ ನೇರವಾಗಿ ಮಹಿಳೆಯರು, ಆ ಭಾಗದ ಜನತೆಯ ಜತೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

ನನ್ನ ಬಳಿ ಅನೇಕ ಜನರು ಬರುತ್ತಾರೆ. ಆರೋಗ್ಯ, ಶಿಕ್ಷಣ, ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಆರೋಗ್ಯ, ಶಿಕ್ಷಣ, ಕೃಷಿ, ಶೌಚಾಲಯ, ಈ ಯೋಜನೆಗಳಿಗೆ ಪಂಚರತ್ನ ಯೋಜನೆ ಜಾರಿಗೆ ತಂದಿರುವುದು. ದಿನನಿತ್ಯ ಬಿಜೆಪಿಯವರು ಹಲವಾರು ಜಾಹೀರಾರುಗಳನ್ನು ನೀಡುತ್ತಿದ್ದಾರೆ. ಈಗಿನ ಸರ್ಕಾರದ ನ್ಯೂನತೆಗಳ ಬಗ್ಗೆ ಎಲ್ಲಿಯೂ ನಾನು ಚರ್ಚೆ ಮಾಡಿಲ್ಲ. ನಾನು ನನ್ನ ಕಾರ್ಯಕ್ರಮದ ಮೂಲಕ ದಿನನಿತ್ಯ ನೂರಾರು ಕಿಲೋಮೀಟರ್ ಸಂಚಾರ ನಡೆಸಿದ್ದೇನೆ ಎಂದು ವಿವರಿಸಿದರು.

ನಾಡಿನ ಜನತೆಯ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇನೆ. ಜನರ ಮತ ಕೇಳಲು ಸುಳ್ಳು ಭರವಸೆ ನೀಡುತ್ತಾರೆ ಎಂದು ಕಾಂಗ್ರೆಸ್ ಬಿಜೆಪಿಗರು ನನ್ನ ಮೇಲೆ ಆರೋಪ ಮಾಡ್ತಾರೆ. ಕಾಂಗ್ರೆಸ್‌ನ ಯಾವುದೇ ಕಾರ್ಯಕ್ರಮವನ್ನು ನಾನು ನಿಲ್ಲಿಸಿಲ್ಲ. ಕಾಂಗ್ರೆಸ್ ನವರ ಅನೇಕ ಯೋಜನೆಗಳಿಗೆ ನಾನು ಹಣ ಮೀಸಲಿಟ್ಟಿದ್ದೆ. ಬಿಜೆಪಿಯವರ ವಿಜಯ ಸಂಕಲ್ಪ ಯಾತ್ರೆಗೆ ಜನರನ್ನು ಕರೆ ತರಲು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎಂದು ಎಚ್‌ಡಿಕೆ ಆರೋಪ ಮಾಡಿದರು.

ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿ ಕಾರ್ಡ್ ಬಗ್ಗೆ ವ್ಯಂಗವಾಡಿದ ಮಾಜಿ ಎಚ್‌ಡಿಕೆ, ಅದು ಗ್ಯಾರಂಟಿ ಕಾರ್ಡ್ ಅಲ್ಲ ಡೂಪ್ಲಿಕೇಟ್ ಕಾರ್ಡ್. ಅದಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಹಿ ಬೇರೆ ಹಾಕಿದ್ದಾರೆ. ಈ ಎಲ್ಲ ಯೋಜನೆಗಳಿಗೆ 25ಸಾವಿರ ಕೋಟಿ ರೂ.ಗಳು ಬೇಕು. ಆ ದುಡ್ಡನ್ನು ಎಲ್ಲಿಂದ ಹೊಂದಿಸುತ್ತಾರೆ ಎಂದು ಪ್ರಶ್ನಿಸಿದರು.

ಈ ಬಾರಿ ರಾಜ್ಯದ ಜನ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುತ್ತಾರೆ. ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮ ಯಶಸ್ವಿಯಾಗಲಿ. ನಮ್ಮ ಶಾಸಕರು, ನಾಯಕರ ಮೇಲೆ ತಾಯಿ ಅನುಗ್ರಹ ಬೀಳಲಿ ಎಂದೇ ಕಾರ್ಯಕ್ರಮ ಇಲ್ಲಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಏಪ್ರಿಲ್ ಮೊದಲ ವಾರದಲ್ಲಿ ಚುನಾವಣಾ ದಿನಾಂಕದ ನಿರೀಕ್ಷೆ ಇದೆ. ಪಂಚರತ್ನ ಯೋಜನೆಯನ್ನು ರಾಜ್ಯದ ಜನರು ಸ್ವೀಕರಿಸಿದ್ದಾರೆ. ಪಂಚರತ್ನದ ಯೋಜನೆ ಮೂಲಕ ರಾಜ್ಯದಲ್ಲಿ ರಾಮರಾಜ್ಯ ಪ್ರಾರಂಭವಾಗುವ ವಿಶ್ಲೇಷಣೆ ಶುರುವಾಗಿದೆ. ದಲಿತರ ಹಿಂದುಳಿದವರಿಗೆ ಬಜೆಟ್ ನಲ್ಲಿ ಏನೇನೋ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿವೆ. ಇನ್ನು ಮನೆಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ ಇದು ಪೇಪರ್ ನಲ್ಲಿ ಇರುವ ದಾಖಲೆ ಅಷ್ಟೇ. ಇನ್ನೂ ಸಹ ಲಕ್ಷಾಂತರ ಕುಟುಂಬಕ್ಕೆ ಮನೆ ಸೌಲಭ್ಯವೆ ಇಲ್ಲ ಎಂದು ಹೇಳಿದರು.

ರಾಜ್ಯ ಪ್ರವಾಸದಲ್ಲಿ ನಾನೇ ಗಮನಿಸಿದ್ದೇನೆ. ಕಳೆದ ಎಂಟತ್ತು ವರ್ಷದಲ್ಲಿ ಶಿಕ್ಷಣ, ಕೃಷಿ, ಆರೋಗ್ಯ ಸಮಸ್ಯೆ ಇರುವ ಜನರು ನನ್ನನ್ನು ನಿರಂತರ ಸಂಪರ್ಕಿಸುತ್ತಿದ್ದಾರೆ. ಇದನ್ನು ಮನಗಂಡು ಪಂಚರತ್ನ ಕಾರ್ಯಕ್ರಮದಲ್ಲಿ ಅಳವಡಿಸಿದ್ದೇವೆ ಎಂದರು.

ಪಂಚರತ್ನ ಯೋಜನೆ ಜಾರಿಗೆ 2.50 ಲಕ್ಷ ಕೋಟಿ ರೂ. ಬೇಕು. ನನ್ನ ಗುರಿ, ಕನಸು ಸಾಕಾರಗೊಳಿಸಲು ಅವಕಾಶ ಇದೆ. ಕಾಂಗ್ರೆಸ್ ನಾಯಕರು ನಾಲ್ಕನೇ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಬಿಜೆಪಿಯವರು ಟೀಕೆ, ಪ್ರಶ್ನೆ ಮಾಡಿದ್ದಾರೆ. ಎರಡೂ ಪಕ್ಷಗಳು ಟೀಕೆಗೆ ಮೀಸಲಾಗಿದ್ದಾರೆ. ನಾನು ದಿನಕ್ಕೆ 100 ಕಿ.ಮೀ. ಪ್ರವಾಸ ಮಾಡಿದ್ದೇನೆ. ನನ್ನ ಯೋಜನೆಗೆ ಒಂದು ಅವಕಾಶ ಕೊಡಿ ಅಂತ ಕೇಳಿದ್ದೇನೆ ಎಂದರು.‌

ಇನ್ನು ಬಹುಮತದ ಸರ್ಕಾರ ಬಾರದೆ ಇದ್ದರೂ ಮುಖ್ಯಮಂತ್ರಿಯಾದೆ. 37 ಶಾಸಕರನ್ನು ಇಟ್ಟುಕೊಂಡು ಕಾಂಗ್ರೆಸ್ ಭಾಗ್ಯಗಳನ್ನು ಮುಂದುವರಿಸಿದೆ. ಇದರ ನಡುವೆಯೂ ಸಾಲಮನ್ನಾ ಮಾಡಿದೆ. ಬಿಜೆಪಿಯವರು ಈಗಲೂ ರೈತರ ಸಾಲಮನ್ನಾ ಯೋಜನೆಗೆ 1800 ಕೋಟಿ ರೂ. ಕೊಟ್ಟಿಲ್ಲ. ನನ್ನ ಕಾರ್ಯಕ್ರಮ ಸರ್ಕಾರದ ಆದಾಯ ಹೆಚ್ಚಿಸುವ ಕಾರ್ಯಕ್ರಮ‌. ಈ ಒಂದು ಅವಧಿ ಸರ್ಕಾರ ಕೊಡಿ ಅಂತ ಕೇಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಮವನಿ ಮಾಡಿದರು.

ಶ್ರೀಗಳನ್ನು ಅಭಿನಂದಿಸುತ್ತೇನೆ: ಉರಿಗೌಡ ನಂಜೇಗೌಡ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಹುಡುಗಾಟಿಕೆ ಆಡುತ್ತಿದ್ದವರಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬುದ್ಧಿ ಹೇಳಿದ್ದಾರೆ. ಇದಕ್ಕಾಗಿ ನಾನು ಶ್ರೀಗಳನ್ನು ಅಭಿನಂದಿಸುತ್ತೇನೆ. ಈ ಬಗ್ಗೆ ನಾನು ಸಹ ಏನು ಮಾತನಾಡುವುದಿಲ್ಲ ಎಂದರು.

ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ: ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ ಎಂಟ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ ಚಿತ್ರ ನಟ, ನಟಿಯರಿಗೆ ಕ್ಷೇತ್ರ ಬೇಕಿಲ್ಲ. ಸಹಜವಾಗಿ ಜನಪ್ರೀಯತೆ ಇರುತ್ತದೆ. ನನ್ನ ಸಹೋದರಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತಾರೆ ಅಂತಿದ್ದಾರೆ. ಮೂರಲ್ಲ, ಮೂವತ್ತು ಕ್ಷೇತ್ರದಲ್ಲಿ ಬೇಕಾದರೂ ಪ್ರಸ್ತಾಪ ಮಾಡಬಹುದು. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಯಾರ್ಯಾರೋ ವದಂತಿ ಹಬ್ಬಿಸುತ್ತಿದ್ದಾರೆ. ಸಂಸದರು ಮಂಡ್ಯದಿಂದ ಸ್ಪರ್ಧಿಸಿದರೆ ನಾನು ಅರ್ಜಿ ಹಾಕುತ್ತೇನೆ ಅಂತಲೂ ಹೇಳುತ್ತಿದ್ದಾರೆ. ನಾನು ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತೇನೆ. ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಅದೆಲ್ಲ ಊಹಾಪೋಹ ಅಷ್ಟೆ ಎಂದು ಸ್ಪಷ್ಟಪಡಿಸಿದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ