NEWSನಮ್ಮಜಿಲ್ಲೆಸಂಸ್ಕೃತಿ

ಡಿ.10ರಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರೆ

ವಿಜಯಪಥ ಸಮಗ್ರ ಸುದ್ದಿ

ಸರಗೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಡಿ.10 ರಿಂದ ನಾಲ್ಕು ದಿನಗಳ ಕಾಲ ಗ್ರಾಮೀಣ ಸಂಪ್ರದಾಯದಂತೆ ಜಾತ್ರೆ ನಡೆಯಲಿದೆ,

ಈ ಸಂಬಂಧ ಹೆಡಿಯಾಲದ ಹರ್ಷ ಕಲ್ಯಾಣ ಮಂಟಪದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ ನಡೆಸಿ ಸಾರ್ವಜನಿಕರು, ಇಲಾಖಾಧಿಕಾರಿಗಳ ಸಹಕಾರ ಕೋರಲಾಯಿತು. ಸಭೆಯಲ್ಲಿ ಹೆಡಿಯಾಲ ಉಪ ಸಂರಕ್ಷಣಾಧಿಕಾರಿ ಪರಮೇಶ್ ಮಾತನಾಡಿ ಈ ಹಿಂದೆ ಯಾವ ರೀತಿ ಮಾಡಿಕೊಂಡು ಹೋಗುತ್ತಿದ್ದರೋ ಅದೇ ರೀತಿ ಮಾಡಿ.

ಆದರೆ, ಸಮಿತಿಯವರು ಹಾಗೂ ಸಾರ್ವಜನಿಕರು ಹೇಳಿದಂತೆ ಮಾಡುವುದಕ್ಕೆ ಸಾಧ್ಯವಿಲ್ಲ. ಇದರ ಬಗ್ಗೆ ನಮ್ಮ ಮೇಲ್ಪಟ್ಟ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ನಂತರ ಆದೇಶ ನೀಡಿದಲ್ಲಿ ಮುಂದಿನ ಕ್ರಮ ಕೈಗೊಳ್ಳಬಹುದು. ಕಾನೂನಿನ ಪ್ರಕಾರ ಎತ್ತಿನಗಾಡಿ, ಖಾಸಗಿ ವಾಹನ, ಜಾನುವಾರುಗಳು, ಭಕ್ತಾದಿಗಳಿಗೆ ಊಟ, ತಿಂಡಿ ವ್ಯವಸ್ಥೆಗೆ ಅವಕಾಶವಿಲ್ಲ. ಖಾಸಗಿ ವಾಹನಗಳಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಅವರ ಬಳಿ ಪರವಾನಗಿ ಪಡೆದು ಜಾತ್ರೆಯನ್ನು ಮಾಡಬೇಕು. ಭಕ್ತಾದಿಗಳ ರಕ್ಷಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಬೇಕು. ಜಾತ್ರೆ ಮುಗಿಯುವ ತನಕ ಪೊಲೀಸ್ ಬಂದೋಬಸ್ತ್‌, ತಾತ್ಕಾಲಿಕ ಪೊಲೀಸ್ ಠಾಣೆ ಸ್ಥಾಪನೆ ಮಾಡುವುದು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಕಳೆದ ವರ್ಷ 70 ಕ್ಕೂ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿತ್ತು, ಈ ಬಾರಿ ಗ್ಯಾರಂಟಿ ವ್ಯವಸ್ಥೆ ಇರುವುದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂದು ಸಭೆಯಲ್ಲಿ ತಿಳಿಸಿದಾಗ, ಸಾರಿಗೆ ವತಿಯಿಂದ ಈ ಬಾರಿ 100 ಕ್ಕೂ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿಯುವುದು. ರಸ್ತೆ ಕಾಮಗಾರಿ ಕೆಲಸ, ದೇವಸ್ಥಾನಕ್ಕೆ ದೀಪಾಲಂಕಾರ, ಸೌಂಡ್ಸ್, ಶಾಮಿಯಾನ, ಪಲ್ಲಕ್ಕಿ ಬೋರ್ಡ್, ಜನರೇಟರ್ ವ್ಯವಸ್ಥೆ, ದೇವರ ಮಂಟಪ ಬಿಡುವುದು. ಪೂಜಾಗೆ ಹಣ್ಣು, ಕಾಯಿ ಇತರೆ ಸಾಮಗ್ರಿಗಳನ್ನು ಮಾರಾಟಕ್ಕೆ ಅವಕಾಶ, ಸೋಮವಾರ ೧೧.೩೦ಕ್ಕೆ ಹಾಲರವೆ ಸೇವೆ, ಕೊಂಡ ಮಹೋತ್ಸವ ಕಲಾತಂಡ, ವಾದ್ಯಗೋಷ್ಠಿ, ಕೋಲಾಟ, ನಗಾರಿ, ವೀರಗಾಸೆ ಸೇರಿದಂತೆ ಕಲಾತಂಡಗಳ ಅವಕಾಶಕ್ಕೆ ಸಮ್ಮತಿ ನೀಡಲಾಯಿತು.

ತಹಸೀಲ್ದಾರ್ ರುಕೀಯಾ ಬೇಗಂ ಮಾತನಾಡಿ, ಜಾತ್ರೆ ನಡೆಸುವ ವಿಚಾರದಲ್ಲಿ ಅರಣ್ಯ ಇಲಾಖೆ, ಸ್ಥಳೀಯ ಜನರ ನಡುವೆ ಕೆಲವು ಗೊಂದಲಗಳಿದ್ದು, ಜನರು ಅರಣ್ಯ ರಕ್ಷಣೆಯೊಂದಿಗೆ ಇಲಾಖೆಯ ಕಾನೂನುಗಳನ್ನು ಗೌರವಿಸಬೇಕಿದೆ ಎಂದು ತಿಳಿಸಿದರು.

ಜಾತ್ರೆ ವೇಳೆ ಹಿಂದೆ ಹೇಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಹಾಗೂ ಹುಣಸೂರು ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಎಲ್ಲ ಕಡೆಯಿಂದ ಜಾತ್ರೆ ನಡೆಯಲಿರುವ ದೇವಸ್ಥಾನದ ಹತ್ತಿರಕ್ಕೆ ಬಸ್ ವ್ಯವಸ್ಥೆ ಮಾಡಲಾಗಿತ್ತೋ ಈಗಲು ಆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಸಭೆಯಲ್ಲಿ ಬಿಡಗಲು ಪಡವಲು ವಿರಕ್ತ ಮಠದ ಶ್ರೀ ಗಳಾದ ಮಹದೇವಸ್ವಾಮಿಗಳು, ದಡದಹಳ್ಳಿ ಮಠದ ಶ್ರೀ ಷಡಕ್ಷರ ಸ್ವಾಮೀಜಿ, ಹಂಚೀಪುರ ಮಠದ ಕಿರಿಯ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಮುಜರಾಯಿ ಧಾರ್ಮಿಕ ದತ್ತಿ ಇಲಾಖೆ ತಹಸೀಲ್ದಾರ್ ವಿದ್ಯುಲತಾ, ಹೆಡಿಯಾಲ ಉಪ ಸಂರಕ್ಷಣಾಧೀಕಾರಿ ಪರಮೇಶ್, ಸರಗೂರು ಅರಕ್ಷಕ ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್, ಅರಕ್ಷಕ ಉಪನಿರೀಕ್ಷಕ ಸಿ ನಂದೀಶ್ ಕುಮಾರ್, ಆರೋಗ್ಯಾಧಿಕಾರಿ ಟಿ.ರವಿಕುಮಾರ್, ಇಓ ಸುಷ್ಮಾ, ಲೋಕೋಪಯೋಗಿ ಇಲಾಖೆಯ ಎಇಇ ಬೋರಯ್ಯ, ನೀರಾವರಿ ಇಲಾಖೆ ಎಇಇ ಉಷಾ, ಅರಣ್ಯಾಧಿಕಾರಿ ನಾರಾಯಣ, ಕಂದಲಿಕೆ ಉಪ ತಹಸೀಲ್ದಾರ್ ರವಿಂದ್ರ, ರಾಜಸ್ವ ನಿರೀಕ್ಷಕ ಮುಜೀಬ್ ಅಹಮದ್, ಶ್ರೀನಿವಾಸ್, ಕಾರ್ಯನಿರ್ವಾಹಕ ಅಧಿಕಾರಿ ರಘು, ರಾಕೇಶ್, ಪಾರುಪತ್ತೇದಾರ್ ಮಹಾದೇವಸ್ವಾಮಿ, ಸಮಿತಿ ಅಧ್ಯಕ ಲಿಂಗರಾಜು ಇದ್ದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು