Please assign a menu to the primary menu location under menu

NEWSನಮ್ಮರಾಜ್ಯ

ಕೈಯಲ್ಲಿ ಬಿಡಿಗಾಸು ಇಲ್ಲ, ನಮ್ಮನ್ನು ನಮ್ಮೂರಿಗೆ ಬಿಟ್ಟುಬಿಡಿ

ಸ್ವಂತ ಊರು ಸೇರಿಕೊಳ್ಳಲು ಗೋಳಿಡುತ್ತಿರುವ  ಉತ್ತರದ ಮಂದಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೂಲಿ ಕೆಲಸ ಅರಸಿ ರಾಜಧಾನಿಗೆ ಬಂದಿದ್ದ ಲಕ್ಷಾಂತರ ಮಂದಿಯಲ್ಲಿ ಈಗಾಗಲೇ ಸಾವಿರಾರು ಜನ ತಮ್ಮ ನೆಲಯನ್ನು ಸೇರಿಕೊಂಡಿದ್ದಾರೆ. ಆದರೂ ಇನ್ನೂ ಸಾವಿರಾರು ಮಂದಿ ನಗರದಲ್ಲೇ ಇದ್ದು, ಅವರು ಇಂದು ತಮ್ಮ ಊರಿಗೆ ತೆರಳಲು ಮುಂದಾಗಿದ್ದಾರೆ.

ಹೀಗಾಗಿ ಇಟ್ಟುದಿನ ಕಾದು ಕುಳಿತಿದ್ದ ಉತ್ತರ ಕರ್ನಾಟಕದ ಸಾವಿರಾರು ಮಂದಿ ನಿನ್ನೆ ರಾತ್ರಿಯಿಂದಲೂ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ನಿದ್ರೆ ಇಲ್ಲದೆ. ಜತೆಗೆ ಹೊದ್ದಿಕೊಳ್ಳುಲು ರಗ್ಗು ಇಲ್ಲದೇ ಚಳಿಯಲ್ಲೇ ನಡುಗಿಕೊಂಡು ಕಾಲಕಳೆದಿದ್ದಾರೆ. ತಮ್ಮ ಚಿಕ್ಕಮಕ್ಕಳೊಂದಿಗೆ ಕುಳಿತಿದ್ದರು ಯಾರು ಅವರಿಗೆ ಒಂದುಲೋಟ ನೀರನ್ನು ಕೊಟ್ಟಿಲ್ಲ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಹೊರಜಿಲ್ಲೆಗಳು ಮತ್ತು ರಾಜ್ಯಗಳಿಗೆ ಹೋಗುವವರನ್ನು ಉಪಚರಿಸುವ ನಾಟಕವಾಡುವ ಜನಪ್ರತಿನಿಧಿಗಳು ಮಾಧ್ಯಮಗಳ ಕ್ಯಾಮರಾ ಎದುರು ನಟಿಸುವ ನಾಟಕ ಇದರಿಂದ ಬಯಲಾಗಿದೆ. ಮಾಧ್ಯಮ ಪ್ರತಿನಿಧಿಯನ್ನು ಕಂಡ ಕೂಡಲೇ ಬಡವರ ಸೇವೆ ಮಾಡಲು ನಾವು ಮುಂದಾಗಿದ್ದೇವೆ ಎಂದು ಪೋಸ್‌ಕೊಡುವ ಇಂಥ ಮಂದಿ ಈಗ ಎಲ್ಲಿಹೋದರೂ, ರಸ್ತೆಯಲ್ಲೇ ಇಲ್ಲಿವರೆಗೆ ಕಾಲದೂಡಿ ಈಗ ಇದ್ದರು ನಮ್ಮ ಹಳ್ಳಿಯಲ್ಲೇ ಇರೋಣ ಸತ್ತರೂ ನಮ್ಮ ಹಳ್ಳಿಯಲ್ಲೇ ಸಾಯೋಣ ಎಂದು ನಿರ್ಧಿಸಿ ಬೆಂಗಳೂರಿನಿಂದ ತಮ್ಮ ಊರುಗಳತ್ತ ಹೊರಟವರ ನೆರವಿಗೆ ಬಾರದು ಇಂಥ ಜನಪ್ರತಿನಿಧೀಗಳಿಂದ ನಾವು ಬಯಸುವುದಾದರೂ ಏನು?

ಈ ನಡುವೆ ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ತೆರಳಲು ಕಾಯುತ್ತಿರುವ ಜನರಿಗೆ ಬಸ್‌ ವ್ಯವಸ್ಥೆ ಮಾಡುವಲ್ಲಿ ಸಾರಿಗೆ ಅಧಿಕಾರಿಗಳು ಗೊಂದಲಕ್ಕೆ ಒಳಗಾದರು. ಆದರೂ ಕೆಲ ಬಸ್‌ಗಳನ್ನು ಬಿಟ್ಟಿದ್ದಾರೆ. ಆದರೆ ತಮ್ಮ ಊರುಗಳನ್ನು ಸೇರಿಕೊಳ್ಳುವ ತವಕದಲ್ಲಿರುವ ಮಂದಿಯನ್ನು ಉಚಿತವಾಗಿ ಕರೆದುಕೊಂಡು ಹೋಗುವ ವ್ವಸ್ಥೆಯನ್ನು ಸರ್ಕಾರ ಮಾಡಬೇಕಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಸರ್ಕಾರಿ ಜಾಹಿರಾತಿನಲ್ಲಿ ನರೇಗಾ ಯೋಜನೆಯಡಿ ನಿಮ್ಮ ಗ್ರಾಮದಲ್ಲೇ ಕೆಲಸ ಮಾಡಿ ಹಣ ಗಳಿಸಿ ಎಂದು ಹೇಳುವ ಸರ್ಕಾರ ಅವರಿಗೆ ಮೂಲ ಸೌಲಭ್ಯ ನೀಡುವಲ್ಲಿ ವಿಫಲವಾಗುತ್ತಿದೆ. ತಮ್ಮ ಖಜಾನೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಿರುವ ಸರ್ಕಾರ ಬಡವರು ಕೈಯಲ್ಲಿ ಬಿಡಿಗಾಸು ಇಲ್ಲದವರನ್ನು ಅವರ ಸ್ವಂತ ನೆಲಕ್ಕೆ ತಲುಪಿಸಲು ಏಕೆ ಮುಂದಾಗಿಲ್ಲ. ಈ ಬಗ್ಗೆ ಹೆಚ್ಚು ಗಮನ ಕೊಡಬೇಕಿದೆ.

ನಾವು ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವು. ಲಾಕ್‌ಡೌನ್‌ ಆದ ಬಳಿಕ ಕೆಲಸವು ಇಲ್ಲ ಜತೆಗೆ ಕೆಲಸ ಮಾಡುವ ಸ್ಥಳದಲ್ಲೇ ಉಳಿದು ಕೋಳ್ಳುತ್ತಿದ್ದರಿಂದ ಬೇರೆ ಮನೆ ಮಾಡಿಲ್ಲ. ಈಗ ನಾವು ರಸ್ತೆಯಲ್ಲೇ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದೇವೆ. ಕೈಯಲ್ಲಿ ನಯಪೈಸೆಯೂ ಇಲ್ಲ. ನಮ್ಮನ್ನು ಊರು ಸೇರಿಸಿಬಿಡಿ ಅಲ್ಲಿ ಕೂಲಿನಾಲಿ ಮಾಡಿ ಹೊಟೆಹೊರೆದುಕೊಳ್ಳುತ್ತೇವೆ ಎಂದು ಮಾಧ್ಯಮಗಳ ಮುಂದೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬರುತ್ತಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

1 Comment

Leave a Reply

error: Content is protected !!
LATEST
ಮುಂದಿನ ಪೀಳಿಗೆ ಉಳಿವಿಗಾಗಿ ಸಾವಯವ ಕೃಷಿ ಅವಶ್ಯಕ: ಸಚಿವ ಮುನಿಯಪ್ಪ ಲೋಕ ಸೇವಾ ಆಯೋಗಗಳು ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆ ನೀಡುವ ಪ್ರಜಾ ಪ್ರಭುತ್ವದ ಸ್ತಂಭಗಳು: ಸಿಎಂ ಸಿದ್ದರಾಮಯ್ಯ KSRTC: ಶಸ್ತ್ರಚಿಕಿತ್ಸೆ ಗೊಳಗಾದ ಚಾಲಕನಿಗೆ ರಜೆ ಕೊಡದೆ ಗೈರು ಹಾಜರಿಹಾಕಿ 4 ತಿಂಗಳ ವೇತನ ತಡೆಹಿಡಿದ ಅಧಿಕಾರಿಗಳು KSRTC ಮಂಡ್ಯ: ಚಾಲಕನ ಮೇಲೆ ವ್ಯಕ್ತಿ ಹಲ್ಲೆ -ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಯುವ ನಾಯಕತ್ವ ತರಬೇತಿ ಶಿಬಿರ- ವಿಶೇಷ ಶಿಬಿರಗಳಿಂದ ನಾಯಕತ್ವ ಕೌಶಲ್ಯ ವೃದ್ಧಿ ಹೇಮಗಿರಿಯ ಕಲ್ಯಾಣ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಜ.19ರ BMTC ಸಂಘದ ಚುನಾವಣೆಯಲ್ಲಿ ಬಳಕೆದಾರ ಸಹಕಾರ ಸಂಘ ಲೂಟಿಕೋರರ ಹೆಡೆಮುರಿ ಕಟ್ಟಿ - ನೊಂದ ನೌಕರರ ಮನವಿ KSRTC ಹಾಸನ ಹೊಸ ಬಸ್‌ ನಿಲ್ದಾಣ: ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಹೊಡೆದು ಕಳವಿಗೆ ಯತ್ನ KSRTC ನೌಕರರಿಗೆ ನಗದು ರಹಿತ ಚಿಕಿತ್ಸೆ ಶುರು : ಎಲ್ಲಿ ಬೇಕಾದರೂ ಟ್ರೀಟ್‌ಮೆಂಟ್‌ ಪಡೆಯಿರಿ  KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್‌ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್‌ ಚಾಲಕನ ಸ್ಥಿತಿ ಚಿಂತಾ...