NEWSನಮ್ಮರಾಜ್ಯರಾಜಕೀಯ

ಇದೆಂಥಾ ಸ್ಥಿತಿ ಬಂತು ಬಿಜೆಪಿಗೆ? ಸಚಿವ ಮಾಧುಸ್ವಾಮಿ ದಾಟಿಯಲ್ಲೇ ಕಾಲೆಳೆದ ಎಎಪಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಜೆಪಿ ಕಾರ್ಯಕರ್ತರು ಜನರ ಮನೆ ಬಾಗಿಲಿನಲ್ಲಿ ನಿಂತು ಮತ ಭಿಕ್ಷೆ ಕೇಳಬೇಕು. ಕೊಡದಿದ್ದರೂ ಬಿಡಬಾರದು ಎಂಬ ಸಚಿವ ಮಾಧುಸ್ವಾಮಿ ಅವರ ಭಾಷಣವನ್ನು ಎಎಪಿ ರಾಜ್ಯ ಘಟಕ ಗೇಲಿ ಮಾಡಿದ್ದು, ಈ ಬಗ್ಗೆ ಟ್ವಿಟರ್‌ನಲ್ಲಿ ಬಿಜೆಪಿಎ ಈ ಸ್ಥಿತಿ ಬರಬಾರದಿತ್ತು ಎಂಬ ದಾಟಿಯಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಈಗಾಗಲೇ ನಿಮ್ಮ ಕಾರ್ಯಕರ್ತರನ್ನು ಕೊಂದು ತಿನ್ನುತ್ತಿದ್ದೀರ, ಕಾರ್ಯಕರ್ತರನ್ನು ಬೀದಿಗೆ ತಂದಿದ್ದೀರಾ, ನಿಮ್ಮ ಕಾರ್ಯಕರ್ತರು ಅಳುಕುವಂತೆ ಮಾಡಿದ್ದೀರಾ. ಇನ್ನು ನಿಮ್ಮನ್ನು ನಂಬಿದ್ದಕ್ಕೆ ಉಳಿದವರು ನಿಮ್ಮ ಕಾರ್ಯಕರ್ತರು ಜನರ ಕೈಕಾಲು ಹಿಡಿಯುವುದೇ ಅಲ್ಲವೇ. ಇದೆಂಥಾ ಸ್ಥಿತಿ ಬಂತು ಬಿಜೆಪಿಗೆ ಎಂದು ಆಮ್‌ ಆದ್ಮಿ ಪಕ್ಷ ಪ್ರಶ್ನೆ ಮಾಡಿದೆ.

ತುಮಕೂರಿನಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಕಾರ್ಯಕರ್ತರು ಭಿಕ್ಷುಕರಂತೆ ಮತ ಕೇಳಬೇಕು ಎಂದು ಹೇಳಿದ್ದರು.

ನಮ್ಮ ಮುಖದ ಮೇಲೆ ಜನರು ವೋಟು ಬಿಸಾಕುವವರೆಗೂ ಬಿಡಬಾರದು. ಆ ರೀತಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಬೇಕು. ಭಿಕ್ಷೆ ಬೇಡುವ ಭಿಕ್ಷುಕರಂತಾಗಬೇಕು. ತಿರುಪೆ ಬೇಡುವವನಿಗೆ ಏನೂ ಕೊಡದಿದ್ದರೆ ಏನಾದರೂ ಕೊಡಿ, ಎಷ್ಟಾದರೂ ಕೊಡಿ ಎಂದು ಗೋಗರೆಯುತ್ತಾನೆ. ಕೊನೆಗೆ ತೊಲಗಿದರೆ ಸಾಕೆಂದು ಏನಾದರೂ ಕೊಟ್ಟು ಕಳುಹಿಸುತ್ತೇವೆ. ಅದೇ ರೀತಿ ಜನರ ಮನೆ ಬಾಗಿಲಿನಲ್ಲಿ ನಿಂತು ಮತ ಭಿಕ್ಷೆ ಕೇಳಬೇಕು. ಕೊಡದಿದ್ದರೆ ಬಿಡಬಾರದು. ಐದರಲ್ಲಿ ಕೊನೆಗೆ ಎರಡು–ಮೂರಾದರೂ ವೋಟು ಬರುವಂತೆ ನೋಡಿಕೊಳ್ಳಬೇಕು. ಪಕ್ಷದ ಪರವಾದ ಅಲೆ ಸೃಷ್ಟಿಸಿದರೆ ಗೆಲುವು ಸುಲಭವಾಗುತ್ತದೆ ಎಂದು ಹೇಳಿದ್ದರು.

ಬಿಜೆಪಿ ಬ್ರಹ್ಮ ರಾಕ್ಷಸ: ಭ್ರಷ್ಟಾಚಾರದ ರಕ್ತ ಬೀಜಾಸುರರನ್ನು ಹುಟ್ಟಿಸಿದ್ದೇ ಕಾಂಗ್ರೆಸ್‌ ಎಂಬ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಹೇಳಿಕೆ ಬಗ್ಗೆಯೂ ಎಎಪಿ ಕುಹಕವಾಡಿದೆ.

ಹೌದು ಸ್ವಾಮಿ, ಹುಟ್ಟಿಸಿದ್ದು ಕಾಂಗ್ರೆಸ್ಸೇ. ಆದರೆ ಅವರನ್ನು ತಂದು ಸಾಕುತ್ತಿರುವುದು ನೀವು (ಬಿಜೆಪಿ). ಅಲ್ಲದೆ, ನೀವುಗಳು ಭ್ರಷ್ಟಾಚಾರ ಮಾಡುವುದರಲ್ಲಿ ಕೇವಲ ರಕ್ತಬೀಜಾಸುರರಾಗಿ ಉಳಿದಿಲ್ಲ, ಬ್ರಹ್ಮ ರಾಕ್ಷಸರಾಗಿದ್ದೀರಿ. ನಿಮ್ಮಿಬ್ಬರಿಂದಲು ದೇಶಕ್ಕೆ ಮುಕ್ತಿ ಬೇಕಿದೆ ಎಂದು ಎಎಪಿ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿದೆ.

ಬಿಜೆಪಿ ಬ್ರೋಕರ್ ಪಾರ್ಟಿಯಾಗಿದ್ದು, ವಿಧಾನಸೌಧವೇ ಸರ್ಕಾರಿ ಕೆಲಸಗಳ ಮಾರಾಟದ ಶಾಪಿಂಗ್ ಮಾಲ್‌ ಆಗಿದೆ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದ ಪ್ರಲ್ಹಾದ್‌ ಜೋಶಿ, ಕಾಂಗ್ರೆಸ್ ಪಕ್ಷ ಎಂದರೆ ಭ್ರಷ್ಟಾಚಾರ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಮನೆ ಎದುರು ಓಡಾಡುವವರನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಭ್ರಷ್ಟಾಚಾರ ಆರಂಭವಾಗಿದ್ದೇ ನೆಹರೂ ಕಾಲದಲ್ಲಿ. ಭ್ರಷ್ಟಾಚಾರದ ರಕ್ತಬೀಜಾಸುರರನ್ನು ಹುಟ್ಟಿಸಿದ್ದೇ ಕಾಂಗ್ರೆಸ್ ಎಂದು ಹೇಳಿದ್ದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ