ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 2023ರ ಹೊಸ ವರ್ಷದ ಆರಂಭದಲ್ಲಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು ಇನ್ನು ಮುಂದೆ ಬಿಎಂಟಿಸಿ ಬಸ್‌ಗಳು ಚಿಕ್ಕಬಳ್ಳಾಪುರದ ವರೆಗೂ ಸಂಚರಿಸಲಿವೆ.
ಈ ಮೂಲಕ ಬಿಎಂಟಿಸಿ ತನ್ನ ವ್ಯಾಪ್ತಿ ವಿಸ್ತರಿಸಲು ಸರ್ಕಾರ ಈಗಾಗಲೇ ಒಪ್ಪಿಗೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದೆ. ಹೀಗಾಗಿ ಇನ್ನು ಮುಂದೆ ಚಿಕ್ಕಬಳ್ಳಾಪುರಕ್ಕೂ ಈ ಬಸ್‍ಗಳು ಸಂಚಾರ ಮಾಡಲಿವೆ.
ಈವರೆಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಯಲ್ಲಷ್ಟೇ ಇವುಗಳ ಸೇವೆ ಲಭ್ಯವಿತ್ತು. ಆದರೆ ಈಗ ಅದು ಚಿಕ್ಕಬಳ್ಳಾಪುರಕ್ಕೂ ವಿಸ್ತರಣೆಯಾಗಿದ್ದು, ಪ್ರಯಾಣಿಕರಿಗೆ ಸಂತಸ ತರಲಿದೆ ಎಂದು ಅಧಿಕಾರಿಗಳು ಭಾವಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರಕ್ಕೂ ಬಿಎಂಟಿಸಿ ಬಸ್ ಸೇವೆ ಆರಂಭಿಸಬೇಕು ಎಂದು ಈ ಹಿಂದೆಯೇ ಬಿಎಂಟಿಸಿ ಆಡಳಿತ ಮಂಡಳಿ ಹಲವಾರು ಸಭೆಗಳಲ್ಲಿ ಪ್ರಸ್ತಾಪಿಸಿತ್ತು. ಮತ್ತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರಕ್ಕೂ ಬಿಎಂಟಿಸಿ ಬಸ್ ಓಡಿಸುವುದಕ್ಕೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ.
ಈ ಮೂಲಕ ಚಿಕ್ಕಬಳ್ಳಾಪುರ ಜನತೆಯ ಬಹುದಿನದ ಬೇಡಿಕೆಗೆ ಸಂಸ್ಥೆ ಈಗ ಸ್ಪಂದಿಸಿದೆ. ಹೀಗಾಗಿ ಸಾಮಾನ್ಯ ಹಾಗೂ ಐಷಾರಾಮಿ ಬಸ್‌ಗಳು ಬೆಂಗಳೂರು – ಚಿಕ್ಕಬಳ್ಳಾಪುರ ನಡುವೆ ಸಂಚರಿಸಲಿವೆ.
[wp-rss-aggregator limit=”3″]