NEWSನಮ್ಮರಾಜ್ಯರಾಜಕೀಯ

ಹೈ ಕೋರ್ಟ್‌ ಆದೇಶ ಪಾಲನೆಗೆ ಮುಂದಾದ ಬಿಎಂಟಿಸಿ: ಕರ್ತವ್ಯಕ್ಕೆ ಹಾಜರಾಗುವಂತೆ ವಜಾಗೊಂಡ ಸಾರಿಗೆ ನೌಕರರಿಗೆ ಸೂಚನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ಸಮಯದಲ್ಲಿ ಏಕಾಏಕಿ ಸಾವಿರಾರು ನೌಕರರನ್ನು ವಜಾಗೊಳಿಸಿದ್ದ ಬಿಎಂಟಿಸಿ ಅಧಿಕಾರಿಗಳೇ ಈಗ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ವಜಾಗೊಂಡ ನೌಕರರು ನೂರಾರು ಬಾರಿ ನಾವು ಏನೂ ತಪ್ಪು ಮಾಡಿಲ್ಲ ನಮ್ಮನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿ ಕೇಂದ್ರ ಕಚೇರಿಯಲ್ಲಿ ವಾರಗಟ್ಟಲೆ ಏಕೆ ತಿಂಗಳುಗಳ ವರೆಗೂ ಕಾದುಕಾದು ವಾಪಸ್‌ ಆಗಿದ್ದರು. ಆಗ ಅಧಿಕಾರಿಗಳು ಹೇಳುತ್ತಿದ್ದದ್ದು ನಿಮ್ಮನ್ನು ಯಾವುದೇ ಕಾರಣಕ್ಕೂ ವಾಪಸ್‌ ತೆಗೆದುಕೊಳ್ಳಲು ಆಗುವುದಿಲ್ಲ ಎಂದು.

ಈ ಬಗ್ಗೆ ಕಾನೂನು ಹೋರಾಟಕ್ಕೆ ಮುಂದಾದ ನೌಕರರಿಗೆ ಕರ್ನಾಟಕ ಹೈ ಕೋರ್ಟ್‌ ಇದೇ ಫೆ.10ರಂದು ಸಿಹಿ ಸುದ್ದಿ ನೀಡಿತ್ತು. ಹೀಗಾಗಿ ಸಾರಿಗೆ ಸಂಸ್ಥೆಗಳಿಗೆ ಹೈ ಕೋರ್ಟ್‌ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ಯಾವುದೇ ಷರತ್ತುಗಳಿಲ್ಲದೆ ವಜಾಗೊಂಡ ನೌಕರರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿರುವ ಆದೇಶದ ಪತ್ರವನ್ನು ವಜಾಗೊಳಿಸಿದ ನೌಕರರ ಮನೆಗಳಿಗೆ ಅಧಿಕಾರಿಗಳು ಅಂಚೆ ಮೂಲಕ ಕಳುಹಿಸಿದ್ದಾರೆ.

ಈ ಹಿಂದೆ ಹಲವಾರು ಷರತ್ತುಗಳನ್ನು ವಿಧಿಸಿ ಬಿಎಂಟಿಸಿಯಲ್ಲಿ ನೌಕರರಿಗೆ ಒಂದು ರೀತಿಯ ಮಾನಸಿಕ ಕಿರುಕುಳ ನೀಡಿ ವಾಪಸ್‌ ತೆಗೆದುಕೊಳ್ಳಲಾಗಿತ್ತು. ಹೀಗೆ ನಾವು ಕರ್ತವ್ಯಕ್ಕೆ ಹಾಜರಾಗಲು ಇಷ್ಟವಿಲ್ಲ ಎಂದು ನೂರಾರು ನೌಕರರು ಕಾನೂನು ಮೂಲಕವೇ ಬರುತ್ತೇವೆ ಎಂದು ಕಾನೂನು ಹೋರಾಟ ಮಾಡಿದರು. ಆದರಂತೆ ಸತ್ಯಕ್ಕೆ ಸೋಲಿಲ್ಲ ಎಂಬಂತೆ ಈಗ ನೌಕರರ ಪರ ಮಧ್ಯಂತರ ಆದೇಶವನ್ನು ಹೈ ಕೋರ್ಟ್‌ ನೀಡಿದ್ದು, ಅದರಂತೆ ಕರ್ತವ್ಯಕ್ಕೆ ಹಾಜರಾಗಲು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಸೂಚನೆ ನೀಡಿದ್ದಾರೆ.

ಇನ್ನು ವಜಾಗೊಂಡಿರುವ ಬಹುತೇಕ ಎಲ್ಲ ನೌಕರರಿಗೂ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಆದರೆ ಅವರು ಈ ಹಿಂದೆ ಇದ್ದ ಘಟಕಗಳು ಮತ್ತು ವಿಭಾಗಗಳನ್ನು ಬಹುತೇಕ ಬದಲಾವಣೆ ಮಾಡಿ ಬೇರೆ ಘಟಕಗಳು ಮತ್ತು ವಿಭಾಗಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.

ಕರ್ತವ್ಯಕ್ಕೆ ಹಾಜರಾಗಲು ನೌಕರರಿಗೆ ಸೂಚಿಸಿರುವ ಪತ್ರದಲ್ಲೇನಿದೆ: ಶ್ರೀ … ನಿರ್ವಾಹಕ/ ಚಾಲಕರಾದ ಬಿ.ಸಂಖ್ಯೆ…., ಘಟಕ- … ಆದ ನೀವು ದಿನಾಂಕ 7-4-2021ರಿಂದ ದಿನಾಂಕ 21-04-2021ರವರೆಗೆ ನಡೆದ ಕಾನೂನು ಬಾಹಿರ ಮುಷ್ಕರದ ಸಂದರ್ಭದಲ್ಲಿ ಕರ್ತವ್ಯಕ್ಕೆ ಗೈರುಹಾಜರಾಗಿ, ಮುಷ್ಕರದಲ್ಲಿ ಪಾಲ್ಗೊಂಡಿರುವ ಹಾಗೂ ಇತರ ಆರೋಪಗಳ ಮೇರೆಗೆ ಉಲ್ಲೇಖ-01 ರಂತೆ ಸಂಸ್ಥೆಯ ಸೇವೆಯಿಂದ ವಜಾಗೊಳಸಲಾಗಿದೆ. ಸದರಿ ವಜಾ ಆದೇಶದ ವಿರುದ್ಧ ನೀವು ಮಾನ್ಯ ಕಾರ್ಮಿಕ ನ್ಯಾಯಲಯದಲ್ಲಿ ID: 46/2021 ಪ್ರಕರಣ ದಾಖಲಸಿದ್ದು, ಮಾನ್ಯ ಕಾರ್ಮಿಕ ನ್ಯಾಯಾಲಯವು ದಿನಾಂಕ 30-05-2022ರಂದು ಮದ್ಯಂತರ ಆದೇಶ ಹೊರಡಿಸಿರುತ್ತದೆ.

ಇಂತಹ “ಮಧ್ಯಂತರ ಆದೇಶ ನೀಡಿದ ಹಲವು ಪ್ರಕರಣಗಳಲ್ಲಿ ಸಂಸ್ಥೆಯು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ 11160/2022 ವರದರಾಜು ಮತ್ತು ಇತರರು ಪ್ರಕರಣ ದಾಖಲಸಿದ್ದು, ಸದರಿ ಪ್ರಕರಣಗಳಲ್ಲಿನ ದಿನಾಂಕ: 10-02-2023ರ ಅಂತಿಮ ಆದೇಶದನ್ವಯ ನಿಮ್ಮನ್ನು ದಕ್ಷಿಣ ವಲಯದ, ಘಟಕ-…ಗೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ. ನೀವು ನಿರ್ವಾಹಕ / ಚಾಲಕ ಪರವಾನಗಿಯೊಂದಿಗೆ ಹಾಗೂ ದೈಹಿಕ ಸದೃಢತೆಯ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ನಿಯೋಜಿಸಿರುವ ಘಟಕ ವ್ಯವಸ್ಥಾಪಕರಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.

ಈ ಆದೇಶವು ಕಾರ್ಮಿಕ ನ್ಯಾಯಾಲಯದಲ್ಲಿ ದಾಖಲಿಸಿರುವ ID-46/ 2021 ಪ್ರಕರಣದ ಅಂತಿಮ ತೀರ್ಮಾನಕ್ಕೆ, ಒಳಪಟ್ಟಿರುತ್ತದೆ. ಸದರಿಯವರಿಗೆ ವಜಾಗೊಂಡ ದಿನದಂದು, ಪಡೆಯುತ್ತಿದ್ದ ವೇತನವನ್ನು ಪಾವತಿಸುವುದು ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು, ಬೆಂಮಸಾಸಂಸ್ಥೆ ಹೆಸರಿನಲ್ಲಿ ಅದೇಶದ ಪತ್ರವನ್ನು ಬಹುತೇಕ ಎಲ್ಲ ವಜಾಗೊಂಡ ನೌಕರರಿಗೂ ಪೋಸ್ಟ್‌ ಮೂಲಕ ಕಳುಹಿಸಲಾಗಿದೆ.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ