ಬೆಂಗಳೂರು ಗ್ರಾಮಾಂತರ: ಕೋವಿಡ್ ಬಾಧಿತ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಮೂಲಕ ಸಾಥಿ ಇಂಡಿಯಾ ಸಂಸ್ಥೆ ಕೈಗೊಂಡಿರು ಕಾರ್ಯ ಶ್ಲಾಫನೀಯ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಜಗದೀಶ್ ಎನ್ ಎಂ ಹೇಳಿದರು.
ಬೀರಸಂದ್ರದ ಜಿಲ್ಲಾಡಳಿತ ಭವನದ ವಿಡಿಯೋ ಸಂವಾದ ಸಭಾಂಗಣದಲ್ಲಿ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಾಥಿ ಇಂಡಿಯಾ ಸಂಸ್ಥೆ ಸಯುಕ್ತಾಶ್ರಯದಲ್ಲಿ ಜರುಗಿದ ಕೋವಿಡ್ ಪೀಡಿತ ಕುಟುಂಬದ ಮಕ್ಕಳಿಗೆ ಶ್ಯೆಕ್ಷಣಿಕ ಸಹಾಯ, ತಾಯಂದಿರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಚೆಕ್ ಹಾಗೂ ಇತರೆ ಸೌಲಭ್ಯ ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ಸೇವಾ ಮನೋಭಾವ ಎಲ್ಲ ಸಂಸ್ಥೆಗಳಿಗೆ ಮಾದರಿಯಾದುದು ಎಂದು ಹೇಳಿದರು. ಕೋವಿಡ್‌ನಿಂದ ಬಾಧಿತವಾದ 11 ಕುಟುಂಬಗಳಿಗೆ ಆರ್ಥಿಕ ನೆರವು ಹಾಗೂ ಇತರೆ ಸೌಲಭ್ಯಗಳನ್ನು ವಿತರಿಸಲಾಯಿತು.
ಸಾಥಿ ಇಂಡಿಯಾ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ವಿನುತ್ ರಾಯಚೂರು, ಕಾರ್ಯಕ್ರಮ ಅಧಿಕಾರಿ ಬಸವರಾಜ ಸಂಶಿ, ಚಂದ್ರಮೌಳಿ, ಶೋಭಾ, ಸಾಯಿ, ದೇವಪ್ಪ, ಮಂಜುನಾಥ, ಕಲಾವತಿ, ಅಶ್ವಿನಿ ಮತ್ತಿತರರು ಇದ್ದರು.