ಮೇ 27ರಂದು ಕನಿಷ್ಠ ₹7,500 ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ

ಬೆಂಗಳೂರು: ಕನಿಷ್ಠ ₹7,500 ನಿಗದಿ ಪಡಿಸಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ ಮೇ 27ರಂದು ಬೆಳಗ್ಗೆ 10:30ಕ್ಕೆ “ನಿಧಿ ಆಪ್ಕೆ ನಿಕಟ್” ಇಪಿಎಸ್ ಪಿಂಚಣಿದಾರರು ವಿನೂತನ ಪ್ರತಿಭಟನೆಯನ್ನು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದಾರೆ.
ಈ ಸಂಬಂಧ ಬಿಎಂಟಿಸಿ & ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಅಧ್ಯಕ್ಷ ನಂಜುಂಡೇಗೌಡ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಇಪಿಎಸ್ ನಿವೃತ್ತರ ಪ್ರತಿಭಟನಾ ಹಾಗೂ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದೆ.
ನಮ್ಮ ಈ ಪ್ರತಿಭಟನೆ ಕೂಗು ದೆಹಲಿಗೆ ತಲುಪಬೇಕು ಹಾಗಾಗಿ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ ಈ ಎರಡು ಅಂಶಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದು, ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಮ್ ಸ್ವಾಮಿ, ಇತರೆ ಮುಖಂಡರು ಹಾಗೂ ನಮ್ಮ ಸಂಘದ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಲಿದ್ದಾರೆ.
ಅಲ್ಲದೆ ಮುಖಂಡರು ಪ್ರಚಲಿತ ಸಂಗತಿ ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಈ ಪ್ರತಿಭಟನೆಯನ್ನುದ್ದೇಶಿ ಮಾತನಾಡುವ ವೇಳೆ ಪ್ರಸ್ತುತಪಡಿಸಲಿದ್ದಾರೆ. ಹೀಗಾಗಿ ಇಪಿಎಸ್ ನಿವೃತ್ತರ ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಅಂದು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ನಂಜುಂಡೇಗೌಡ ಮನವಿ ಮಾಡಿದ್ದಾರೆ.
ನಮ್ಮ ಹೋರಾಟ ನಿಲ್ಲದು: ಇನ್ನು ಇಪಿಎಸ್ ನಿವೃತ್ತರ ಪರ ಹೋರಾಟ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ (ನ್ಯಾಯಾಲಯದ ತೀರ್ಪಿನ ಪ್ರಕಾರ) ಎರಡೂ ಅಂಶಗಳು ಈಡೇರುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ನಂಜುಂಡೇಗೌಡ ತಿಳಿಸಿದ್ದಾರೆ.
ಇನ್ನು ಪಾರ್ಲಿಮೆಂಟ್ ಮುಂಗಾರು ಅಧಿವೇಶನ ಜುಲೈ 02, 2025 ರಿಂದ ಪ್ರಾರಂಭವಾಗಲಿದ್ದು, ಈ ದಿಸೆಯಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೋರಾಟವನ್ನು ತೀವ್ರಗೊಳಿಸುವುದು ಅವಶ್ಯಕವಾಗಿದೆ. ನಮ್ಮ ಹೋರಾಟದ ಸಂದೇಶ ದೆಹಲಿ ತಲುಪಬೇಕು. ಈ ಹೋರಾಟಕ್ಕೆ ಇಂದಲ್ಲ ನಾಳೆ ಜಯ ಶತಸಿದ್ಧ. ಈ ದೃಷ್ಟಿಯಿಂದ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕು ಎಂದು ವಿನಂತಿಸಿದ್ದಾರೆ.
ನಮ್ಮ ರಾಜ್ಯದವರೇ ಆದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಾರ್ಲಿಮೆಂಟರಿ ಕಮಿಟಿ ಅಧ್ಯಕ್ಷರಾಗಿದ್ದು, ಈ ಕಮಿಟಿಯು ಕೇಂದ್ರ ಸರ್ಕಾರಕ್ಕೆ ಇಪಿಎಸ್ ನಿವೃತ್ತರ ಪರವಾಗಿ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿದೆ. ಈಗ ನೀಡುತ್ತಿರುವ ಕನಿಷ್ಠ ಪಿಂಚಣಿ ₹1,000 ದಿಂದ ₹7,500ಗೆ ನಿಗದಿಪಡಿಸಿ, ಬೆಲೆ ಏರಿಕೆಗೆ ಅನುಗುಣವಾಗಿ, ಭತ್ಯೆ ಸೇರಿಸಿ, ಪಿಂಚಣಿ ನೀಡಬೇಕೆಂದು ಶಿಫಾರಸು ಮಾಡಿದೆ. ಪ್ರಸ್ತಾವನೆ ಕೇಂದ್ರ ಸರ್ಕಾರದ ಉನ್ನತ ಸಚಿವರ ಕಾರ್ಯಾಲಯದಲ್ಲಿ ಸಕಾರಾತ್ಮಕ ಪರಿಶೀಲನೆಯಲ್ಲಿದೆ.
ಬದುಕಿನ ಹೋರಾಟದಲ್ಲಿ ನಿತ್ರಾಣಗೊಂಡರು ಶ್ರೇಷ್ಠರಿವರು: ದೇಶದ ಲಕ್ಷಾಂತರ ನಿವೃತ್ತರು ವಯೋ ಸಹಜ ಕಾಯಿಲೆ, ತಮ್ಮ ಬದುಕಿನ ಹೋರಾಟದಲ್ಲಿ ನಿತ್ರಾಣಗೊಂಡಿದ್ದು, ಭೌತಿಕವಾಗಿ ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದು, ನಮ್ಮ ಹೋರಾಟಕ್ಕೆ ಶುಭ ಹಾರೈಸುವ ಇವರು ಶ್ರೇಷ್ಠರು.
ತನ್ನ ಹರಿತವಾದ ಲೇಖನಿಯ ಮೂಲಕ ಪ್ರಧಾನಮಂತ್ರಿಯವರ ಕಾರ್ಯಾಲಯವು ಸೇರಿದಂತೆ, ಕೇಂದ್ರ ಸರ್ಕಾರದ ಮಂತ್ರಿ ಮಹೋದಯರಿಗೆ, ನಿವೃತ್ತರ ಸಂಕಷ್ಟಗಳ ಬಗ್ಗೆ ಪಟ್ಟಿ ಮಾಡಿ, ನೂರಾರು ಮನವಿ ಪತ್ರಗಳನ್ನು ಸಲ್ಲಿಸಿರುವ, ಶಾಮರಾವ್, ಬೀದರ್ ಅವರು ಸಹ ಶ್ರೇಷ್ಠರು. ಎಲೆಮರೆಯ ಕಾಯಿಯಂತಿದ್ದು, ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಅರ್ಥೈಸಿಕೊಂಡು, ವಿಶ್ಲೇಷಿಸಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಮಗೆಲ್ಲರಿಗೂ ಉಣ ಬಡಿಸುತ್ತಿರುವ, ಪ್ರವೀಣ್ ಕೊಹ್ಲಿ ಅವರೂ ಸಹ ಸರ್ವಶ್ರೇಷ್ಠರು.
ಇತ್ತೀಚೆಗೆ ಮತ್ತೊಂದು ಸಂಘಟನೆಯ ಮುಖಂಡರು, ಎಲ್ಲ ಇಪಿಎಸ್ ನಿವೃತ್ತರ ಪರ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಪತ್ರ ಉಲ್ಲೇಖಿಸಿದ್ದು, ಸುನಿಲ್ ಕುಮಾರ್ ತೀರ್ಪನ್ನು ಕೂಡಲೇ ಪರಾಮರ್ಶಿಸಿ, ನಮಗೆಲ್ಲರಿಗೂ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿದ್ದು, ನಿವೃತ್ತರ ಪರ ನಡೆಸಿರುವ ಇವರ ಹೋರಾಟ ಅನನ್ಯ.
ರಾಷ್ಟ್ರೀಯ ಸಂಘರ್ಷ ಸಮಿತಿಯನ್ನು ಸ್ಥಾಪಿಸಿ, ದೇಶಾದ್ಯಂತ ಸಂಚರಿಸಿ, ಇಪಿಎಸ್ ನಿವೃತ್ತರಲ್ಲಿ ಹರಿವು ಮತ್ತು ಜಾಗೃತಿ ಮೂಡಿಸಿ, ನಮ್ಮ ಬೇಡಿಕೆಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪ್ರತಿಪಾದಿಸುತ್ತಿರುವ, ಕಮಾಂಡರ್ ಅಶೋಕ್ ರಾವುತ್ ಅವರೂ ಸರ್ವ ಶ್ರೇಷ್ಠರು. ದೇಶಾದ್ಯಂತ ಇನ್ನು ಹಲವಾರು ಸಮರ್ಪಣಾ ಭಾವದ ಮುಖಂಡರಿದ್ದು, ಬರೆಯುತ್ತಾ ಹೋದರೆ ಪುಟಗಳೇ ಸಾಲುವುದಿಲ್ಲ.
ಹೀಗಾಗಿ ಇವರ ಹೋರಾಟದಲ್ಲಿ ನಾವು ಭಾಗವಹಿಸಿ ನಮ್ಮ ನಿವೃತ್ತರ ಹಕ್ಕನ್ನು ಪಡೆಯುವ ಮೂಲಕ ಈ ಇಳಿವಯಸ್ಸಿನಲ್ಲಿ ನೆಮ್ಮದಿಯ ಜೀವನವನ್ನು ಸಾಧ್ಯವಾದಷ್ಟು ಸಾಗಿಸಲು ಪಣತೊಡೋಣ ಎಂದು ಎಲ್ಲ ಇಪಿಎಸ್ ನಿವೃತ್ತರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.
Related

You Might Also Like
ಬೆಂ.ಗ್ರಾಮಾಂತರ: ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮ- ವಾಹನ, ಸಾರ್ವಜನಿಕರ ಪ್ರವೇಶ ನಿಷೇಧ: ಡಿಸಿ ಬಸವರಾಜು
ಬೆಂಗಳೂರು ಗ್ರಾಮಾಂತರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಾಳೆ (ಜೂ.20) ಬೆಂಗಳೂರು ಉತ್ತರ ತಾಲೂಕಿನ ನಗರೂರು ಗ್ರಾಮದಲ್ಲಿನ ಬಿ.ಜಿ.ಎಸ್ ಆಸ್ಪತ್ರೆಯ ನೂತನ ಘಟಕದ ಕಟ್ಟಡ...
ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಸಂಸ್ಥೆಯು ಆರು ತಿಂಗಳ ಅವಧಿಯ ರೆಗ್ಯುಲರ್ ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿ ಪ್ರವೇಶಕ್ಕೆ ಅರ್ಜಿ...
ಮಾವಿನ ಬೆಂಬೆಲ ಬೆಲೆ ನಿಗದಿಗೆ ಆಹಾರ ಸಚಿವ ಮುನಿಯಪ್ಪ ಒತ್ತಾಯ
ಬೆಂಗಳೂರು: ಮಾವಿಗೆ ಬೆಂಬಲ ಬೆಲೆ ಷೋಷಣೆ ಮಾಡಲು ಸರ್ಕಾರವನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದ್ದಾರೆ. ಇಂದು ನಡೆದ ಸಚಿವ ಸಂಪುಟದ...
ವಿವೇಚನಾತ್ಮಕವಾಗಿ ನೈಸರ್ಗಿಕ ಸಂಪತ್ ಬಳಸಿದರಷ್ಟೇ ಉಳಿಗಾಲ: ಸಚಿವ ಈಶ್ವರ ಖಂಡ್ರೆ
ಪಳೆಯುಳಿಕೆ ಇಂಧನಕ್ಕೆ ಪರ್ಯಾಯವಾಗಿ ನವೀಕೃತ ಮತ್ತು ಜೈವಿಕ ಇಂಧನ ಬಳಕೆಗೆ ಕರೆ ಬೆಂಗಳೂರು: ಪರಿಸರ ಸ್ನೇಹಿಯಾದ ನವೀಕರಿಸಬಹುದಾದ ಮತ್ತು ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುವ...
KKRTC ಕಂಡಕ್ಟರ್ ಮೇಲೆ ಹಲ್ಲೆ: ಮೂವರಿಗೆ ₹75 ಸಾವಿರ ದಂಡ- ಕಟ್ಟಲಾಗದಿದ್ದರೆ 6 ತಿಂಗಳು ಜೈಲು ಶಿಕ್ಷೆ- ಕೋರ್ಟ್ ಮಹತ್ವದ ತೀರ್ಪು
ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ ಮೂವರಿಗೆ ಅಫಜಲಪುರ ಪ್ರಧಾನ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಲಯ ತಲಾ...
KKRTC ವಿಜಯಪುರ: ತಂದೆ ನಿಧನರಾದ ನಾಲ್ಕೇ ದಿನಕ್ಕೆ ಡ್ಯೂಟಿಗೆ ಬರಬೇಕಿತ್ತು ಅಂತ ಚಾಲಕನಿಗೆ ಗೈರುಹಾಜರಿ ಮಾಡಿದ ಡಿಸಿ ನಾರಾಯಣಪ್ಪ ಕುರುಬರ
ಒಟ್ಟು 58 ದಿನ ರಜೆಯಲ್ಲಿದ್ದ ಚಾಲಕ ಕಂ ನಿರ್ವಾಹಕನಿಗೆ ಹಿಂದೆ ಮುಂದೆ ಗೈರು ಹಾಜರಿ ತೋರಿಸಿ 7ದಿನ ರಜೆ ಮಂಜೂರು ಮಾಡಿದ ಡಿಸಿಯ ನಡೆ ಅನುಮಾನಕ್ಕೆ ಎಡೆ...
BMTC: ಯುವತಿ ಮೇಲೆ ಬಸ್ ನುಗ್ಗಿಸಲು ಯತ್ನ ಪ್ರಕರಣದ FIRಗೆ ಹೈ ಕೋರ್ಟ್ ತಡೆ
ಬಿಎಂಟಿಸಿ ಚಾಲಕನ ಪರ ವಕ್ಕಾಲತ್ತು ವಹಿಸಿದ್ದ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ಬಹುತೇಕ ಸಾರಿಗೆ ನೌಕರರ ಎಲ್ಲ ಪ್ರಕರಣಗಳಲ್ಲೂ ಜಾಣ್ಮೆಯ ವಾದ ಮಂಡಿಸಿ...
KSRTC ನೂತನ 2000 ಚಾಲಕ ಕಂ ನಿರ್ವಾಹಕರಿಗೆ ನಿಯೋಜನಾ ಆದೇಶ ಪತ್ರ ವಿತರಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಎಂಟು ವರ್ಷಗಳ ಬಳಿಕ ಬೃಹತ್ ನೇಮಕಾತಿ ನಡೆದಿದ್ದು, 2000 ಚಾಲಕ ಕಂ ನಿರ್ವಾಹಕ ಅಭ್ಯರ್ಥಿಗಳ ನೇಮಕಾತಿಯು ಪಾರದರ್ಶಕವಾಗಿ ಮಾಡಲಾಗಿದೆ....
ಜೂ.21ರಂದು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಡಿಸಿ ಬಸವರಾಜು
ಬೆಂಗಳೂರು ಗ್ರಾಮಾಂತರ: ಜಿಲ್ಲಾ ಮಟ್ಟದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ದೇವನಹಳ್ಳಿ ಟೌನ್ ನಲ್ಲಿರುವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ....