ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಬೃಹತ್ ನಕಲಿ ನೋಟು ಜಾಲ ಪತ್ತೆಯಾಗಿದ್ದು, ಪೊಲೀಸರು ₹1.30 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಸಿಸಿಬಿಆರ್ಥಿಕ ಅಪರಾಧ ಪೊಲೀಸ್ ವಿಂಗ್ ಕಾರ್ಯಾಚರಣೆ ನಡೆಸಿ, ಖೋಟಾನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ತಮಿಳುನಾಡು ಮೂಲದ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ ಪೊಲೀಸರು ಪಿಚ್ಚು ಮುತ್ತು, ನಲ್ಲಕಣಿ, ಅಜಯ್ ಸಿಂಗ್, ಮಣಿಯನ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನಕಲಿ ನೋಟುಗಳನ್ನು ಕೊಟ್ಟು ಅಸಲಿ ನೋಟುಗಳನ್ನು ಪಡೆಯಲು ಆರೋಪಿಗಳು ಬೆಂಗಳೂರಿಗೆ ಬಂದಿದ್ದರು. ತಿರುನಲ್ ವೇಲಿಯ ಪ್ರಮುಖ ಆರೋಪಿ ಕಣ್ಣಿ ಎಂಬಾತನ ಸೂಚನೆ ಮೇರೆಗೆ ಪಿಚ್ಚು ಮುತ್ತು ಮತ್ತು ತಂಡ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿ ನಕಲಿ ನೋಟುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
[wp-rss-aggregator limit=”4″ pagination=”on”]