NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರಿಗೆ ಮರಣ ಶಾಸನ ಬರೆದು ಸಿಎಂಗೆ ಅಭಿನಂದಿಸಿದ ಜಂಟಿ ಕ್ರಿಯಾ ಸಮಿತಿ – ಹುನ್ನಾರವನ್ನೇ ಶ್ರೀರಕ್ಷೆ ಎಂದು ನಂಬಿ ಕುಳಿತ ಕೆಲ ಶತಮೂರ್ಖರು …!

ವಿಜಯಪಥ ಸಮಗ್ರ ಸುದ್ದಿ
  • ಜಂಟಿ ಕ್ರಿಯಾ ಸಮತಿ ಪದಾಧಿಕಾರಿಗಳು ನಮಗೆ ಯಾವುದೇ ರೀತಿಯ ಒಳ್ಳೆಯದನ್ನು ಮಾಡಿಲ್ಲ
  • ವೇತನ ಸಂಬಂಧ ಎಷ್ಟು ಹೆಚ್ಚಳ ಮಾಡಬೇಕು ಎಂಬುದರ ಬಗ್ಗೆ  ನಮ್ಮನ್ನಾಗಲಿ ಅಥವಾ ನಮ್ಮ ಅಧಿಕಾರಿಗಳನ್ನಾಗಲಿ ಸಭೆ ಕರೆದು ಚರ್ಚಿಸಿಲ್ಲ
  • ತಮಗೆ ಇಷ್ಟ ಬಂದ ರೀತಿ ಏಕಪಕ್ಷೀಯವಾಗಿ ಜಂಟಿ ಕ್ರಿಯಾ ಸಮಿತಿ ಹಿಟ್ಲರ್‌ ರೀತಿ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ತಾನೇ ಸ್ವಯಂ ಘೋಷಣೆ ಮಾಡಿಕೊಂಡು ಹೋಗಿ ಸರ್ಕಾರ ಮುಂದೆ ಮಂಡಿಯೂರಿದೆ
  • ನಾಚಿಕೆ ಆಗಬೇಕು ಇವರಿಗೆ, ನಮಗೆ ಒಳ್ಳೇದನ್ನು ಮಾಡಲಾಗದಿದ್ದರೆ  ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ, ನಾವು ಏನಾದರೂ ಮಾಡಿಕೊಳ್ಳುತ್ತೇವೆ. ಆದರೆ ಈ ರೀತಿ ಹುನ್ನಾರವನ್ನೇಕೆ ಮಾಡಿ  ಅಧಿಕಾರಿಗಳು ಮತ್ತು ನಮ್ಮನ್ನೂ  ಆರ್ಥಿಕ ನಷ್ಟಕ್ಕೇ ದೂಡುತ್ತೀರಿ?
  • – ನೊಂದ ನೌಕರರು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಇದೇ ಮಾ.21ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್‌ ಪಡೆಯುವ ಮೂಲಕ ನೌಕರರಿಗೆ ಮರಣ ಶಾಸನ ಬರೆದಿದೆ.

ಕಾರಣ, ರಾಜ್ಯ ಸರ್ಕಾರ ಇನ್ನೂ ಅಧಿಕೃತವಾಗಿ ಏನು ಈಗಾಗಲೇ ಮೊನ್ನೆ ಶೇ.15ರಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂದು ಘೋಷಣೆ ಮಾಡಿದೆಯೋ ಆ ಆದೇಶ 1/3/2023ರಿಂದ ಎಂದಿದೆ. ಅಂದರೆ ಕಳೆದ 1/1/2020ರ ಜನವರಿಯಿಂದ ಅನ್ವಯವಾಗುಂತೆ ಇನ್ನೂ ಘೋಷಣೆ ಮಾಡಿಲ್ಲ.

ಜತೆಗೆ, ಎಲ್ಲ ಪೊಲೀಸ್‌ ಕೇಸ್‌ಗಳನ್ನು ವಾಪಸ್‌ ತೆಗೆದುಕೊಂಡು ಎಲ್ಲರಿಗೂ ಡ್ಯೂಟಿ ಕೊಡುತ್ತೇವೆ ಎಂದು ಎಂಡಿ ಅವರು ಹೇಳಿದ್ದಾರೆ ಎಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಆದರೆ, ಆ ಬಗ್ಗೆ ಇದುವರೆಗೂ ಸರ್ಕಾರದ ಮಟ್ಟದಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ವಕೀಲರು ಹೇಳುವ ಪ್ರಕಾರ ನೌಕರರ ಮತ್ತು ಅವರು ಕುಟುಂಬದವರ ವಿರುದ್ಧ ದಾಖಲಾಗಿರುವ ಎಲ್ಲ ಪೊಲೀಸ್‌ ಪ್ರಕರಣಗಳನ್ನು ವಾಪಸ್‌ ಪಡೆಯುವುದಕ್ಕೆ ಕನಿಷ್ಠವೆಂದರೂ ಮೂರು ತಿಂಗಳು ಬೇಕಾಗುತ್ತದೆ. ಅಂದರೆ ಈ ಬಗ್ಗೆ ಒಂದು ಲಿಖಿತ ಭರವಸೆಯನ್ನು ಪಡೆಯದೇ ಜಂಟಿ ಸಮಿತಿ ಮಾ.21ರಿಂದ ಕರೆ ನೀಡಿದ್ದ ಮುಷ್ಕರವನ್ನು ಕೈ ಬಿಟ್ಟಿರುವ ಉದ್ದೇಶವೇನು ಎಂಬ ಪ್ರಶ್ನೆ ಈಗ ನೌಕರರನ್ನು ಕಾಡುತ್ತಿದೆ.

ಅಲ್ಲದೆ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಇದೇ ಮಾ.24ರಿಂದ ಕಾನೂನಾತ್ಮಕವಾಗಿಯೇ ವೇತನ ಸೇರಿದಂತೆ ಆಗಿರುವ ಇತರ ಡಾಮೇಜ್‌ಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಮುಷ್ಕರಕ್ಕೆ ಮಾ.4ರಂದೇ ಕರೆ ನೀಡಿತ್ತು. ಈ ಜಂಟಿ ಸಮಿತಿಯ ಪದಾಧಿಕಾರಿಗಳಿಗೆ ನೌಕರರ ಹಿತ ಕಾಪಾಡುವುದೇ ಮುಖ್ಯವಾಗಿದ್ದಿದ್ದರೆ ಮಾ.24ರಿಂದ ಕರೆ ನೀಡಿರುವ ಮುಷ್ಕರವನ್ನು ಬೆಂಬಲಿಸಬಹುದಾಗಿತ್ತಲ್ಲ.

ಹೋಗಲಿ ಸಮಾನ ಮನಸ್ಕರ ವೇದಿಕೆ ಕರೆ ನೀಡಿರುವ ಮುಷ್ಕರವನ್ನು ಬೆಂಬಲಿಸುವುದಕ್ಕೆ ಮನಸ್ಸಿಲ್ಲದಿದ್ದರೆ, ಜಂಟಿ ಸಮಿತಿಯಿಂದ ನಾವು ಈ ದಿನಾಂಕದಿಂದ ನೌಕರರ ಬೇಡಿಕೆ ಈಡೇರಿಕೆಗಾಗಿ ಮುಷ್ಕರಕ್ಕೆ ಹೋಗುತ್ತೇವೆ ಎಂದು ಕಾರ್ಮಿಕ ಇಲಾಖೆಯ ಆಯುಕ್ತರಿಗೆ ನೋಡಿಸ್‌ ನೀಡಿ ಕಾನೂನಾತ್ಮಕವಾಗಿ ಮುಷ್ಕರದ ದಿನಾಂಕ ಘೋಷಣೆ ಮಾಡಬಹುದಿತ್ತಲ್ಲ.

ಅದನ್ನು ಮಾಡಲಿಲ್ಲ, ಅಂದರೆ ಜಂಟಿ ಕ್ರಿಯಾ ಸಮಿತಿ, ಕಾನೂನು ಬಾಹಿರವಾಗಿ ಇದೇ ಮಾ.21ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತೇವೆ ಎಂದು ಘೊಷಣೆ ಮಾಡಿಕೊಂಡಿತು. ಇದನ್ನು ಗಮನಿಸಿದರೆ, ಕಳೆದ 40 ವರ್ಷದಿಂದಲೂ ನೌಕರರಿಗೆ ವೇತನದ ವಿಷಯದಲ್ಲಿ ಅನ್ಯಾಯ ಮಾಡಿಕೊಂಡು ಬಂದಿರುವಂತೆಯೇ. ಈಗಲೂ ಅದನ್ನೇ ಮಾಡುವ ಹುನ್ನಾರದಿಂದ ಕಾನೂನು ಬಾಹಿರವಾಗಿ ಮುಷ್ಕರ ಮಾಡುತ್ತೇವೆ ಎಂದು ಘೋಷಣೆ ಮಾಡಿ ನೌಕರರನ್ನು ಗೊಂದಲಕ್ಕೆ ಸಿಲುಕಿಸಿತೆ?

ಅದು ಹೋಗಲಿ, ಶೇ.25ರಷ್ಟು ವೇತನ ಹೆಚ್ಚಳವನ್ನು ಮೂಲವೇತನಕ್ಕೆ ಬಿಡಿಎ ಮಾರ್ಜ್‌ ಮಾಡಿಕೊಂಡು ಹೆಚ್ಚಳ ಮಾಡಬೇಕು ಎಂದು ಹೇಳುತ್ತಿದ್ದ ಈ ಕುತಂತ್ರಿಗಳು ಅದೆಲ್ಲವನ್ನು ಬಿಟ್ಟು ಬರಿ ಮೂಲ ವೇತನಕ್ಕೇ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಸಿಎಂಗೆ ಅಭಿನಂದಯನ್ನು ಸಲ್ಲಿಸಿರುವುದರ ಹಿಂದಿರುವ ಹುನ್ನಾರವಾದರೂ ಏನು?

ಈ ರೀತಿ ಕಳೆದ 40 ವರ್ಷಗಳಿಂದಲೂ ಸಾರಿಗೆ ನಿಗಮಗಳಲ್ಲಿ ಬರಿ ನೌಕರರನ್ನಷ್ಟೇ ಅಲ್ಲ ಅಧಿಕಾರಿ ವರ್ಗದವರನ್ನು ಒಂದು ರೀತಿ ಅಸ್ಪೃಶ್ಯತೆಗೆ ದೂಡಿಕೊಂಡೇ ಬದಿರುವ ಇವರು, ಈಗ ನೌಕರರಿಗೆ ಒಳ್ಳೆಯದು ಮಾಡುತ್ತಾರೆ ಎಂದರೆ, ಅದನ್ನು ನಂಬಬೇಕೆ. ಇನ್ನು ಕೆಲ ನೌಕರರಿಗೆ ಈ ಜಂಟಿ ಸಮತಿ ಪದಾಧಿಕಾರಿಗಳು ಸರ್ಕಾರದ ಜತೆ ಸೇರಿಕೊಂಡು ಮಾಡಿರುವ ಹುನ್ನಾರ ತಿಳಿದಿಲ್ಲ ಎಂದರೆ, ಇಂಥ ಶತ ಮೂರ್ಖರನ್ನು ಆ ಭಗವಂತನೇ ಕಾಪಾಡಬೇಕು..

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ