CrimeNEWSನಮ್ಮರಾಜ್ಯ

KSRTC: ಚಾಲಕ, ನಿರ್ವಾಹಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈ ಕೋರ್ಟ್‌ ತಡೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ವಿರುದ್ಧ ದಾಖಲಾಗಿದ್ದ ಪೊಲೀಸ್‌ ಪ್ರಕರಣಕ್ಕೆ ಹೈ ಕೋರ್ಟ್‌ ತಡೆ ನೀಡಿದೆ.

ಬೆಂಗಳೂರು ಗ್ರಾಮಾಂತರ ವಿಭಾಗದ ಕುಂಬಳಗೋಡು ಪೊಲೀಸ್‌ ಠಾಣೆಯಲ್ಲಿ ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗದ ಚನ್ನಪಟ್ಟಣ ಘಟಕದ ಚಾಲಕ ವಿಜಯಕುಮಾರ್‌ ಮತ್ತು ನಿರ್ವಾಹಕ ಶಿವಕುಮಾರ್‌ ಎಂಬುವರ ವಿರುದ್ಧ ಬೈಕ್‌ ಸವಾರರೊಬ್ಬರು ಎಫ್‌ಐಆರ್‌ (360/2022) ದಾಖಲಿಸಿದ್ದರು.

ಈ ಸಂಬಂಧ ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ಅವರ ಮೂಲಕ ಚಾಲಕ ಮತ್ತು ನಿರ್ವಾಹಕರು ಹೈ ಕೋರ್ಟ್‌ ಮೆಟ್ಟಿಲೇರಿದ್ದರು.

ಕರ್ನಾಟಕ ಹೈ ಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು.

ಇಂದು (ಜ.16) ಹೈ ಕೋರ್ಟ್‌ನ 14ನೇ ಹಾಲ್‌ನಲ್ಲಿ ಚಾಲಕ ಮತ್ತು ನಿರ್ವಾಹಕರು ಹೂಡಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ ಚಾಲಕ ಮತ್ತು ನಿರ್ವಾಹಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಿದೆ.

ಬೈಕ್‌ ಸಾವರ ಕೊಟ್ಟ ದೂರು ಏನು?: ಕಳೆದ 19 ಡಿಸೆಂಬರ್‌ 2022ರಂದು ರಾತ್ರಿ 8 ಗಂಟೆ ಸುಮಾರಿಗೆ ಕುಂಬಳಗೋಡು ಪೊಲೀಸ್‌ ಠಾಣೆಗೆ ಹೋದ ಬೈಕ್‌ ಸವಾರ ನಟರಾಜು ಎಂಬುವರು 17 ಡಿಸೆಂಬರ್‌ 2022ರಂದು ಬೆಳಗ್ಗೆ ಸುಮಾರು 11.30ರಲ್ಲಿ ಹೆಜ್ಜಾಲದಿಂದ – ಕೆಂಗೇರಿ ಕಡೆಗೆ ನಾನು ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಸ್‌ನಿಲ್ಲಿಸಿ ಬಂದು ನನ್ನ ಮೇಲೆ ಹಲ್ಲೆ ಏಕಾಏಕಿ ಹಲ್ಲೆ ಮಾಡಿದರು.

ಅಲ್ಲದೆ ಸರಿಯಾಗಿ ಬೈಕ್‌ ಓಡಿಸಿಕೊಂಡು ಹೋಗು ಎಂದು ಹೇಳಿ ನಿಂದಿಸಿದರು. ಹಲ್ಲೆ ಮಾಡಿದ ವೇಳೆ ನನ್ನ ಬಳಿ ಇದ್ದ 50 ಸಾವಿರ ರೂಪಾಯಿಯು ಕಾಣೆಯಾಗಿದೆ. ಇವರಿಂದ ನನ್ನ ಮೇಲೆ ಬಸ್‌ನಲ್ಲಿದ್ದ ಪ್ರಯಾಣಿಕರೂ ಹಲ್ಲೆ ಮಾಡಿದ್ದಾರೆ ಹೀಗಾಗಿ ಚಾಲಕ ನಿರ್ವಾಹಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜನರುಗಿಸಬೇಕು ಎಂದು ದೂರು ನೀಡಿದ್ದರು.

ಈ ದೂರಿನ ಸಂಬಂಧ ಹೈ ಕೋರ್ಟ್‌ ಮೇಟ್ಟಿಲೇರಿದ ಚಾಲಕ ಮತ್ತು ನಿರ್ವಾಹಕರ ಪರ ವಕೀಲರಾದ ಎಚ್‌.ಬಿ.ಶಿವರಾಜು ಅವರು ವಾದ ಮಂಡಿಸಿದರು. ಈ ವೇಳೆ ನಮ್ಮ ಕಕ್ಷಿದಾರರು ದೂರುದಾರ ನಟರಾಜ್‌ ಅವರ ಮೇಲೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ. ದೂರುದಾರರು ಸುಳ್ಳು ಹೇಳಿದ್ದಾರೆ. ಅವರೇ ಬಸ್ ಮುಂದೆ ಬೈಕ್‌ಅನ್ನು ಅಡ್ಡಾದಿಡ್ಡಿ ಓಡಿಸಿಕೊಂಡು ಹೋಗುತ್ತಿದ್ದರಿಂದ ನಮಗೆ ತೊಂದರೆ ಆಗುತ್ತಿದೆ ಸರಿಯಾಗಿ ಓಡಿಸಿಕೊಂಡು ಹೋಗು ಎಂದು ಹೇಳಿದ್ದಾರೆ.

ನಮ್ಮ ಕಕ್ಷಿದಾರರು ಬುದ್ಧಿ ಹೇಳಿದ್ದಕ್ಕೆ ಕುಪಿಗೊಂಡ ಬೈಕ್‌ ಸಾವರ ನಟರಾಜ್‌ ಅವರೇ ಬಸ್‌ಅನ್ನು ಮಾರ್ಗಮಧ್ಯೆ ತಡೆದು ನಿಲ್ಲಿಸಿ ಬಸ್‌ ಒಳಗೆ ಬಂದು ಚಾಲಕ ನಿರ್ವಾಹಕರಿಗೆ ಹಲ್ಲೆ ಮಾಡಿದ್ದಾರೆ. ಇದರಿಂದ ಬಸ್ಸಲ್ಲಿ ಇದ್ದ ಪ್ರಯಾಣಿಕರು ನಟರಾಜ್‌ಗೆ ಬುದ್ದಿಹೇಳಿ ಕಳುಹಿಸಿದ್ದಾರೆ. ಹೀಗಾಗಿ ನಮ್ಮ ಕಕ್ಷಿದಾರರಾದ ಚಾಲಕ ಮತ್ತು ನಿರ್ವಾಹಕರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು ಈ ಎಫ್‌ಐಆರ್‌ಗೆ ತಡೆ ನೀಡಬೇಕು ಎಂದು ವಾದ ಮಂಡಿಸಿದರು.

ಈ ರೀತಿಯ ಪ್ರಕರಣಗಳನ್ನು ಎದುರಿಸುತ್ತಿರುವ ನಾಲ್ಕೂ ನಿಗಮಗಳ ಯಾವುದೇ ಘಟಕದ ಚಾಲಕ ನಿರ್ವಾಹಕರು ಬಂದು ಪ್ರಕರಣದ ವಿವರ ನೀಡಿದರೆ ಈ ಆ ಬಗ್ಗೆ ಪರಿಶೀಲಿಸಿ ಹೈಕೋರ್ಟ್‌ಗೆ  ಮೇಲ್ಮನವಿ ಸಲ್ಲಿಸುವ ಮೂಲಕ ನೌಕರರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ.

l ಎಚ್‌.ಬಿ.ಶಿವರಾಜು, ಸುಪ್ರೀಂ- ಹೈ ಕೋರ್ಟ್‌ ವಕೀಲರು

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ