NEWSನಮ್ಮಜಿಲ್ಲೆಸಂಸ್ಕೃತಿ

ಮಲೆ ಮಹದೇಶ್ವರ ಬೆಟ್ಟ: ಐದು ದಿನದಲ್ಲಿ 2.70 ಕೋಟಿ ರೂ. ಹೆಚ್ಚು ಆದಾಯ ಸಂಗ್ರಹ

ಶಿವರಾತ್ರಿ ಜಾತ್ರೆಗೆ ಮಲೆ ಮಾದಪ್ಪನ ಸನ್ನಿಧಿಗೆ ಆಗಮಿಸಿದ ಲಕ್ಷಾಂತರ ಭಕ್ತರು

ವಿಜಯಪಥ ಸಮಗ್ರ ಸುದ್ದಿ
  • ನಾನಾ ಹರಕೆ ಸೇವೆಗಳಿಂದ ಹರಿದು ಬಂತು ಕೋಟ್ಯಂತರ ರೂ.

ಹನೂರು: ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಆಗಮಿಸಿದ ಭಕ್ತರು ನಾನಾ ಉತ್ಸವಗಳ ಹರಕೆ ಪೂರೈಸಿದ್ದು, ಲಾಡು ಸಹಿತ ಪ್ರಸಾದ ಖರೀದಿ ಹಾಗೂ ಇತರೆ ಸೇವೆಗಳ ಮೂಲಕ ಒಟ್ಟು 2.70 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ.

ಮಾದೇಶ್ವರನ ದರ್ಶನ ಪಡೆಯಲು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಶಿವರಾತ್ರಿ ಜಾತ್ರೆಯ ಅವಧಿಯಲ್ಲೇ ಅಂದರೆ ಐದು ದಿನದಲ್ಲೇ ಇಷ್ಟೊಂದು ಪ್ರಮಾಣದ ಆದಾಯ ಪ್ರಾಧಿಕಾರಕ್ಕೆ ಹರಿದು ಬಂದಿದೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.17 ರಿಂದ ಫೆ.21 ವರೆಗೆ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ತಂಡೋಪ ತಂಡವಾಗಿ ಹಾಗೂ ಕಾಲ್ನಡಿಗೆಯಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದಿದ್ದಾರೆ ಎಂದು ಪ್ರಾಧಿಕಾರದ ಅಧಿಕಾರಿಗಳು ಅಂದಾಜಿಸಿದ್ದಾರೆ.

ಈ ಭಕ್ತರ ಪೈಕಿ ಲಕ್ಷಕ್ಕೂ ಹೆಚ್ಚು ಮಂದಿ ನಾನಾ ಉತ್ಸವಗಳಲ್ಲಿ ಪಾಲ್ಗೊಂಡು ಮಾಯ್ಕಾರ ಮಾದಪ್ಪನಿಗೆ ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ನೆರೆಯ ತಮಿಳುನಾಡಿನಿಂದಲೂ ಭಕ್ತರು ಆಗಮಿಸಿದ್ದರು. ಇವರಲ್ಲಿ ಸಾಕಷ್ಟು ಮಂದಿ ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟಪೋತ್ಸವ ಸೇರಿದಂತೆ ಇತರೆ ಸೇವೆಗಳಲ್ಲಿ ಪಾಲ್ಗೊಂಡು ಸ್ವಾಮಿಗೆ ತಮ್ಮ ಹರಕೆ ಕಾಣಿಕೆಗಳನ್ನು ನಾನಾ ರೂಪದಲ್ಲಿ ನೀಡಿದ್ದಾರೆ.

ಮಾದಪ್ಪನ ಆದಾಯದ ಲೆಕ್ಕ: ಜಾತ್ರಾ ಮಹೋತ್ಸವದಲ್ಲಿ ಚಿನ್ನದ ರಥ ಮತ್ತು ಉತ್ಸವಗಳಿಂದ 88,21,257 ರೂ., ನಾನಾ ಸೇವೆಗಳಿಂದ 6,71,700 ರೂ., ಮಿಶ್ರ ಪ್ರಸಾದದಿಂದ 11,56,250 ರೂ., ಮಾಹಿತಿ ಕೇಂದ್ರದಿಂದ 6,16,250 ರೂ., ಪುದುವಟ್ಟು ಸೇವೆ 1,45,072 ರೂ., ವಿಶೇಷ ಪ್ರವೇಶ ಶುಲ್ಕದಿಂದ 54,38,000 ರೂ.

ಲಾಡು ಮಾರಾಟದಿಂದ 92,59,975 ರೂ., ಕಲ್ಲು ಸಕ್ಕರೆ ಮಾರಾಟದಿಂದ 1,08,420 ರೂ., ತೀರ್ಥ ಪ್ರಸಾದದಿಂದ 2,24,020 ರೂ., ಬಟ್ಟೆ ಬ್ಯಾಗ್ ಮಾರಾಟದಿಂದ 1,49,670 ರೂ., ಅಕ್ಕಿ ಸೇವೆ 2,64,450 ರೂ. ಹಾಗೂ ಇತರ ಸೇವೆಗಳಿಂದ 1,17,574 ರೂ.ಗಳು ಸೇರಿದಂತೆ ಒಟ್ಟಾರೆ 2,70,72,638 ರೂ. ಆದಾಯ ಸಂಗ್ರಹವಾಗಿದೆ ಎನ್ನುತ್ತಿದೆ ಬೆಟ್ಟದ ಪ್ರಾಧಿಕಾರದ ಮಾಹಿತಿ.

ಶ್ರೀ ಕ್ಷೇತ್ರಕ್ಕೆ ಕಳೆದ 10 ದಿನಗಳಿಂದ ಮಾದಪ್ಪನ ಸನ್ನಿಧಿಗೆ ಸುಮಾರು 10 ಲಕ್ಷ ಮಂದಿ ಭಕ್ತಾದಿಗಳು ಭೇಟಿ ನೀಡಿರುವ ಅಂದಾಜಿದೆ. ಅವರ ಪೈಕಿ ಸಹಸ್ರಾರು ಮಂದಿ ನಾನಾ ಉತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ, ಇದರಿಂದ ಪ್ರಾಧಿಕಾರಕ್ಕೆ 2.70 ಕೋಟಿ ಆದಾಯ ಬಂದಿದೆ.

-ಕಾತ್ಯಾಯಿನಿ ದೇವಿ, ಕಾರ್ಯದರ್ಶಿ, ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ