ಮೈಸೂರು: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸುಮಾರು 10 ಮಂದಿ ಗಾಯಗೊಂಡಿರುವ ಘಟನೆ ನಗರದ ಬನ್ನಿಮಂಟಪದ ಅಗ್ನಿಶಾಮಕ ವಸತಿ ಗೃಹದಲ್ಲಿ ಇಂದು ಬೆಳ್ಳಂಬೆಳಗ್ಗೆ ಸಂಬವಿಸಿದೆ.
ವಸತಿಗೃಹದ ಮನೆಯೊಂದರಲ್ಲಿ ಗ್ಯಾಸ್ ಲೀಕೇಜ್ ಆಗಿದ್ದು, ಬೆಳಗ್ಗೆ ಎದ್ದು ಹಾಲು ಕಾಯಿಸಲು ಬೆಂಕಿ ಹಚ್ಚುವ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ ಅಕ್ಕಪಕ್ಕದ ಮನೆಯವರಿಗೂ ಬೆಂಕಿ ತಗುಲಿ ಭಾರಿ ಹಾಲಿಯಾಗಿದೆ.
ಘಟನೆಯಲ್ಲಿ ಒಂದೇ ಮನೆಯ ನಾಲ್ವರು ಹಾಗೂ ಅಕ್ಕಪಕ್ಕದ 6 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರು ಮಕ್ಕಳಿದ್ದು, ಓರ್ವ 6 ವರ್ಷ ಹಾಗೂ ಇನ್ನೋರ್ವ 10 ವರ್ಷದ ಬಾಲಕನಾಗಿದ್ದಾನೆ. 6 ಮಂದಿ ಗಾಯಳು ಪೈಕಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ದೇಹದ ಕೆಲ ಭಾಗ ಸುಟ್ಟುಹೋಗಿದೆ. [wp-rss-aggregator limit=”1″]
ಗಾಯಗೊಂಡವರನ್ನು ಸಮೀಪದ ಸೇಂಟ್ ಜೋಸೆಫ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರೆಲ್ಲರೂ ವೆಂಟಿಲೆಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಘಟನೆ ಬಗ್ಗೆ ಆಸ್ಪತ್ರೆ ಬಳಿ ನೆರೆದಿದ್ದ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಎನ್.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.