ಹನುಮಾನ್ (ರಾಜಸ್ಥಾನ): ಸಂಯುಕ್ತ ಕಿಸಾನ್ ಮೋರ್ಚ(ರಾಜಕೀಯೆತರ) ರಾಷ್ಟ್ರೀಯ ರೈತ ಮುಖಂಡರ ರಾಜಸ್ಥಾನದ ಹನುಮಾನ್‌ನಲ್ಲಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ದೇಶಾದ್ಯಂತ ರೈತ ಜಾಗೃತಿ ಯಾತ್ರೆ, 50 ಸಾವಿರ ಹಳ್ಳಿಗಳ ರೈತರ ಜಾಗೃತಿ ಮೂಡಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.
ದೇಶದ 18ಕ್ಕೂ ಹೆಚ್ಚು ರಾಜ್ಯಗಳಿಂದ ಆಗಮಿಸಿದ ರೈತ ಮುಖಂಡರು ಸುದೀರ್ಘವಾಗಿ ಚರ್ಚಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಈ ಸಭೆಯಲ್ಲಿ ತೆಗೆದುಕೊಂಡು ನಿರ್ಧಾರ ಬಗ್ಗೆ ಅವರು ವಿವರಿಸಿದ್ದು, ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಅನುದಾನ ಕಡಿಮೆ ಮಾಡಿ ನಿರ್ಲಕ್ಷ್ಯ ಮಾಡಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಲಾಯಿತು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಶಾಸನ ಜಾರಿ ಮಾಡಬೇಕು. ಡಾ. ಸ್ವಾಮಿನಾಥನ್ ವರದಿಯಂತೆ ಬೆಲೆ ನಿಗದಿಯಾಗಬೇಕು.
ದೇಶದ ರೈತರ ಎಲ್ಲ ಕೃಷಿ ಸಾಲ ಮನ್ನ ಮಾಡಿ ಋಣ ಮುಕ್ತಿಗೂಳಿಸಬೇಕು. ವಿದ್ಯುತ್ ಖಾಸಗಿಕರಣ ಬಿಲ್ ವಾಪಸ್ ಪಡೆಯಬೇಕು. ಕಬ್ಬಿನ ಎಫ್ ಆರ್ ಪಿ ಕನಿಷ್ಠ ದರ ಸಕ್ಕರೆ ಇಳುವರಿ 9.5ಕ್ಕೆ ಇಳಿಸಬೇಕು ದರ ಟನ್‌ಗೆ 3500 ರೂ.ಗೆ ಏರಿಕೆ ಮಾಡಬೇಕು,
ದೇಶಾದ್ಯಂತ ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿ ಭೂ ಸ್ವಾಧೀನ ಪ್ರಕ್ರಿಯೆ ತಡೆಯಾಕಬೇಕು. ಪ್ರಧಾನಿ ಫಸಲ್ ಭೀಮಾ ಯೋಜನೆ ತಿದ್ದುಪಡಿ ಮಾಡಬೇಕು. ದೇಶದ ಕೃಷಿ ಕ್ಷೇತ್ರದ ಮೇಲೆ ಅಪಾರ ಕೆಟ್ಟ ಪರಿಣಾಮ ಬೀರುತ್ತಿರುವ, ವಿಶ್ವ ವ್ಯಾಪಾರ ಒಪ್ಪಂದದಿಂದ ಕೇಂದ್ರ ಸರ್ಕಾರ ಹೊರಗೆ ಬರಬೇಕು ಎಲ್ಲಪೂ ರೈತರಿಗೆ ಫಲಪ್ರದವಾಗುವವೆಗೂ ಹೋರಾಟ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಲಾಯಿತು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ರಾಜಸ್ಥಾನದ ಹನುಮಾನ್‌ನಲ್ಲಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಪಂಜಾಬ್‌ನ ಜಗಜಿತ್ ಸಿಂಗ್ ಧಲೈವಾಲ್, ಮಧ್ಯಪ್ರದೇಶದ ಶಿವಕುಮಾರ್ ಕಕ್ಕಜಿ, ಕರ್ನಾಟಕದ ಕುರುಬೂರು ಶಾಂತಕುಮಾರ್, ಕೇರಳದ ಕೆ.ವಿ.ಬಿಜ್ಜು, ಹರಿಯಾಣದ ಅಭಿಬಿಮನ್ಯುಕೂಹರ್, ತಮಿಳುನಾಡಿನ ಎ.ಎಸ್. ಬಾಬು, ಹರಿಯಾಣದ ಆತ್ಮರಾಂ, ಮಧ್ಯಪ್ರದೇಶ್ ರಾಹುಲ್, ಮಹಾರಾಷ್ಟ್ರದ ಶಂಕರ್ ದಾರಿಕರ್, ಪರಶುರಾಮ್, ರಾಜಸ್ಥಾನ, ಉತ್ತರ ಪ್ರದೇಶ್ ಇನ್ನು ಮುಂತಾದ ರಾಜ್ಯಗಳ ರೈತ ಮುಖಂಡರು ಭಾಗವಹಿಸಿದ್ದರು.