NEWSನಮ್ಮಜಿಲ್ಲೆ

ಸಾರಿಗೆ ಸಚಿವರ ಖಾಸಗಿ ಕಾರಿಗೆ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಡೀಸೆಲ್‌: ಕಾರಣ ಕೇಳಿ ಡಿಪೋ ಸಿಬ್ಬಂದಿಗೆ ಮಾತ್ರ ನೋಟಿಸ್‌

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಳಗಾವಿ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಕಾರಿಗೆ ಬೆಳಗಾವಿಯ ಕೆಎಸ್‌ಆರ್‌ಟಿಸಿ ಡಿಪೋ ಒಂದರ ಸಿಬ್ಬಂದಿ 40 ಲೀಟರ್‌ ಡೀಸೆಲ್‌ ಹಾಕಿದ ಸಂಬಂಧ ಆ ಸಿಬ್ಬಂದಿಗೆ ಮಾತ್ರ ಕಾರಣ ಕೇಳಿ ನಿಮ್ಮ ಮೇಲೆ ಶಿಸ್ತು ಕ್ರಮ ಏಕೆ ಜರುಗಿಸಬಾರದು ಎಂದು ನೋಟಿಸ್‌ ಜಾರಿಮಾಡಲಾಗಿದೆ.

ಆದರೆ, ಇಲ್ಲಿ ವಿಪರ್ಯಾಸವೆಂದರೆ ನೋಟಿಸ್‌ ನೀಡುರುವ ಆ ಡಿಪೋ ವ್ಯವಸ್ಥಾಪಕರೆ ಅಲ್ಲಿನ ಸಿಬ್ಬಂದಿ ಎಸ್‌ಡಿಎ ಕಿಶೋರ್‌ಗೆ ಸಚಿವರ ಖಾಸಗಿ ಕಾರಿಗೆ ಡೀಸೆಲ್‌ ಹಾಕು ಎಂದು ಹೇಳಿದ್ದರು. ಆ ಸುದ್ದಿ ವಿಡಿಯೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಕ್ಕೆ ಹೆದರಿದ ಡಿಎಂ ಈಗ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ. ಇದು ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರಸಿದಂತ್ತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಡೆದಿರುವುದಿಷ್ಟು: ಸಚಿವ ಲಕ್ಷ್ಮಣ ಸವದಿ ಅವರು ಕೆಎಸ್‌ಆರ್‌ಟಿಸಿ ಡಿಪೋ ಬಳಿಯೇ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಆ ವೇಳೆ ಸಚಿವರ ಖಾಸಗಿ ಕಾರು ಚಾಲಕ ನಮ್ಮ ಕಾರಿಗೆ ಡೀಸೆಲ್‌ ಹಾಕಿಸಬೇಕು ಪೆಟ್ರೋಲ್‌ ಬಂಕ್‌ ಎಲ್ಲಿದೆ ಎಂದು ಕೇಳಿದ್ದಾನೆ. ಆ ವೇಳೆ ಇದು ಸಚಿವರ ಕಾರಲ್ಲವೇ ನೀವು ಪೆಟ್ರೋಲ್‌ ಬಂಕ್‌ಗೆ ಏಕೆ ಹೋಗುತ್ತೀರಿ ನಮ್ಮ ಡಿಪೋನಲ್ಲೇ ಡೀಸೆಲ್‌ ಹಾಕುತ್ತೇವೆ ಬನ್ನಿ ಎಂದು ಕರೆದು ಡಿಪೋದ ಕಿರಿಯ ಸಹಾಯಕ ಕಿಶೋರ್‌ ಡೀಸೆಲ್‌ ಹಾಕಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಇಲ್ಲಿ ಡಿಪೋ ವ್ಯವಸ್ಥಾಪಕರ ಅನುಮತಿ ಇಲ್ಲದೆ ಕಿಶೋರ್‌ ಡೀಸೆಲ್‌ ಹಾಕಿದ್ದಾರಾ? ಎಂಬ ಅನುಮಾನ ಈಗ ಸಾಮಾನ್ಯರನ್ನು ಕಾಡುತ್ತಿದೆ. ಇನ್ನೂ ವಿಚಿತ್ರವೆಂದರೆ, ಡಿಪೋ ವ್ಯವಸ್ಥಾಪಕರು ಈಗ ಕಿಶೋರ್‌ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದು, ನೋಟಿಸ್‌ ಬೇರೆ ನೀಡಿದ್ದಾರೆ. ಇದು ಬೇಲಿಯೇ ಎದ್ದು ಹೊಲ ಮೇದಂತೆ. ಇಲ್ಲಿ ಮೇಲಧಿಕಾರಿಯನ್ನು ಹೊಣೆ ಮಾಡುವ ಬದಲು ಆ ಮೇಲಧಿಕಾರಿಯಿಂದಲೇ ಬೆಳಗಾವಿಯ ಕೆಎಸ್‌ಆರ್‌ಟಿಸಿ ಡಿಸಿ ನೋಟಿಸ್‌ ಕೊಡಿಸಿರುವುದು ಇನ್ನು ಹಲವು ಅನುಮಾನ ಹುಟ್ಟುಹಾಕಿದೆ.

ಈ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಫೋನ್‌ ಮೂಲಕ ಮಾತನಾಡಿದ ಕೆಎಸ್‌ಆರ್‌ಟಿಸಿಯ ಬೆಳಗಾವಿ ಡಿಸಿ ಮಹದೇವ ಮುಂಜಿ, ನಮ್ಮ ಸಿಬ್ಬಂದಿ ಹೀಗೆ ನಡೆದುಕೊಳ್ಳಬಾರದಿತ್ತು. ಈ ರೀತಿ ಮಾಡಿರುವುದಕ್ಕೆ ಅವರಿಗೆ ನೋಟಿಸ್‌ ನೀಡಲಾಗಿದೆ. ಮುಂದೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ ಸಚಿವರ ಕಾರು ಚಾಲಕನ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತೀರಿ ಮತ್ತು ಡಿಪೋ ಮ್ಯಾನೇಜರ್‌ ವಿರುದ್ಧ ಏನು ಕ್ರಮ ಜರುಗಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರ ನೀಡದೆ ಮೌನವಾದರು.

ಆದರೂ ಬಿಡದೇ ಮರು ಪ್ರಶ್ನೆ ಮಾಡಿದ್ದಕ್ಕೆ ಆತ ಖಾಸಗಿ ಕಾರು ಚಾಲಕ ಆತನ ವಿರುದ್ಧ ಕ್ರಮ ಜರುಗಿಸಲ ನಮಗೆ ಸಾಧ್ಯವಿಲ್ಲ. ಜತೆಗೆ ಈಗ ಅವರು ಡೀಸೆಲ್‌ ಹಾಕಿಸಿಕೊಂಡಿದಕ್ಕೆ 3 ಸಾವಿರ ರೂ.ಗಳನ್ನು ಪಾವತಿ ಮಾಡಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.

ಇನ್ನು ಡಿಸಿಎಂ ಸವದಿ ಅವರು ತಮ್ಮ ಕಾರು ಚಾಲಕನ ಪರವಾಗಿಯೇ ಮಾತನಾಡಿದ್ದು, ಅವರು ಪೆಟ್ರೋಲ್‌ ಬಂಕ್‌ ಎಲ್ಲಿದೆ ಎಂದು ವಿಚಾರಿಸಿದ್ದಾರೆ. ಈ ವೇಳೆ ಡಿಪೋ ಸಿಬ್ಬಂದಿಯೇ ಕರೆದು ಡೀಸೆಲ್‌ ಹಾಕಿದ್ದಾರೆ. ಈ ಸಂಬಂಧ ನಾವು ಕೂಡ ಕೆಎಸ್‌ಆರ್‌ಟಿಸಿ ಡಿಸಿಗೆ ಸೂಚನೆ ನೀಡಿದ್ದು, ಕ್ರಮ ಜರುಗಿಸುವಂತೆ ಹೇಳಿರುವುದಾಗಿ ತಿಳಿಸಿದ್ದಾರೆ.

ಜತೆಗೆ ನಮಗೆ 3 ಸಾವಿರ ರೂ. ಕೊಟ್ಟು ಡೀಸೆಲ್‌ ಹಾಕಿಸಲಾರದಷ್ಟು ದುರ್ಗತಿ ಬಂದಿಲ್ಲ. ಅಂತ ಕೀಳುಮಟ್ಟಕ್ಕೂ ಇಳಿದಿಲ್ಲ ಎಂದು ಸವದಿ ಸಮಜಾಯಿಷಿಕೊಟ್ಟಿದ್ದಾರೆ. ಆದರೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳುವ ಅಧಿಕಾರಿಗಳು ಮತ್ತು ಸಚಿವರು ಮಾಡುವ ತಪ್ಪು ತಪ್ಪೇ ಅಲ್ಲ ಎಂಬಂತೆ ಮುಚ್ಚಿಹಾಕುತ್ತಾರೆ. ಆದರೆ ಬಡಪಾಯಿ ಡಿಪೋ ಎಸ್‌ಡಿಎಗೆ ಮಾತ್ರ ಕಾರಣ ಕೇಳಿ ನೋಟಿಸ್‌ ನೀಡುತ್ತಾರೆ. ಇದೇ ಪ್ರಜಾಪ್ರಭುತ್ವ ಅಲ್ವೇ!?.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ