ಬೆಂಗಳೂರು: ಇದು ಒಕ್ಕೂಟ ಸರ್ಕಾರ ಬಿಡುಗಡೆ ಮಾಡಿರುವ ನವೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹದ ಮಾಹಿತಿ. ಪ್ರತಿ ತಿಂಗಳು ಜಿಎಸ್ ಟಿ ಸಂಗ್ರಹಣೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಆದರೆ ಅದೇ ಪ್ರಮಾಣದಲ್ಲಿ ಒಕ್ಕೂಟ ಸರ್ಕಾರದ ಅನುದಾನಗಳು ಕರ್ನಾಟಕಕ್ಕೆ ವಾಪಾಸ್ ಬರುತ್ತಿದೆಯೇ ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, 21 ಕೋಟಿ ಜನಸಂಖ್ಯೆಯ ಒಂದು ರಾಜ್ಯ ನವೆಂಬರ್ ನಲ್ಲಿ ಸಂಗ್ರಹಿಸಿದ ಜಿಎಸ್ ಟಿ 5528 ಕೋಟಿ ರೂಪಾಯಿ! ಇದೇ ತಿಂಗಳಲ್ಲಿ ಕರ್ನಾಟಕ ಸಂಗ್ರಹಿಸಿರುವ ಜಿಎಸ್ ಟಿ 6915 ಕೋಟಿ ರೂಪಾಯಿ. ಅನುದಾನಗಳ ಹಂಚಿಕೆಯಲ್ಲಿ ಜನಸಂಖ್ಯೆಯೂ ಒಂದು ಮುಖ್ಯವಾದ ಮಾನದಂಡ. ಅಲ್ಲಿಗೆ ಕರ್ನಾಟಕದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಅರ್ಥವಾಯಿತಾ ಎಂದು ಪ್ರಶ್ನಿಸುವ ಮೂಲಕ ಕೇಂದ್ರ ರಾಜ್ಯ ಸರ್ಕಾರಗಳ ನಡೆಯ ವಿರುದ್ಧ ಕಿಡಿಕಾರಿದ್ದಾರೆ.
ಇದು ಒಕ್ಕೂಟ ಸರ್ಕಾರ ಬಿಡುಗಡೆ ಮಾಡಿರುವ ನವೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹದ ಮಾಹಿತಿ. ಪ್ರತಿ ತಿಂಗಳು ಜಿಎಸ್ ಟಿ ಸಂಗ್ರಹಣೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಆದರೆ ಅದೇ ಪ್ರಮಾಣದಲ್ಲಿ ಒಕ್ಕೂಟ ಸರ್ಕಾರದ ಅನುದಾನಗಳು ಕರ್ನಾಟಕಕ್ಕೆ ವಾಪಾಸ್ ಬರುತ್ತಿದೆಯೇ? (1/2) pic.twitter.com/p24ZKGZ17S
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) December 2, 2020
En madodu koty kaili kajjaya kotta agide